________________
ತ್ರಯೋದಶಾಶ್ವಾಸಂ | ೬೬೫ ಪಣಂಗಳ ಕಂಪು ನಾಟುವುದರ್ಕೆ ಸೈರಿಸಲಾಗಿದೆ ಕೋಳ್ವಾಂಟಿನೊಳ್ ಕೊಳುಗುಳವಂ ಕಳೆದು ಪೋಗಿ ವಿಳಯಕಾಳವಿಘಟ್ಟಿತಾಷ್ಟದಿಗ್ಯಾಗಸಂಧಿಬಂಧನಗಗನತಳಮೆ ಧರಾತಳಕ್ಕೆ ಪಡೆದು ಬಿಟ್ಟಂತಾನುಮಾದಿವರಾಹಂ ಸಮುದ್ರಮುದ್ರಿತಧರಾಮಂಡಳಮಂ ರಸಾತಳದಿಂದೆತ್ತಿ ಬಂದಂದು ನಭೋಮಂಡಳಸ್ಥಾನಮೆ ಸಲಿಲಪರಿಪೂರಿತಮಾದಂತಾನುಮಾಗಿ
ಮll , ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪತದುಗ್ರಲಯಕಾಳಾಂಭೋಧರಚ್ಛಾಯ ತಾ | ನೆ ದಲೆಂಬಂತಿರೆ ಕಾಚ ಮೇಚಕಚಯಚ್ಚಾಯಾಂಬುವಿಂ ಗುಣಿನಿಂ ಪುದಿದಿರ್ದು ಸರೋವರಂ ಬಕ ಬಳಾಕಾನೀಕ ರಾವಾಕುಳಂ 1
೭೨
ಚಂll ಅದಟನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದಟ್ಟಿ ಕೊಳ್ಳದಿರದಿಲ್ಲಿಯುಮಮುಮನಿಲ್ಲಿ ಬಾಲ್ವರಂ | ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದತ್ತಮು ಇದಕಳಹಂಸಕೋಕನಿಕರಧ್ವನಿರುಂದ್ರಫಣೀಂದ್ರಕೇತುವಂ ||
೭೩
ಬೇಯುತ್ತಿರುವ ಹೆಣಗಳ ದುರ್ವಾಸನೆಯನ್ನು ಸಹಿಸಲಾರದೆ ದೂರದೂರ ಹೆಜ್ಜೆಯಿಟ್ಟು (ದಾಟುಹೆಜ್ಜೆಯಿಟ್ಟು) ದಾಟುತ್ತ ಯುದ್ಧಭೂಮಿಯನ್ನು ಕಳೆದುಹೋದನು. ಪ್ರಳಯಕಾಲದಲ್ಲಿ ಅಪ್ಪಳಿಸಲ್ಪಟ್ಟ ಪೆಟ್ಟಿನಿಂದ ಎಂಟು ದಿಕ್ಷದೇಶಗಳ ಕೀಲುಗಳೂ ಕಳಚಿಹೋಗಲು ಆಕಾಶಪ್ರದೇಶವೇ ನೆಲಕ್ಕೆ ಬಿದ್ದುಹೋಗಿದೆಯೊ ಎಂಬಂತೆಯೂ ಆದಿವರಾಹನಾದ ವಿಷ್ಣುವು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಳವನ್ನು ಪಾತಾಳಲೋಕದಿಂದ ಎತ್ತಿಕೊಂಡು ಬಂದ ದಿನ ಆಕಾಶಪ್ರದೇಶವೇ ನೀರಿನಿಂದ ತುಂಬಿಹೋಯಿತೋ ಎಂಬಂತೆಯೂ ಇರುವ ಸರೋವರವನ್ನು ಕಂಡನು-೭೨. ಇದು ಪಾತಾಳವೆಂಬ ಬಿಲದ ಬಾಗಿಲು; ನಿಜವಾಗಿಯೂ ಇದು ಭಯಂಕರವಾದ ಕತ್ತಲೆಯಿಂದ ತುಂಬಿದ ಬಾವಿ, ಬೇರೆಯಲ್ಲ. ಇದು ಉಗ್ರವಾಗಿರುವ ಪ್ರಳಯಕಾಲದ ಮೋಡದ ನೆರಳೇ ಸರಿ ಎನ್ನುವ ಹಾಗಿರುವ ಕಾಚದಂತೆ ಕಪ್ಪುನೀಲಿ ಬಣ್ಣ ಮಿಶ್ರಿತವಾದ ಬಣ್ಣದ ನೀರಿನಿಂದ ತುಂಬಿ (ಆಳವಾಗಿ) ಬಕಬಲಾಕಾಪಕ್ಷಿಗಳ ಶಬ್ದದಿಂದ ಮೊರೆಯುತ್ತಿರುವ ವೈಶಂಪಾಯನ ಸರೋವರವು ಆಳದಿಂದಲೂ - ಗಾಂಭೀರ್ಯ ದಿಂದಲೂ - ಭಯಂಕರತೆಯಿಂದಲೂ ಕೂಡಿದ್ದಿತು. ೭೩. ಪರಾಕ್ರಮ ಶಾಲಿಯಾದ ಅರ್ಜುನನ ಮತ್ತು ಸಾಹಸಭೀಮನ ಕೋಪಾಗ್ನಿಯು ಇಲ್ಲಿಗೂ ಕೂಡ ಪ್ರವೇಶಿಸಿ ವ್ಯಾಪಿಸಿ ಸುಟ್ಟು ನಾಶಮಾಡಿ ಕೊಲ್ಲದೆ ಬಿಡುವುದಿಲ್ಲ: ಇಲ್ಲಿ ಬಾಳುತ್ತಿರುವ ನಮ್ಮನ್ನು ಕದಡಬೇಡ; ಈ ಕಡೆ ಬರಬೇಡ; ಹತ್ತಿರ ಬರಬೇಡ ಎನ್ನುವ ಹಾಗೆ ಎಲ್ಲ ಕಡೆಗೂ ವಿಸ್ತಾರವಾಗಿ ಹರಡಿರುವ ಹಾವಿನ ಹಳವಿಗೆಯನ್ನುಳ್ಳ ದುರ್ಯೋಧನನನ್ನು - ಮದಿಸಿದ ರಾಜಹಂಸ ಕೋಕಸಮೂಹಗಳ ಧ್ವನಿಯು ಸಾರುವಂತಿದ್ದಿತು.