________________ ಪಂಚಸೋತ ಭಾವಪ್ರಕಾಶಿಕಾ ಲೋಕದಲ್ಲಿ ನಿರ್ಲೇಪವಾದ ತಾವರೆ ಎಲೆಯಲ್ಲಿ ಬಿದ್ದಿರುವ ನೀರಿನ ಹನಿಗಳು ಮುತ್ತಿನಂತೆ ಹೊಳೆಯುವುದಿಲ್ಲವೆ ? ಶುದ್ದ ವಸ್ತು ಸಂಬಂಧದಿಂದ ಸಂಬಂಧಿಸಿದ ವಸ್ತುವೂ ಕೂಡ ಶುದ್ದ ವಾಗುತ್ತದೆಂದಭಿಪ್ರಾಯವು. ಹೀಗೆ ನಾನು ಮಾಡುವ ಸ್ತೋತ್ರವು ರಮ್ಯವಲ್ಲದಿದ್ದರೂ ಈ ಸ್ತೋತ್ರಕ್ಕೆ ವಿಷಯರಾದ ಪರಮ ನಿರ್ಮಲ ಮೂರ್ತಿಯರಾದ ತಮ್ಮ ಮಹಿಮೆಯಿಂದ ಸತ್ಪುರುಷರ ಹೃದಯ ವನ್ನು ಆನಂದ ಪಡಿಸುವುದೆಂದಭಿಪ್ರಾಯವು. ಆಸ್ತಾಂತವಸ್ತವನಮಸ್ತ ಸಮಸ್ತ ದೋಷಂ ತೃತ್ಸಂಕಥಾಸಿ ಜಗತಾಂದುರಿತಾನಿ ಹಂತಿ | ದೂರೇಸಹಸ್ರಕಿರಣಃ ಕುರುತೇ ಪ್ರಭೈವ ಪದಾಕರೇ ಸುಜಲಜಾನಿವಿಕಾಸಭಾಂಜಿ ಪಿ | 9 || - 9, ತಾ ಓ ಜಿನಪತಿಯೇ ! ನಿರ್ದೋಷವಾದ ತಮ್ಮ ಸ್ತೋತ್ರವು ಸರ್ವ ಜನಗಳ ಪಾಪಗಳನ್ನು ಪರಿಹರಿಸುವುದೆಂಬ ಮಹಿಮೆಯು ಹಾಗಿರಲಿ ತವಂ ಭವಸಂಬಂಧಿಯರಾದ ಕಥೆಯೂ ಕೂಡ ಹೇಳುವವರಿಗೂ, ಕೇಳುವ ವರಿಗೂ ಸಮಸ್ತ ಪಾಪಗಳನ್ನು ಪರಿಹರಿಸುವುದು. ಇದು ಆಶ್ಚರ್ಯವಲ್ಲವು ಹೇಗೆಂದರೆ ಆಕಾಶದಲ್ಲಿ ಸೂರ್ಯನು ಎಷ್ಟೋ ದೂರದಲ್ಲಿ ಉದಯಿಸುತ್ತಾನೆ ಆ ಸೂರ್ಯಪ್ರಭೆಯು ಭೂಮಿಯಲ್ಲಿ ಸರೋವರಾದಿಗಳಲ್ಲಿರುವ ಕಮಲಗಳನ್ನು ಅರಳಿಸುತ್ತದೆ. ಹಾಗೆ ತಾವೇ ಸೂರ್ಯನು, ತಮ್ಮ ಭವಕಥೆಯೇ ಪ್ರಭೆಯು, ಭವಾತ್ಮರ ಮನಸ್ಸುಗಳೇ ಕಮಲಗಳು, ತಾವು ಲೋಕಾಗ್ರದಲ್ಲಿದ್ದರೂ ತಮ್ಮ ಪುರಾಣ ಚರಿತ್ರವನ್ನು ಕೇಳುವುದರಿಂದಲೇ ಪಾಪಪರಿಹಾರವಾಗುತ್ತದೆಂದಭಿ ಪ್ರಾಯವು. ನಾತ್ಯದ್ಭುತಂ ಭುವನ ಭೂಷಣ ಭೂತನಾಥe. ಭೂತೊರ್ಗುರ್ಭುನಿ ಭವಂತ ನಭಿಷ್ಟು ವಂತಃ | ತುಲ್ಯಾಭವಂತಿ ಭವತೋನನುತೇನ ಕಿಂ ನಾ ಭೂತ್ಯಾಶ್ರಿತಂಯ ಇಹನಾತ್ಮಸಮಂ ಕರೋತಿ | 10 | 10. ತಾ|| ಲೋಕಕ್ಕೆ ಅಲಂಕಾರವಾಗಿರುವಂತಹ, ಸರ್ವ ಸಂಸಾರಿ ಜೀವಿಗಳಿಗೂ ರಕ್ಷಕನಾದಂತಹ ಆದಿತೀರ್ಥಂಕರರೇ ! ತಮ್ಮಲ್ಲಿ ಆವಿರ್ಭವಿಸಿರು ವಂತಹ ಅನಂತ ಜ್ಞಾನಾದಿಗುಣಗಳಿಂದ ತಮ್ಮನ್ನು ಸ್ತುತಿಸುವಂತಹವರು ಭಕ್ಕಾಮರಸ್ತೋತ್ರ ಸಕಲ ಕರ್ಮಕ್ಷಯವನ್ನು ಹೊಂದಿ ತಮ್ಮಂತೆಯೇ ಆವಿರ್ಭವಿಸಿದ ಎಂಟು ಗುಣ ಉಳ್ಳವರಾಗುತ್ತಾರೆಂಬುದು ಅತ್ಯಾಶ್ಚರ್ಯವಲ್ಲ. ಹೇಗೆಂದರೆ ಲೋಕದಲ್ಲಿ ಐಶ್ವರ್ಯಶಾಲಿಯಾದವನು ತನ್ನ ಆತನನ್ನು ಕಾಲಾಂತರದಲ್ಲಿ ತನಗೆ ಸಮಾನನನ್ನಾಗಿಯೇ (ಧನಿಕನನ್ನಾಗಿಯ:) ಮಾಡುತ್ತಾನಲ್ಲವೇ ? ಯಂಚಿ ದುಣವುಳ್ಳ ಈ ಪಾಮರ ಲೋಕದಲ್ಲಿಯೇ ಈ ನ್ಯಾಯವಿರುತ್ತಿರಲು ಸರ್ವ ಗುಣಾಕರರಾದ ತಮ್ಮನ್ನು ಆಶ್ರಯಿಸಿದವನು ತಮ್ಮ ಗುಣಗಳನ್ನು ಹೊಂದು ವುದು ಏನು ಮಹಾಶ್ಚರ್ಯವೆಂದಭಿಪ್ರಾಯವು, ದೃಷ್ಟಾಭವಂತ ಮನಿಮೇಷವಿಲೋಕನೀಯಂ : ನಾನ್ಮತತೋಷಮು ಸಯಾತಿಜನಸ್ಯ ಚಕ್ಷುಃ | ಪೀತ್ಯಾ ಪಯಶೃತಿ ಕರದ್ಯುತಿದುಗ್ಧಸಿಂಧೋಃ ಕಾರಂಜಲಂ ಜಲನಿಧೇರಸಿತುಂಕ ಇಚ್ಚೆತ್ | 11 || 11, ತಾ|| ಓ ಜಿನರಾಜನೇ ! ರಪ್ಪೆಗಳನ್ನು ಮುಚ್ಚದೆ ನೋಡು ವುದಕ್ಕೆ ಯೋಗ್ಯರಾದ ತಮ್ಮ ದರ್ಶನವನ್ನು ವರಾಡಿದ ಈ ಕಣ್ಣು ಮತ್ತಾವು ದರಲ್ಲಿಯೂ ಪ್ರೀತಿ ಪಡುವುದಿಲ್ಲ ಅಂದರೆ ಸರ್ವಲಕ್ಷಣ ಸಂಪನ್ನರಾಗಿಯೂ, ವಜವೃಷಭ ನಾರಾಚಸಂಹನನವೆಂಬ ಪರಮೌವಾರಿಕ ದಿವ್ಯಶರೀರವುಳ್ಳವ ರಾಗಿಯb, ಇರುವ ತಮ್ಮ ಸೌಂದರ್ಯ ದರ್ಶನದಿಂದ ಆನಂದ ಸಮುದ್ರದಲ್ಲಿ ಮುಳುಗಿ ತೇಲುವ ವಿಾನುಗಳಂತಿರುವ ಜನಗಳ ಕಣ್ಣಿಗೆ ಜಗತ್ತಿನಲ್ಲಿ ಇದ ಕ್ಕಿಂತಲೂ ಅತಿಶಯ ಸೌಂದರ್ಯವಸ್ತುವೇ ಇಲ್ಲವಾದ್ದರಿಂದ ತಮ್ಮ ದರ್ಶನ ವನ್ನು ಮಾಡದವರ ನೇತ್ರಗಳೂ ಜನ್ಮವೂ ಕೂಡ ನಿಷ್ಪಲವೆಂದಭಿಪ್ರಾಯವು. ಮತ್ತು ತಮ್ಮ ದರ್ಶನವನ್ನು ಮಾಡಿದ ಪ್ರಾಣಿಗೆ ಮತ್ತೊಂದು ವಸ್ತುವನ್ನು (ಇತರ ದೇವರುಗಳನ್ನು ) ದರ್ಶನ ಮಾಡಬೇಕೆಂಬ ಇಚ್ಛೆಯೇ ಉಂಟಾಗುವುದಿಲ್ಲ ಎಂಬುದು ಯುಕ್ತವೇ ಸರಿ. ಹೇಗೆಂದರೆ ಲೋಕದಲ್ಲಿ ಚಂದ್ರಕಿರಣದಂತೆ ನಿರ್ಮಲವಾದ ಕ್ಷೀರಸಮುದ್ರದ (ಪಂಚಮ ಸಮುದ್ರದ ನೀರನ್ನು ಕುಡಿದ ವನಿಗೆ ಉಪ್ಪು ಸಮುದ್ರದ ನೀರನ್ನು ಕುಡಿಯಬೇಕೆಂಬ ಇಚ್ಚೆಯು ಹೇಗೆ ಉಂಟಾಗಲಾರದೋ ಹಾಗೆ ಸಕಲ ಜನಗಳ ನೇತ್ರಗಳನ್ನೂ, ಮನಸ್ಸನ್ನೂ