________________ ಪಂಚಸ್ತೋತ್ರ ಭಾವಪ್ರಕಾಶಿಕಾ ಇಂದ್ರರಾದಂತಹ ಧರಣೇಂದ್ರ ಸೌಧರ್ಮೆಂದ್ರ ಐಶಾನೇಂದ್ರಾದಿಗಳಿಂದಲೂ, ಗರ್ಭಾವತರಣ ಜನ್ಮಾಭಿಷೇಕ ಪರಿನಿಪ್ಪ ಮಣಕೇವಲಜ್ಞಾನನಿರ್ವಾಣ ಕಲ್ಯಾಣಗಳೆಂಬ ಪಂಚಕಲ್ಯಾಣ ಕಾಲಗಳಲ್ಲಿ ನಮಸ್ಕರಿಸಲ್ಪಟ್ಟು ಆ ನಮಸ್ಕಾರ ಕಾಲದಲ್ಲಿ ಪಾದಾರವಿಂದದಲ್ಲಿ ಪಸರಿಸುತ್ತಿರುವ ದೇವೇಂದ್ರಾದಿಗಳ ರತ್ನ ಕಿರೀಟಗಳ ಕಾಂತಿಗಳಿಗೆ ಪ್ರಕಾಶವನ್ನುಂಟು ಮಾಡುವುದಾಗಿಯೂ, ಸಮಸ್ತ ಪಾಪಗಳೆಂಬ ಕತ್ತಲೆಯ ಸಮೂಹವನ್ನು ತೊಲಗಿಸುವುದಾಗಿಯು, ಯುಗದ ಆದಿಯಲ್ಲಿ ಭವವೆಂಬ ನೀರಿನಲ್ಲಿ ಬಿದ್ದಿರುವ ಪ್ರಾಣಿಗಳಿಗೆ ಆಶ್ರಯ ಭೂತ ವಾಗಿಯೂ, ಇರುವ ಇಂತಹ ಶ್ರೀ ಆದಿ ಜಿನೇಂದ್ರರ ಪಾದಾರವಿಂದಗಳನ್ನು ಭಕ್ತಿ ಭರಿತವಾದ ಏಕಾಗ್ರಮನಸ್ಸಿನಿಂದಲೂ ಅದಕ್ಕನುಗುಣವಾದ ವಚನಕಾಯ ಗಳಿಂದಲೂ ಚೆನ್ನಾಗಿ ನಮಸ್ಕರಿಸಿ ಭವ್ಯಾತ್ಮರ ಜನ್ಮ ಸಾಫಲ್ಯವನ್ನುಂಟು ಮಾಡುವ ಜಿನೇಂದ್ರಸ್ತುತಿಯನ್ನು ಮಾಡಿ ಯಾವ ಆದಿ ಜಿನೇಂದ್ರರು ಸಕಲ ಶಾಸ್ತ್ರಸಾರಾರ್ಥವನ್ನು ತಿಳಿದಂತಹ ಅತ್ಯಂತ ಪಟುಬುದ್ದಿಯುಳ್ಳ ದೇವೇಂದ್ರರು ಗಳಿಂದ, ಮೂರುಲೋಕದಲ್ಲಿರುವ ಸಕಲ ಭವಾತ್ಮರ ಮನಸ್ಸನ್ನು ಸೆಳೆಯು ವಂತಹ ಪರಮೋತ್ಕೃಷ್ಟವಾದ ಸ್ತೋತ್ರಗಳಿಂದ ಚೆನ್ನಾಗಿ ಸ್ತುತಿಸಲ್ಪಟ್ಟರೋ, ಅಂತಹ ಆದಿ ಜಿನೇಂದ್ರರಾದ ಶ್ರೀ ವೃಷಭಸ್ವಾಮಿಯನ್ನು ನಾನೂ ಕೂಡ ಸ್ತುತಿಸುತ್ತೇನೆ. (ಯೋಗ್ಯತೆ ಇಲ್ಲದಿದ್ದರೂ ಭಕ್ತಿ ಮೂಲಕವಾದ ಚಾಪಲ್ಯ ದಿಂದ ಸ್ತುತಿಸುವನೆಂದಭಿಪ್ರಾಯವು.) essass ಬುದ್ಘಾನಿನಾಪಿ ವಿಬುಧಾರ್ಚಿತಪಾದಪೀಠ (4) ಸೋತುಂ ಸಮುದ್ಯತಮತಿರ್ವಿಗತತ್ರಪೋಹಂ | ಬಾಲಂ ನಿಹಾಯಜಲಸಂಸ್ಥಿತ ಮಿಂದುಬಿಂಬ ಮನ್ಯಕಇಚ್ಛತಿಜನಸ್ಸಹಸಾಗ್ರಹೀತುಂ ಕಾದಿದೆ | 3 | 3. ತಾ|| ಜ್ಞಾನಿಗಳಿಂದಲೂ, ದೇವತೆಗಳಿಂದಲೂ ಪೂಜಿಸಲ್ಪಟ್ಟ ಪಾದಪೀಠವುಳ್ಳ ಸ್ವಾಮಿಯೇ ! ವರಾತಿಗೂ ಮನಸ್ಸಿಗೂ ಗೋಚರವಾಗದ ನಿನ್ನ ಗುಣಗಳನ್ನು ಸ್ತೋತ್ರಮಾಡಲು ಯತ್ನಿಸಿದ ನಾನು ನನ್ನ ಮುಂದ ಬುದ್ದಿಯನ್ನು ಭಾವಿಸಿ ನೋಡಿ ನಾಚಿಕೆಯನ್ನೂ ಕೂಡ ಪಡೆಯಲಿಲ್ಲವು. ಹೇಗೆಂದರೆ ನೀರಿನಲ್ಲಿ ಪ್ರತಿಬಿಂಬಿಸಿರುವ ಚಂದ್ರಬಿಂಬವನ್ನು ಕೈಯಿಂದ 61 4 : ಭಾರತಹಿಡಿದುಕೊಳ್ಳಬೇಕೆಂದು ಇಚ್ಚಿಸಬೇಕಾದರೆ ಸಾಧ್ಯಾಸಾಧ್ಯ ವಿವೇಕವಿಲ್ಲದ ಶಿಶು ಹೊರತು ಇನ್ಯಾವನು ಆಶೆ ಪಡುವನು? ಹಾಗೆಯೇ ಅಜ್ಞನಾದ ನಾನು ನಿನ್ನನ್ನು ಸ್ತುತಿಸಲು ಪ್ರಯತ್ನಿಸುವುದು ಯುಕ್ತವೇ ಸರಿ ಎಂದು ಭಕ್ತಿಯ ಅತಿಶಯದಿಂದ ತನ್ನ ಕೀಳುತನವನ್ನು (ನೈಚ್ಯವನ್ನು) ತಿಳಿಸುತ್ತಾರೆ. . ನಕುಂ ಗುಣರ್ಕಾಗುಣಸಮುದ್ರಶಶಾಂಕಕಾಂರ್ತಾ ಕಸ್ರೇಕ್ಷಮಃಸುರಗುರು ಪ್ರತಿಮೋಪಿಬುದ್ದಾ | ಕಲ್ಪಾಂತಕಾಲ ಪವನೋದ್ದ ತನಕಚಕ್ರಂ . ಕೋವಾತರೀತಮಲಮುಂಬುನಿಧಿಂ ಭುಜಾಭ್ಯಾಂ || 4 || - 4, ತಾ| ಸೊತ್ರವೆಂದರೆ ಇರುವ ಗುಣಗಳನ್ನು ಹೇಳುವುದು, ಓ ಸ್ಯಾವಿಯೇ ! ತಾವು ಗುಣಗಳಿಗೆ ಸಮುದ್ರದಂತೆ ಇರುವಿರಾದ್ದರಿಂದ ಬೃಹ ಸ್ಪತಿಗೆ ಸಮಾನ ಬುದ್ದಿಯುಳ್ಳವನೂ ಕೂಡ ಗುಣಗಳೆಂಬ ಸಮುದ್ರಕ್ಕೆ ಚಂದ್ರ ನಂತೆ ವರಮ ನಿರ್ವಲನಾಗಿಯ, ಮನೋಹರವಾಗಿಯ, ಇರುವ ತಮ್ಮ ಗುಣಗಳನ್ನು ಹೇಳಲು ಯಾವನು ಸಮರ್ಥನು ? ಅದು ಹೇಗೆಂದರೆ ಪ್ರಳಯ ಕಾಲದ ಗಾಳಿಯ ಹೊಡೆತದಿಂದ ಒಳಗಿದ್ದ ವಿಾನು ಮೊಸಳೆ ಮುಂತಾದ ಜಲ ಜಂತುಗಳ ಸಮೂಹವನ್ನುಳ್ಳ ಸಮುದ್ರವನ್ನು ತೋಳುಗಳಿಂದ ದಾಟುವುದ ಕೊಸ್ಕರ ಯಾವನು ತಾನೇ ಸಮರ್ಥನಾಗುತ್ತಾನೆ ? ಯಾವನೂ ಸಮರ್ಥ ನಲ್ಲವೆಂದರ್ಥವು. ಹಾಗೆ ಪ್ರಥಮ ಜಿನೇಂದ್ರರ ಆವಾಜ್ನಸಗೊಚರವಾದ ಗುಣಗಳನ್ನು ಸ್ತುತಿಸಲು ಅತ್ಯಲ್ಪ ಬುದ್ದಿಯುಳ್ಳ ನಾನು ಸಮರ್ಥನಲ್ಲವು. ಹೀಗೆ ಅಸಮರ್ಥರೆಂದು ತಿಳಿದೂ ಕೂಡ ಸ್ತೋತ್ರವನ್ನು ಮಾಡಲು ಪ್ರವರ್ತಿ ಸುವುದು ಯುಕ್ತವೇ ಸರಿ ಎಂಬ ವಿಷಯದಲ್ಲಿ ಆಚಾರ್ಯರು ಲೋಕದೃಷ್ಟಾಂತ ವನ್ನು ತೋರಿಸಿ ಜನಗಳ ಅನುಮಾನ ಪರಿಹಾರ ಮಾಡುತ್ತಾರೆ. ... ಆ ... ಲವಂಗತಿ ಸೋಹಂ ತಥಾಸಿ ತವಭಕ್ತನಶಾನುನೀಶ ಕರ್ತುಂ ಸ್ತವಂ ವಿಗತಶಕ್ತಿರಸಿ ಪ್ರವೃತ್ತಃ ೨ಡಿ ಪ್ರೀತ್ಯಾತ್ಮ ವೀರ್ಯಮವಿಚಾರ್ಯಮ್ಮುಗೀನ್ನಗೇಂದ್ರಂ ನಾಭೌತಿಕಿಂ ನಿಜಶಿಶೋಃ ಪರಿಪಾಲನಾರ್ಥ೦ 15||