________________
೬೬೬ | ಪಂಪಭಾರತಂ
ವ|| ಅಂತೆಸೆವ ಪುಂಡರೀಕಷಂಡೋಪಾಂತಮನೆಯೆವಂದನೇಕವ್ರಣಗಳಿತನವರುಧಿರ ಮಾಗಿರ್ದ ತನ್ನ ಮಯ್ಯನೋರಸಿ ಕರ್ಚಿ ಮುಕ್ಕುಳಿಸಿಯುಗುಬಾಚಮಿಸಿ ಜಳದೇವತೆಗಳ ಪೊಡೆವಟ್ಟು ಜಳಮಂತ್ರಾಕ್ಷರಂಗಳಿಂ ಸರೋವರಮನಭಿಮಂತ್ರಿಸಿಚಂ|| ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ಲಿ ಬಬಲಪರಾಂಬುರಾಶಿಯೊಳ್ | ಮುಲುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ ಮುಲುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲೆ ತೀರ್ಗುಮೇ || ೭೪
ವ|| ಅಂತು ವಜ್ರಯ ವಜ್ರಹತಿಗಳ್ಳಿ ಕುಲಗಿರಿಜಳಧಿಯಂ ಪುಗುವಂತ ದುರ್ಯೋಧನ ಕೋಳನಂ ಪೊಕಿರ್ದನನೆಗಮಿತ ಧರ್ಮಪುತ್ರ ಶಲವಡೆಯಿಂ ಬಲಿಯಂ ರಾಜರಾಜನಂ ಕೊಳುಗುಳದೊಳುಸಿಯುಂ ಕಾಣದೆ ನಮ್ಮ ಮಾಡುವ ಕರ್ತವ್ಯಮಾವುದೇಗೆಯ್ಯಂ ಪೇಮೆಂದು ನಾರಾಯಣನಂ ಬೆಸಗೂಳೆ ಮಧುವನಿತಾವದನಕಮಳಹಿಮಕರನಿಂತೆಂದಂ -
ಉll ಇಂದಿನ ನೇಸಳೆಂದೂಳಗರಾತಿಯನಿಕದ ಮಾಷ್ಟಮಫೊಡಿ
ನೈಂದುಮಸಾಧ್ಯನಿಂದೆ ಹಳಿಯುಂ ಗಡ ಕೂಡುವನಾತನಂ ಗೆಲಲ್ | ಬಂದಪುದೇ ಬಚಿಕ್ಕದುವೆ ಕಾರಣವಾಗುಳಿದಿರ್ದನಂಧರಾ ಇಂದನನಲ್ಲದುಂತು ತಲೆಯುರ್ಚುಗುವೇ ರಣರಂಗಭೂಮಿಯೊಳ್ || ೭೫
ವಹಾಗೆ ಪ್ರಕಾಶಮಾನವಾಗಿರುವ ಸರೋವರದ ಸಮೀಪಕ್ಕೆ ಬಂದು ಅನೇಕ ಗಾಯಗಳಿಂದ ಜಿನುಗಿದ ಹೊಸ ರಕ್ತದಿಂದ ಕೂಡಿದ್ದ ತನ್ನ ಶರೀರವನ್ನು ಉಜ್ಜಿ ತೊಳೆದು ಮುಕ್ಕುಳಿಸಿ ಉಗುಳಿ ಆಚಮನಮಾಡಿ ಜಲದೇವತೆಗಳಿಗೆ ನಮಸ್ಕರಿಸಿ ಜಲಮಂತ್ರಾಕ್ಷರಗಳಿಂದ ಸರೋವರವನ್ನು ಮುಟ್ಟಿ ಅಭಿಮಂತ್ರಿಸಿದನು. ೭೪. ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ತನಗೆ ಪ್ರತಿಭಟಿಸಿದ ರಾಕ್ಷಸರನ್ನು ತಲೆಕೀಳಾಗುವಂತೆ ಮಾಡಿ (ಕೊನೆಗೆ ತಾನು) ಕಾಂತಿಹೀನನಾಗಿ ಪೂರ್ಣವಾಗಿ ಬಳಲಿ ಪಶ್ಚಿಮಸಮುದ್ರದಲ್ಲಿ ಮುಳುಗುವ ಸೂರ್ಯನ ಹಾಗೆ ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು. ಎಂದ ಮೇಲೆ ಯಾರಿಗಾದರೇನು? ವಿಧಿಯು ಕಟ್ಟಿಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ (ಸಾಧ್ಯವೇ) ? ವ! ಹಾಗೆ ಇಂದ್ರನ ವಜ್ರಾಯುಧಕ್ಕೆ ಹೆದರಿ ಕುಲಪರ್ವತಗಳು ಸಮುದ್ರವನ್ನು ಪ್ರವೇಶಿಸುವ ಹಾಗೆ ದುರ್ಯೋಧನನು ಕೊಳವನ್ನು ಪ್ರವೇಶಿಸಿದನು. ಅಷ್ಟರಲ್ಲಿ ಈ ಕಡೆ ಧರ್ಮರಾಯನು ಶಲ್ಯವಧೆಯಾದ ಮೇಲೆ ಚಕ್ರವರ್ತಿಯಾದ ದುರ್ಯೋಧನನನ್ನು ಯುದ್ಧಭೂಮಿಯಲ್ಲಿ ಹುಡುಕಿಯೂ ಕಾಣದೆ ನಾವು ಮಾಡಬೇಕಾದ ಕರ್ತವ್ಯವಾವುದು ? ಏನು ಮಾಡೋಣ ಹೇಳಿ ಎಂದು ಕೃಷ್ಣನನ್ನು (ಮಧುವೆಂಬ ರಾಕ್ಷಸನ ಸ್ತ್ರೀಯರ ಮುಖವೆಂಬ ಕಮಳಕ್ಕೆ ಚಂದ್ರನ ಹಾಗಿರುವ ಕೇಳಲು ಅವನು ಹೀಗೆಂದನು. ೭೫. ಇಂದಿನ ಸಾಯಂಕಾಲದೊಳಗೆ ಶತ್ರುವನ್ನು ಕೊಲ್ಲದೆ ತಪ್ಪಿದೆವಾದರೆ ಇನ್ನಾವಾಗಲೂ ಅವನು ಅಸಾಧ್ಯನಾಗುತ್ತಾನೆ. ಈ ದಿನವೇ ಬಲರಾಮನೂ ಅವನನ್ನು ಕೂಡಿಕೊಳ್ಳುತ್ತಾನೆ. ಬಳಿಕ ಆತನನ್ನು ಕೊಲ್ಲುವುದಕ್ಕೆ