SearchBrowseAboutContactDonate
Page Preview
Page 16
Loading...
Download File
Download File
Page Text
________________ Ga : ಭಕ್ತಾವರಸ್ತೋತ್ರ ಇರುವುದು ? ಆ ಕೆಲಸವು ತಮ್ಮ ಮುಖ ಚಂದ್ರಕಾಂತಿಯಿಂದ ಉಂಟಾಗು ತಿರಲು ಈ ಚಂದ್ರ ಸೂರ್ಯರು ವ್ಯರ್ಥವೆಂದಭಿಪ್ರಾಯವು. ಹೇಗೆಂದರೆ ಈ ಜೀವಲೋಕದಲ್ಲಿ ಸಂಪೂರ್ಣವಾಗಿ ಸಕಲ ಬೆಳೆಯೂ ಆಗಿರಲು ನೀರಿನಿಂದ ಭರಿತಗಳಾಗಿ ಭೂಮಿಯ ಹತ್ತಿರಕ್ಕೆ ಬಂದು ಮಳೆಯನ್ನು ಕರೆಯುವುದ ಕೋಸ್ಕರ ಸಿದ್ಧವಾಗಿರುವ ಮೋಡಗಳಿಂದೇನು ಪ್ರಯೋಜನವು ? ಭೂಮಿಯು ಸಂಪೂರ್ಣ ಸಸ್ಯವುಳ್ಳದ್ದಾಗಿರಲು, ಮಳೆ ಬರಬೇಕೆಂದು ಯಾರೂ ಬಯಸುವು ದಿಲ್ಲವಷ್ಟೆ? ಹಾಗೆ ಸಮಸ್ತ ಕತ್ತಲೆಯನ್ನೂ ತಮ್ಮ ಮುಖದ ತೇಜಸ್ಸು ತೊಲಗಿಸಲು ಚಂದ್ರಸೂರ್ಯರು ವ್ಯರ್ಥವೆಂದು ಭಾವವು, ಜ use ಜ್ಞಾನಂ ಯಥಾತ್ಯಯಿನಿಭಾತಿಕತಾವಕಾಶಂ ಬೇರೆ ನೈವಂತಥಾಹರಿಹರಾದಿಷುನಾಯುಕೇಷು | ತೇಜೋಮಹಾಮಣಿಷುಯಾತಿಯಥಾನುಹತ್ವಂ - ಎ ನೈವಂತುಕಾಚಶ ಕಲೇ ಕಿರಣಾಳುಲೇಪಿ... || 20 || ಪಂಚಕ್ಕೋತ ಭಾವಪ್ರಕಾಶಿಕಾ ಕಮಲಕ್ಕೆ ಹೀನಗುಣವುಳ್ಳ ಈ ಚಂದ್ರಬಿಂಬವನ್ನು ಹೇಗೆ ಹೋಲಿಸಲಾದೀತು? ಈ ಲೋಕಪ್ರಸಿದ್ಧನಾದ ಚಂದ್ರನು ಶುಕ್ಲ ಪಕ್ಷದಲ್ಲಿ ದಿನಕ್ರಮದಿಂದ ಅಭಿವೃದ್ಧಿ ಹೊಂದುವನು, ಕೃಷ್ಣ ಪಕ್ಷದಲ್ಲಿ ಕ್ಷಯಿಸುವನು. ತಮ್ಮ ಮುಖಕಮಲ ವಾದರೋ ಸರ್ವಕಾಲದಲ್ಲಿಯ ಉದಯವನ್ನೇ ಹೊಂದಿರುವುದು. ಪ್ರಸಿದ್ದ ಚಂದ್ರನು ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಲಾರನು ಮತ್ತು ಗುಹೆಯ ಮುಂತಾದ ಆವರಣದಿಂದ ಮುಚ್ಚಲ್ಪಟ್ಟ ಸ್ಥಾನದಲ್ಲಿರುವ ಕತ್ತಲೆ ಯನ್ನು ಹೋಗಲಾಡಿಸಲಾರನು, ತಮ್ಮ ಮುಖಕಮಲವನ್ನು ದರ್ಶನವಾಡಿದ ಕೂಡಲೇ ಅಜ್ಞಾನವೆಂಬ ಮೋಹರೂಪವಾದ ಕತ್ತಲೆಯು ತೊಲಗಿ ಹೋಗು ವುದರಿಂದಲೂ, ಬೆಳದಿಂಗಳಿಗಿಂತಲೂ ಅತಿಶಯವಾದ ಕಾಂತಿಯನ್ನು ಎರಚರಿ ವುದರಿಂದಲೂ, ಸರ್ವೋತ್ಕೃಷ್ಟವಾದ ತಮ್ಮ ಮುಖಕಮಲಕ್ಕೆ ಹೀನಗುಣ ವುಳ್ಳ ಚಂದ್ರನ ಹೋಲಿಕೆಯನ್ನು ಹೇಗೆ ಹೇಳಬಹುದು ? ಮತ್ತು ಈ ಲೋಕ ಸಿದ್ದವಾದ ಚಂದ್ರಮುಂಡಲವು ರಾಹುವಿನಿಂದ ನುಂಗಲ್ಪಡುತ್ತದೆ. ಮೋಡ ಗಳಿಂದ ಮುಚ್ಚಲ್ಪಡುತ್ತದೆ ಮತ್ತು ಅಲ್ಪ ಕಾಂತಿಯುಳ್ಳದ್ದಾಗಿದೆ. ತಮ್ಮ ಮುಖಾರವಿಂದವಾದರೂ ಈ ಯಾವ ದೋಷಕ ಆಸ್ಪದವಲ್ಲವಾದ್ದರಿಂದ ಅಪರಿಮಿತಕಾಂತಿಯಿಂದ ಜಗತ್ತನ್ನು ಬೆಳಗುವ ತಮ್ಮ ಮುಖಾರವಿಂದಕ್ಕೆ ಈ ಚಂದ್ರಮಂಡಲ ಸಾವವು ಸರ್ವ ಪ್ರಕಾರದಿಂದಲೂ ಒಪ್ಪದೆಂದಭಿಪ್ರಾಯವು. ಕಿ೦ಶರ್ವರೀಷುಶಶಿನಾಹಿನಿವಸ್ವತಾವಾದ ಯುನ್ಮುಂದುದಳಿತೇಷುತನುಸ್ಸುನಾಥ | ಪcan ಗರದ ನಿಷ್ಟಶಾಲಿವನಶಾಲಿನಿಜೀವಲೋಕೇಶಿಸಲು ಕಾರ್ಯ೦ಕಿಯಜ್ಜಲಧಿರ್ಬಲಭಾರನನ್ನತಿ: || 19 || 19, ತಾ: ಓ ಆದಿ ಜಿನೇಂದ್ರನೇ ! ತಮ್ಮ ಮುಖವೆಂಬ ಚಂದ್ರನ ಕಾಂತಿಗಳಿಂದ ರಾತ್ರಿಕಾಲಗಳಲ್ಲಿಯೂ, ಹಗಲಿನಲ್ಲಿಯೂ, ಸಮಸ್ತ ಕತ್ತಲೆಯ ತೊಲಗಿ ಹೋಗಿ ಸರ್ವದಾ ಲೋಕವು ಪ್ರಕಾಶಿಸುತ್ತಿರುವಾಗ ರಾತ್ರಿ ಕಾಲದಲ್ಲಿ ಚಂದ್ರನಿಂದೇನು ಪ್ರಯೋಜನ ? ಹಗಲಿನಲ್ಲಿ ಸೂರ್ಯನಿಂದೇನು ಪ್ರಯೋಜನ? ಅಂದರೆ ರಾತ್ರಿ ಹಗಲುಗಳೆಂಬ ಎರಡು ಕಾಲಗಳಲ್ಲಿ ಕತ್ತಲೆಯನ್ನು ಹೋಗಲಾಡಿಸುವುದಕ್ಕಲ್ಲವೇ ಚಂದ್ರಸೂರ್ಯರೆಂಬ ಜ್ಯೋತಿಸ್ತುಗಳು 20. ತಾ|| ಓ ಭಗವಂತನೇ ! ಅನಂತಜ್ಞಾನವು ತಮ್ಮಲ್ಲಿ ಆವಿರ್ಭವಿಸಿ ಯಾವಪ್ರಕಾರವಾಗಿ ಪ್ರಕಾಶಿಸುತ್ತಲಿದೆಯೋ ಹಾಗೆ ಹರಿಹರ ಬ್ರಹ್ಮಾದಿದೇವ ರುಗಳಲ್ಲಿ ಪ್ರಕಾಶಿಸುವುದಿಲ್ಲ. ಅಂದರೆ ರಾಗದ್ವೇಷಾದಿ ದೋಷಾಕಾಂತರಾದ ರಿಂದ ಹರಿಹರಾದಿಗಳು ಕೂಡ ತಮ್ಮಂತೆ ಸರ್ವಜ್ಞರಲ್ಲವೆಂದರ್ಥವು. ಹೇಗೆಂದರೆ ಕಾಂತಿಯು ರತ್ನದಲ್ಲಿಯೂ ಇದೆ, ಗಾಜಿನಲ್ಲಿಯೂ ಇದೆ, ರತ್ನದಲ್ಲಿರುವ ಕಾಂತಿಗೆ ಆಶ್ರಯಮೂಲಕವಾಗಿ ಹೇಗೆ ಶ್ರೇಷ್ಠತೆಯುಂಟಾಗುತ್ತದೋ ಹಾಗೆ ಗಾಜಿನ ಚೂರಿನಲ್ಲಿರುವ ಕಾಂತಿಗೆ ಶ್ರೇಷ್ಠತೆಯುಂಟಾಗುವುದಿಲ್ಲ, ಗಾಜೆಂಬ ಆಶ್ರಯವು ಹೀನವಸ್ತುವಾದ್ದರಿಂದ ಅದರಲ್ಲಿರುವ ಕಾಂತಿಯೂ ಹೀನವೆನಿಸಿತು. ರತ್ನವು ಉತ್ಕೃಷ್ಟವಸ್ತುವಾದ್ದರಿಂದ ಅದರಲ್ಲಿರುವ ಕಾಂತಿಯ ಉತ್ಕೃಷ. ವನಿಸಿತು. ಹೀಗೆ ಆಶ್ರಯಮಹಿಮೆಯಿಂದಲ್ಲವೇ ಅಶ್ರಿತ ವಸ್ತುವಿಗೆ ಮಹಿಮ? ಹಾಗೆಯೇ ಸಕಲ ಕರ್ಮಕ್ಷಯದಿಂದ ಪರಮ ನಿರ್ಮಲವೀತರಾಗ ಪರಮಾತ್ಮ ರಾದ ತಮ್ಮನ್ನು ಆಶ್ರಯಿಸಿರುವುದರಿಂದಲೇ ತಮ್ಮ ಜ್ಞಾನವು ಅನಂತ ವಾಗಿಯೂ ನಿತ್ಯವಾಗಿಯೂ ಸರ್ವೊತ್ಯಷ್ಟವಾಯಿತೆಂದು ಮುಖ್ಯಾಧಿ ಪ್ರಾಯವು.
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy