SearchBrowseAboutContactDonate
Page Preview
Page 17
Loading...
Download File
Download File
Page Text
________________ ಪಂಚಸೂತ್ರ ಭಾವಪ್ರಕಾಶಿಕಾ ಮನೆವರಂಹರಿಹರಾದಯಏವದೃಷ್ಟಾರ ಲಿ ದ್ರಪ್ರೇಷುಯೇಷುಹೃದಯಂತ್ರಯಿತೋಷಮೇತಿ | ಅಲ್ಲಿ ಕಿಂವೀಕ್ಷಿತೇನಭವತಾಭುವಿಯೇನನಾಸ್ಯ... | 21 || 21. ತಾ|| ಓ ಭಗವಂತನೇ ! ನಿನ್ನನ್ನು ದರ್ಶನಮಾಡುವುದಕ್ಕಿಂತಲೂ ಮುಂಚಿತವಾಗಿ ಹರಿಹರಾದಿ ದೇವರುಗಳನ್ನು ದರ್ಶನ ಮಾಡುವುದೇ ಶ್ರೇಷ್ಠ ವೆಂದು ನಾನು ತಿಳಿಯುತ್ತೇನೆ. ಜನಭಕ್ತರಾದ ಮಾನತುಂಗಾಚಾರ್ಯರು | ಜಿನದರ್ಶನಕ್ಕಿಂತಲೂ ಹರಿಹರಾದಿ ದೇವರುಗಳ ದರ್ಶನವೇ ಶ್ರೇಷ್ಠವೆಂದು | ತಿಳಿಯುವುದು, ಸಮ್ಮಗ್ಲರ್ಶನ ವಿರೋಧವಾಯಿತಲ್ಲ ಅಂದರೆ ವಿರೋಧವಲ್ಲ. ಹೇಗೆಂದರೆ ರಾಗದ್ವೇಷ ಕ್ರೋಧಗಳೆಂಬ ಕಷಾಯಗಳನ್ನು ಸೂಚಿಸುವ ಭಯಂಕರ ವಾದ ಆಕಾರವುಳ್ಳವರಾಗಿಯೂ ಶಸ್ತ್ರಧಾರಣವುಳ್ಳವರಾಗಿಯೂ ಇರುವ ದೇವರುಗಳನ್ನು ಮೊದಲು ದರ್ಶನ ಮಾಡಿ ನಂತರ ದಯಾಶಾಂತ್ಯಾದಿ ಗುಣ ಗಳಿಗೆ ಸಮುದ್ರದಂತಿರುವ ತಮ್ಮ ಪರಮಶಾಂತದಿವಾಕಾರವನ್ನು ದರ್ಶನ ಮಾಡಿದರೆ ಸಂತಾಪವನ್ನು ಹೊಂದಿದ್ದವನು ಅಮೃತಕಡಲಿನಲ್ಲಿ ಮುಳುಗಿ ಆನಂದಪಡುವಂತ ಆನಂದವು ಉಂಟಾಗುತ್ತಾದ್ದರಿಂದ ಬೇರೆ ದೇವರುಗಳ ದರ್ಶನಕ್ಕೂ ವೀತರಾಗ ಪರಮಾತ್ಮನಾದ ತಮ್ಮ ದರ್ಶನಕ್ಕೂ ಇರುವ ತಾರ ತಮ್ಮವು ಹರಿಹರಾದಿ ದೇವರುಗಳ ದರ್ಶನಾನಂತರವೇ ಸ್ಪುಟವಾಗಿ ತರು ಇದೆ. ಲೋಕದಲ್ಲಿ ಕಷ್ಟವನ್ನು ಅನುಭವಿಸಿದವನಿಗಲ್ಲವೇ ಸುಖದ ಅತಿಶಯವು ತಿಳಿಯುತ್ತದೆ ? ಸುಖದ ಶ್ರೇಷ್ಠತೆಯನ್ನು ತಿಳಿಯುವದಕ್ಕೆ ಕಷ್ಟವನ್ನು ಅನುಭವಿಸಿದ್ದು ಕಾರಣವಾಗುತ್ತಾದ್ದರಿಂದ ಗುಣವೆನಿಸುತ್ತದೆ. ಹಾಗೆ ಹರಿ ಹರಾದಿ ದೇವರುಗಳ ದರ್ಶನವೂ ಕೂಡ ತಮ್ಮ ದರ್ಶನಾನಂದ ರೂಪವಾದ ಅತಿಶಯಫಲವನ್ನು ತಿಳಿಯುವುದಕ್ಕೆ ಕಾರಣವಾದ್ದರಿಂದ ತನಗೆ ಶ್ರೇಷ್ಠವಾಯಿ ತೆಂದು ಸೂತ್ರಕತೃವಾದ ಮಾನತುಂಗಾಚಾರ್ಯರ ಅಭಿಪ್ರಾಯವು, ಮತ್ತು ನಿಮ್ಮನ್ನು ದರ್ಶನವರಾಡುವುದರಿಂದ ಕೂರಾಕಾರದೇವತೆಗಳಲ್ಲಿ ಮತ್ತೊಂದು | ಜನ್ಮದಲ್ಲಿ ಕೂಡ ಮನಸ್ಸು ಪ್ರೀತಿಯನ್ನು ಹೊಂದದು. ಆಕೆ ಭಕ್ತಾಮರಣೋತ್ರ ಕ್ಷೀಣಾಂಶತಾನಿಶತಶೋಜನಯಂತಿಪುತ್ರಾವತಿ ನ್ಯಾನ್ಯಾಸುತಂದುಸಮಂಜನನೀ ಪ್ರಸೂತಾ |. ಸರ್ವಾದಿಶೋದಧತಿಭಾನಿಸಹಸ್ರರಶ್ಮಿಂ ಪ್ರಾಚ್ಯವದಿಗೂ ನಯತಿಸ್ಪುರದಂಶುಜಾಲಂ | 22 || 22. ತಾ|| ಓ ಭಗವಂತನೇ ! ಲೋಕದಲ್ಲಿ ಪ್ರತರನ್ನು ಹಂತಹ ಸ್ತ್ರೀಯರು ಅನೇಕರಿದ್ದಾರೆ, ತಮ್ಮ ತಾಯಿಯಂತೆ ತಮಗೆ ಸಮಾನನಾದ ಪುತ್ರನನ್ನು ಯಾವ ಸ್ತ್ರೀಯ ಪಡೆಯಲಿಲ್ಲ. ಆದುದರಿಂದ ತಮ್ಮ ತಾಯಿಯೇ ಜಾತಿಯಲ್ಲಿ ಜಗತ್ತೂಳು ಪರಮಧನ್ಯಳಂದಭಿಪ್ರಾಯವು, ಮತ್ತು ತಮ್ಮ ತಾಯಿಯ ಪುಣ್ಯವಿಶೇಷವು ಮತ್ತಾವ ಸೀಗೂ ಬರಲಾರದೆಂಬ ವಿಷಯದಲ್ಲಿ ದೃಷ್ಟಾಂತವೇನೆಂದರೆ ಸರ್ವದಿಕ್ಕುಗಳಲ್ಲಿಯೂ ನಕ್ಷತ್ರಗಳು ಪ್ರಕಾಶಿಸುತ್ತಿವೆ. ಆದರೆ ಸೂರ್ಯನು ಉದಿಸುವುದು ಪೂರ್ವದಿಕ್ಕಿನಲ್ಲೇ. ಹಾಗೆಯೇ ಕೇವಲ ಜ್ಞಾನವೆಂಬ ತೇಜಸ್ಸಿನಿಂದ ಸರ್ವಲೋಕಾಲೋಕಪ್ರಕಾಶಕರಾಗಿ ಜಿನ ಸೂರ್ಯ ನೆನಿಸಿದ ತಮ್ಮನ್ನು ಪೂರ್ವದಿಕ್ಕಿನಂತೆ ಮಹಾ ದೇವಿಯರಾದ ಮರುದೇವಿ ಹೊರತು ಮತ್ಯಾವ ಸ್ತ್ರೀಯೂ ತಮ್ಮಂತಹ ಮಗನನ್ನು ಪಡೆಯಲು ಯೋಗ್ಯ ಳಾಗಲಿಲ್ಲವೆಂದಭಿಪ್ರಾಯವು. 1840 ಶ್ಯಾಮಾನನಂತಿನುನಯಃ ಪರಮಂಪುಮಾಂಸ ತಿಂದು ಮಾದಿತ್ಯವರ್ಣಮಮಲಂತಮಸಃಪುರಸ್ತಾತ್ | ಶಿವಲಿ) - ತ್ಯಾಮೇನಸಮ್ಮಗುಪಲಭ್ಯ ಜಯಂತಿನ್ನುತುಂ ? ಪ ನಾನ್ಯವಃ ಶಿವಪದಸ್ಯಮುನೀಂದ್ರ ಪಂಥಾಃ | 23 | 29 23. ತಾಓ ಮುನಿರಾಜನೇ ! ತಮ್ಮನ್ನು ಧ್ಯಾನಶೀಲರಾದ ಮುನಿಗಳು ಕತ್ತಲೆಯ ಎದುರಿಗೆ ಸೂರ್ಯನು ಪ್ರಕಾಶಿಸಿದರೆ ಹೇಗೋ ಹಾಗೆ ಸಮಸ್ತ ಕತ್ತಲೆಯನ್ನೂ ತೊಲಗಿಸುವ ತೇಜೋರಾಶಿಸ್ವರೂಪನನ್ನಾಗಿಯೂ (ಅಜ್ಞಾನವೆಂಬ ಕತ್ತಲೆಯನ್ನು ತೊಲಗಿಸುವ ಸೂರ್ಯನನ್ನಾಗಿಯೂ), ನಿರ್ಮಲ ಪರಮಾತ್ಮನನ್ನಾಗಿಯ, ಸೂರ್ಯನಿಗೆ ಸಮಾನವಾದ ವರ್ಣ ವುಳ್ಳವನನ್ನಾಗಿಯೂ ತಿಳಿಯುತ್ತಾರೆ. ಹೀಗೆ ಹೇಳುವುದರಿಂದ ಕರ್ಮ ಕ್ಷಯಾರ್ಥವಾಗಿ ಶ್ರೀ ವೃಷಭ ತೀರ್ಥಂಕರರನ್ನು ಧ್ಯಾನಮಾಡುವವರು ಈ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy