________________
ತ್ರಯೋದಶಾಶ್ವಾಸಂ | ೬೪೩ ವlt ಅದನೆಂತಪ್ಪ ಬುದ್ದಿಯೊಡೆಯರ ಪೇಲ್ವಸಾಮಾನ್ಯಮಪ್ಪುಪಾಯಂಗಳುಂ ನಿನಗೆ ದೈವಂ ವಿಮುಖಮಪ್ಪುವಂದಪಾಯ ಬಹುಳವಾಗಿ ಬಂದುದಾಜುಂ ಗುಣಂಗಳನೆ ತಂದುವು ಮೌಲ ನೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕತಂತ್ರಂಗಳ್ ಪಣಿದ ಜಂತ್ರಂಗಳಂತ ಕಲಕುಲಿ ಮಾದುವಾರ್ಗಮಭೇದ್ಯರುಮಸಾದ್ಧರುಮಪ್ಪಯೋನಿಸಂಭವರ ಹೇಳಾಸಾಧ್ಯರಾದರದು ಕಾರಣದಿಂಹರಿಣಿಅಟಿದರಧಿಕರ್ ಭೀಷ್ಮದ್ರೋಣಾಂಗನಾಯಕರೀಗಳಿ
ನುಡಿದರವರಿಂ ಮೇಲೆಂಬರ್ ಮಹಾರಥರಲ್ಲಿ ಮುಂ | ಕಳೆದುದಳೊಳೇಂ ನಷ್ಟಂ ನಷ್ಟಂ ಮೃತಂ ಮೃತಮಂಬುದಿ
(ಬಲದಿರಿದೇಕಿಲ್ಲಿಂ ಮೇಲಪ್ಪುದಂ ಬಗೆ ಭೂಪತೀ | ಕಂ|| ನಳವೊಡೆ ನೆರವೂಳೆಮಿನಿಬರು
ಮಿತಿ ಕಲಹಮಪಾಯ ಬಹುಳಮಿನ್ನುಂ ನಯದ | ತೆಲಗುವೊಡೆ ಸಂಧಿ ಹರಿಗನೂ
ಭುಜುಗುಂ ನಿನಗಿಂತಿವೆರಡ ಕಜ್ಜಂ ನೃಪತೀ || ವ|| ಎಂಬುದುಂ ಬಡೆಕ್ಕಿನ ನುಡಿಗೆ ಸೈರಿಸಲಾಗಿದೆ ಫಣಿಕೇತನನಿಂತೆಂದಂಮll ಪವಾಡಯ್ಯನೆ ಬೇಡಯುಂ ಕುಡದ ನಾನೇನೆಂದು ಸಂಧಾನಮಂ.
ಗಟೆಯಿಪ್ಪಂ ಗಳಯಿಪ್ಪನಂಗನ್ನಪನಂ ನೀನೆ ತಂದನ್ನ ಮುಂ | ದಿಟಿಪಲ್ಕಾರ್ಪೊಡಮಾವುದಾಗಿ ಕೃಪ ನೀಂ ಪೇಷ್ಟೆಯಾ ಮಾತನಿ ನ್ನು ದುರ್ಯೋಧನನಲ್ಲನೇ ಕಳದೊಳಂ ಕಾಂತು ಕೌಂತೇಯರಂ ೧೨೪
ತೋರಿಸುವರು. ವ|| ಆದುದರಿಂದ ಎಂತಹ ಬುದ್ದಿವಂತರಾದವರೂ ಹೇಳುವ ಸಾಮಾನ್ಯವಾದ ಉಪಾಯಗಳೂ ನಿನಗೆ ದೈವ ವ್ಯತ್ಯಾಸವಾಗಿರುವುದರಿಂದ ವಿಶೇಷ ಅಪಾಯಕಾರಿಯಾದ ರಾಜ ಸಂಧಿ ವಿಗ್ರಹಯಾನ, ಆಸನ, ಸಂಶಯ, ದೈಧೀಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದುವು. ಮೌಲ, ನೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು. ಯಾರೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ ಆಟದಲ್ಲಿ ಗೆಲ್ಲುವಂತೆ ಸುಲಭವಾಗಿ ಜಯಿಸಲ್ಪಟ್ಟರು. ಆ ಕಾರಣದಿಂದ ೨೨. ಅಧಿಕರಾದ ಭೀಷ್ಮದ್ರೋಣ ಕರ್ಣರು ಸತ್ತರು. ಇನ್ನುಳಿದವರು ಮಹಾರಥರು ಅವರಿಗಿಂತ ಮೇಲೆನ್ನುವರಲ್ಲವೇ? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ? ನಷ್ಟವಾದುದು ನಷ್ಟವಾಯಿತು, ಸತ್ತದ್ದು ಸತ್ತುಹೋಯಿತು ಎಂದುಕೊಳ್ಳುವುದು. ಇನ್ನು ದುಃಖಿಸಬೇಡ, ಮಹಾರಾಜನೇ ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು. ೨೩. ಯುದ್ಧಮಾಡುವುದಾದರೆ 'ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಯುದ್ಧಮಾಡು. ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು ಎಂದು ಸಂಧಿಯ ಕಡೆ ಒಲಿಯುವ ಪಕ್ಷದಲ್ಲಿ ಅರ್ಜುನನಲ್ಲಿ ಸಂಧಿಯಾಗುತ್ತದೆ. ರಾಜನೇ ನಿನಗಿವೆರಡೇ (ಮಾಡಬೇಕಾದ ಕಾರ್ಯಗಳು. ವಗಿ ಎನ್ನಲು ಆಮೇಲೆ (ಎರಡನೆಯ ಸಲ) ಹೇಳಿದ ಮಾತಿಗೆ ಸೈರಿಸಲಾರದೆ ದುರ್ಯೋಧನನು ಹೀಗೆಂದನು. ೨೪. ಹಳೆಯ ಗ್ರಾಮಗಳೊದನ್ನು ಬೇಡಿದರೂ ಕೊಡದ