________________
ಚತುರ್ದಶಾಶ್ವಾಸಂ / ೬೯೩
೨೭
ಸ || ಆಸೇತೋ ರಾಮ ಚಾಪಾಟನಿ ತಟಯುಗ ಟಂಕಾಂಕಿತಾಖಂಡ ಖಂಡಾ ದಾ ಪೀಯೂಷಾಬ್ ದುಗ್ಗಪ್ತವ ಧವಳ ಕನತ್ಯಂದರಾನಂದರಾದ್ರಃ | ಆಚಂದ್ರಾರ್ಕ ಪ್ರತೀತೋಭಯ ಗಿರಿಶಿಖರಾತ್ ಸ್ಪೋದಯಕ ಹೇತೋಃ ಶೈಲೇಳಾಕಲಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ | ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇಸ್ತವ್ಯಾಪಸವ್ಯಕ್ರಮಾತ್ ಗರ್ವಾಕೃಷ್ಟವಿಕರ್ಣಟಂಕನಿಕರೋತ್ಕರ್ಣಪ್ರಭಾವಾಕ್ಷರ: 1 ಮತ್ತಾರಿದ್ವಿಪಮಸ್ತಕಸ್ಥಿತಶಿಲಾಪಟ್ಟಂ ಸದಾಖ್ಯಾಯತೇ ತಸ್ಮಾಯಂ ಪುನರುಕ್ತ ಏವ ಸಮರ ಶ್ಲಾಘಪ್ರಶಸ್ತಿಕ್ರಮಃ || ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನಃ ಸಪ್ತದ್ವೀಪ ಜಿಗೀಷಯಾ ವಿಜಯನಾ ಕೇನಾಪಿ ಪುಂಜೀಕೃತಂ | ಯಜ್ಞಾತಂ ಶರ ಶಂಕು ಶಲ್ಯ ಶತಸ್ಸಂತಾಪ ಶತ್ರುದ್ವಿಪಾನ್ ನಿಶ್ಚಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನ ||
1182
ಪೃಥ್ವಿ || ಪರಸ್ಪರ ವಿರುದ್ಧಯೋರ್ವಿನಯ ಯೌವನಾರಂಭಯೋ
ಪ್ರಭೂತ ಸಹಜೇರ್ಷ್ಠಯೋರಪಿ ಸರಸ್ವತೀ ಶ್ರೀಸ್ತಿಯೋಃ || ತಥಾಚ ಪರಿಹಾರಿಸೋರಪಿ ಮಹಾ ಕ್ಷಮಾ ಶೌರ್ಯಯೋ ಚಿರಂ ಪ್ರಥಮ ಸಂಗಮೋ ಹರಿಗ ಭೂಪತೇ ದೃಶ್ಯತೇ |
೨೮
೨೯
20
ನಿಂತು ಮೃದುಮಧುರಗಂಭೀರಧ್ವನಿಯಿಂದ ಹಾಡಿದನು. ೨೭. ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ ಉಳಿಯಿಂದ ಗುರುತು ಮಾಡಲ್ಪಟ್ಟ ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ ಕ್ಷೀರಸಾಗರದಂತೆ ಮಂದರಪರ್ವತಕಣಿವೆಯವರೆಗೂ ತನ್ನ ಅಭಿವೃದ್ಧಿಗೆ ಒಂದೇ ಕಾರಣವಾಗಿರುವ ಚಂದ್ರ ಸೂರ್ಯರ ಪರ್ಯಂತ ಪ್ರಸಿದ್ಧರಾಗಿರುವ ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳವರೆಗೂ ಕಾಲದವರೆಗೂ ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ, ೨೮. ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ) ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ ಶತ್ರುರಾಜರ ಮದ್ದಾನೆಗಳ ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಫಲಕಗಳು ಪ್ರಕಾಶ ಪಡಿಸುತ್ತಿರುವ ಆ ಅರಿಕೇಸರಿಯ ಯುದ್ಧಪ್ರಶಸ್ತಿಯು ಪುನರುಕ್ತವಾಗುತ್ತಿರಲಿ. ೨೯. ಗುಣಾರ್ಣವಮಹೀಪಾಲನ ಯುದ್ಧಭೂಮಿಯಲ್ಲಿ ಅವನ ಹರಿತವಾದ ನೂರಾರು ಬಾಣಗಳಿಂದ ಹತವಾದ ಶತ್ರುರಾಜರ ಆನೆಗಳು ಸಪ್ತ ದ್ವೀಪಗಳನ್ನೂ ಗೆಲ್ಲಬೇಕೆಂಬ ಆಶೆಯುಳ್ಳ ಇಂದ್ರನಿಗೆ ಹೆದರಿ ನಡುಗುತ್ತ ಸಮುದ್ರಪ್ರವೇಶಮಾಡುತ್ತಿರುವ ಕುಲಪರ್ವತಗಳ ರಾಜಿಯ ಹಾಗಿವೆ. ೩೦. ಪರಸ್ಪರ ವಿರೋಧಿಗಳಾದ ವಿನಯ ಮತ್ತು ಯವ್ವನಗಳನ್ನೂ ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ