________________
೬೯೨ / ಪಂಪಭಾರತಂ
ಕಂ
ಓಳಿಕೊಳೆ ಪೊಳೆವ ಕಣ್ಣಳ್ ನೀಳಿಮವನಜಂಗಳೊಳಿ ಕೊಳ್ಳದುವು ತಾ | ಮೋಳಿಕೊಳಲಂತ ಗಣಿಕೆಯ
ರೋಳಿಯೊಳೆ ಮಡ ಲತೆಗಳಿರ್ಪಂತಿರ್ದರ್ |
ಸಾರ್ಚಿದ ಲೋಹಾಸನದೊಳ
ಮರ್ಚಿದ ಬೊಂದರಿಗೆ ಪಟೆಯ ಬಿತ್ತರಿಗೆ ಕರಂ | ಪೆರ್ಚುವ ಮಹಿಮೆಯನೆಯೇ ನಿ
ಮಿರ್ಚೆ ಮಹಾಮಕುಟಬದ್ಧರೋಳಿಯೊಳಿರ್ದರ್ ||
ಮಗ ಮಗ ಮಗಿಸುವ ಮೃಗಮದ
ದಗರುವ ಕಪುರದ ಕಂಪುಮಂ ಸೂಡಿದ ಬಾ | ಸಿಗದ ಪೊಸಗಂಪನಿಂಬಾ
ಗೊಗೆದಿರೆ ಮಾಡಿದುದು ಚಾಮರರುಹಗಂಧವಹಂ ||
ಪಸರಿಸಿದ ತಾರಹಾರದ
ಪೊಸವೆಟ್ಟಿಂಗಳುಮನಮರ್ದ ಪರ್ದುಡುಗೆಗಳೊಳ್ | ಮಿಸುಗುವ ಪೊಸ ಮಾಣಿಕದಳ ವಿಸಿಲುಮನೊಡಗಾಣಲಾದುದರಿಗಳ ಸಭೆಯೊಳ್ ||
೨೩
೨೪
೨೫
೨೬
ವ|| ಅಂತು ದೇವೇಂದ್ರನಾಸ್ಥಾನಮನೆ ಪೋಲು ಸೊಗಯಿಸುವ ಸಂಸಾರಸಾರೋದಯ ನಾಸ್ಥಾನದೊಳೊರ್ವ ವೈತಾಳಿಕಂ ನಿಂದಿರ್ದು ಮೃದುಮಧುರಗಂಭೀರಧ್ವನಿಯಿನಿಂತೆಂದಂ
ಏಟುಗಳ ರುಚಿ ನಿಮಗೆ ಅನುಭವವಾಗುತ್ತದೆ ಎಂದಭಿಪ್ರಾಯ). ೨೩. ಎಂದು ಹೇಳುತ್ತಿರುವ ಕಾವಲವರ ಹೊಳೆಯುವ ಕಣ್ಣುಗಳು ಸಾಲಾಗಿರಲು ಕನ್ನೈದಿಲೆಯ ತೋಟದಲ್ಲಿ ಒಪ್ಪುವ ಕನ್ನೈದಿಲೆಯ ಹೂವುಗಳು ಕ್ರಮಬದ್ಧವಾಗಿ ಸಾಲಾಗಿರುವಂತೆ ವೇಶ್ಯಾಸ್ತ್ರೀಯರು ಸಾಲಾಗಿ ಚಿಗುರಿದ ಬಳ್ಳಿಗಳಂತೆ ಕಂಡರು. ೨೪. ಹತ್ತಿರವಿಟ್ಟಿರುವ ಲೋಹಾಸನಗಳಲ್ಲಿ (ಚಿನ್ನ, ಬೆಳ್ಳಿ ಮೊದಲಾದ ಲೋಹಗಳಿಂದ ಕೂಡಿದ ಕುರ್ಚಿಗಳಲ್ಲಿ) ಸೇರಿರುವ ಮೆತ್ತೆಗಳು (ಪಟೆಯ ?) ಸಣ್ಣ ಪೀಠಗಳೂ ವಿಶೇಷ ವೈಭವವನ್ನತಿಶಯವಾಗಿ ಉಂಟು ಮಾಡಲು ಮಹಾರಾಜರುಗಳು ಸಾಲಾಗಿದ್ದರು. ೨೫. ಸುಗಂಧವನ್ನು ಬೀರುತ್ತಿರುವ ಕಸ್ತೂರಿ ಅಗರು ಮತ್ತು ಪಚ್ಚಕರ್ಪೂರದ ವಾಸನೆಯನ್ನು ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ವಾಸನೆಯನ್ನು ಚಾಮರ ಬೀಸುವುದರಿಂದ ಎದ್ದ ಗಾಳಿಯು ಎಬ್ಬಿಸುತ್ತಿರಲು ಅದು ಸಂತೋಷದಾಯಕವೇ ಆಯಿತು. ೨೬. ಪ್ರಸರಿಸಿ ರುವ ಮುತ್ತಿನ ಹಾರಗಳ ಹೊಸಬೆಟ್ಟಿಂಗಳುಗಳನ್ನು ಧರಿಸಿರುವ ಬೆಲೆಯುಳ್ಳ ಆಭರಣಗಳಲ್ಲಿ ಪ್ರಕಾಶಿಸುವ ಹೊಸ ಮಾಣಿಕ್ಯಗಳ ಎಳೆಯ ಬಿಸಿಲನ್ನೂ, ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. ವ|| ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಯಿಸುವ ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ ವಿವಿಧತಾಳಗಳನ್ನು ಉಪಯೋಗಿಸಿ ಹಾಡುವ ಗಾಯಕನಾದ ವೈತಾಳಿಕನು ಎದ್ದು