________________
೬೪೪ | ಪಂಪಭಾರತಂ
ವ|| ಎಂಬುದುಂ ಜಳಧರಧ್ವನಿಯಿನಶ್ವತ್ಥಾಮನಿಂತೆಂದಂಚoll ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪಂಗಿಕ್ಕಿ ಕರ್ಣನಂ
ಪಳಯಿಸುತಿರ್ಪಯೇನೂ ಗಳ ನಿನ್ನಯ ತಮ್ಮನ ನೆತ್ತರಂ ಭಯಂ | ಗೋಳೆ ಪವಮಾನಸೂನು ತವ ಪೀರ್ದಡೆಯೊಳ್ ಕಲಿ ಕರ್ಣನೇಕೆ ಪೇಯ್
ಮಿಳ ಮಿಳ ನೋಡುತಿರ್ದನವನುರ್ಕನಿಳಾಧಿಪರುಂಟೆ ನಿನ್ನವೋಲ್ || ೨೫ ಕoil ಅಂಬಿಗಳಾದುದಿದು ಋಣ
ಸಂಬಂಧಂ ನಿನಗಮೋಘಮಿದನುಟಿದವರಾ | ರ್ಗ೦ ಬಿಸುಡಂ ಬರ್ಕುಮ ನೀಂ ಬೆಸಸುವುದನ್ನನಾಂತರಂ ತವ ಕೊಲ್ವಂ ||
೨೬ ವl ಎಂದಶ್ವತ್ಥಾಮಂ ಕರ್ಣನ ಪಡೆದು ನುಡಿದೊಡಾ ನುಡಿಗೆ ಮುನಿದು ಕೂಲ್ವನಿತು ವರಂ ಬಗೆದು ದುರ್ಯೋಧನನಿಂತೆಂದಂಕಂ|| ನಿನ್ನಿಂದಂ ತ್ರಿಭುವನ ರಾ
ಜ್ಯೋನ್ನತಿ ಬಂದೆನಗೆ ಸಾರ್ಗುಮವೊಡಮೊಲ್ಲಂ | ನೀನ್ನುಡಿದು ಬರ್ದುಕಿ ಪಜ ರೆದಿರೊಳ್ ನುಡಿದು ಕರ್ಣನಂ ಬರ್ದುಕುವರೇ || ೨೭
ನಾನು ಏನೆಂಬುದಾಗಿ ಸಂಧಿಯನ್ನುಂಟುಮಾಡಲಿ ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಧಿಯನ್ನು ಗಳಿಯಿಸುತ್ತೇನೆ. ಕೃಪನೇ ನೀನು ಈ ಮಾತನ್ನು ಏನೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಯುದ್ಧಭೂಮಿಯಲ್ಲಿ ಪಾಂಡವರನ್ನು ಕಾಣುವ ದುರ್ಯೊಧನನೆಂಬ (ಆಶ್ಚರ್ಯವಾದ) ಹೆಸರುಳ್ಳವನಲ್ಲವೇ ನಾನು? ವ| ಎನ್ನಲು ಗುಡುಗಿನ ಶಬ್ದದಿಂದ ಅಶ್ವತ್ಥಾಮನು ಹೀಗೆಂದನು-೨೫. ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಪ್ರಲಾಪಮಾಡುತ್ತಿದ್ದೀಯೆ, ನಿಜ. ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುತ್ತಿರುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನೇಕೆ ಹೇಳು ಮಿಟಮಿಟನೆ ನೋಡುತ್ತಿದ್ದ? ನಿನ್ನ ಹಾಗಿರುವ ರಾಜರೂ ಉಂಟೇ ? ೨೬. ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ ? ನೀನು ಅಪ್ಪಣೆ ಕೊಡು; ಪ್ರತಿಭಟಿಸಿದವರನ್ನು ಪೂರ್ಣವಾಗಿ ಕೊಲ್ಲುತ್ತೇನೆ. ವ|| ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು. ೨೭. ನಿನ್ನಿಂದ ಮೂರುಲೋಕದ ರಾಜ್ಯಾಧಿಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆ ಬೇಡ. ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ಇತರರು