________________
೬೦ | ಪಂಪಭಾರತಂ
ಪಗೆವರಿಂದಿನಿತೆಡಾಯ್ತು ಆದಿತ್ಯತೇಜ ಬೆಸಸು, ಇದಿರಾದ ಪೃಥಾಸುತನುವೆಯಲೀಯದೆ ಕೊಲ್ವೆಂ' ಎನ್ನಲು ಫಣಿಕೇತನನು ನೆತ್ತರ ಧಾರೆಯಿಂ ಮೆತ್ತಿದ ಕಣ್ಣಳನೊತ್ತಂಬದಿಂ ತೆರೆದು ಅಶ್ವತ್ಥಾಮನ ಮೊಗಮಂ ನೋಡಿ
ಎನಗಿನಿತೊಂದವಸ್ಥೆ ವಿಧಿಯೋಗದಿನಾದುದು, ಇದರ್ಕೆ ನೀನು
ಲ್ಕು, ಇನಿತು ಮನಃಕ್ಷತಂಬಡದಿರು, ಆಗದು ಪಾಂಡವರಂ ಗೆಲಲ್ ಪುರಾ ತನಪುರುಷಂ ಮುರಾರಿ ಕೆಲದೊಳ್ ನಿಲೆ, ನೀಂ ಕೊಲಲಾರ್ಪೊಡ, ಆಗದಂ ಬೆನೆ ತಲೆದೊಟ್ಟ ವೈರಿಗಳನ್ ಎನ್ನಸುವುಳ್ಳಿನಂ, ಎಯ್ದೆ ವಾ ಗಡಾ ||
ಎಂತಹ ಛಲ! ಅಸಾಧ್ಯವೆಂದು ಚೆನ್ನಾಗಿ ತಿಳಿದಿದ್ದರೂ ಕೊನೆಯ ಆಸೆ ! ಅಶ್ವತ್ಥಾಮನು ಪಾಂಡವರ ನಿಕ್ಕಿ, ಒಸಗೆವಾತನೀಗಳ್ ಕೇಳಿಸುವೆನ್ ಎಂದು ಹೋಗಿ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿ ಅವರು,ಮಾಂಗಗಳನ್ನು ಕತ್ತರಿಸಿ ಸೂರ್ಯೋದಯಕ್ಕೆ ಸರಿಯಾಗಿ ದುರ್ಯೋಧನನಲ್ಲಿಗೆ ಬಂದು 'ಕೊಳೋ ನಿನ್ನ ನಚ್ಚನ ಪಾಂಡವರ ತಲೆಗಳನ್' ಎಂದು ಮುಂದಿಡಲು ದುರ್ಯೋಧನನು ನೋಡಿ
ಬಾಲಕಮಳಂಗಳಂ ಕಮ
ಳಾಲಯದಿಂ ತಿಳೆದು ತರ್ವವೋಲ್ ತಂದೆ ನೀಂ ಬಾಲಕರ ತಲೆಗಳ ಅಕ್ಕಟ
ಬಾಲಕ ವಧದೋಷಮಂತು ನೀಂ ನೀಗಿದ ||
ಎಂದು ನಿಟ್ಟುಸಿರು ಬಿಟ್ಟು ತನ್ನ ಕೊನೆಯುಸಿರನ್ನೆಳೆಯುವನು. ಈ ವಿಧವಾದ ಸಾವು ಸಾವಲ್ಲ, ಸೋಲು ಸೋಲಲ್ಲ. ಒಂದು ವಿಧವಾದ ವಿಜಯವೇ! ಈ ತೆರನಾದ ಮರಣವು ಅವಮಾನಕರವಾದುದಲ್ಲ, ಕೀರ್ತಿಕರ, ಹೇಡಿಯಂತೆ ಸಂಧಿಮಾಡಿಕೊಂಡು ತನುಜಾನುಜರ ಸಾವಿರ ಮನಃಕ್ಷತದಿಂದ ಸದಾ ಕೊರಗುತ್ತ ಜೀವಿಸುವುದಕ್ಕಿಂತ ವೀರ ಕ್ಷತ್ರಿಯನಂತೆ ಅಭಿಮಾನವನ್ನೇ, ಛಲವನ್ನೇ, ಹಗೆಯನ್ನೇ ಮುಂದಿಟ್ಟು ಧೈರ್ಯದಿಂದ ಕಾದಿ ಸಾಯುವುದು ಎಷ್ಟೋ ಮೇಲು. ಹೀಗೆ ಸತ್ತವನು ಸರ್ವರ ಶ್ಲಾಘನೆಗೂ ಅರ್ಹ. ಅದಕ್ಕಾಗಿಯೇ ಕವಿತಾಗುಣಾರ್ಣವನು ಅಭಿಮಾನಘನತೆಗೆ ಮೆಚ್ಚಿ ಮುಂದಿನ ಅವನ ಚರಮಗೀತೆಯನ್ನು ಹಾಡಿದನು.
ನುಡಿದುದನ್, ಎದ್ದ ತುತ್ತತುದಿಯೆಲ್ಲುವಿನಂ ನುಡಿದಂ, ವಲಂ ಚಲಂ ಬಿಡಿದುದನ್, ಎಯ್ದೆ ಮುಂ ಪಿಡಿದುದಂ ಪಿಡಿದಂ, ಸಲೆ ಪೂಣ ಪೂಣೆ ನೇ ರ್ಪಡೆ ನಡೆವನ್ನೆಗಂ ನಡೆದನ್, ಅಳ್ಳದ ಬಳ್ಳದೆ ತನ್ನೊಡಲ್ ಪಡ ಲ್ವಡುವಿನಂ, ಅಣುಗುಂದನೆ ದಲ್, ಏನಭಿಮಾನಧನಂ ಸುಯೋಧನಂ ||
ಹೀಗೆ ಎಲ್ಲ ದೃಷ್ಟಿಯಿಂದಲೂ ಪಂಪನು ಪ್ರತಿಭಾಶಾಲಿಯಾಗಿದ್ದುದರಿಂದಲೇ ಅವನ ತರುವಾಯ ಬಂದ ಕವಿಗಳಿಗೆ ಅವನು ಪ್ರೇರಕನಾದನು. ಪಂಪನ ದುರ್ಯೋಧನನಿಂದ ಆಕರ್ಷಿತನಾದ, ಮುಂದೆ ಬಂದ ಕವಿಚಕ್ರವರ್ತಿ ರನ್ನನು ದುರ್ಯೋಧನನನ್ನೇ ಪ್ರತಿನಾಯಕನನ್ನಾಗಿ ಮಾಡಿ 'ಸಾಹಸಭೀಮ ವಿಜಯ'ವೆಂಬ ಉತ್ತಮ ಗ್ರಂಥವನ್ನು ರಚಿಸಿದನು. ಅವನ ದೃಷ್ಟಿಯಿಂದ ಅದು ಭೀಮವಿಜಯವಾದರೂ ವಾಚಕರಿಗೆ 'ರಾಜರಾಜವಿಜಯ'ದಂತೆಯೇ ಭಾಸವಾಗುವುದು. ರನ್ನನ ಕವಿಚಕ್ರವರ್ತಿತ್ವಕ್ಕೆ ಪಂಪನು