________________
ತ್ರಯೋದಶಾಶ್ವಾಸಂ / ೬೪೧ ವ|| ಎಂದು ಮತ್ತಂ ಸುಯೋಧನನಿಂತೆಂದಂಮll. ತಲೆದೋಜಿಣಮಳ್ಳಿ ವೈರಿ ನೆಲನಂ ಪೋ ಪೊಕ್ಕನೆಂಬನ್ನೆಗಂ -
ಚಲದಿಂದಯ್ಯುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೋಳ್ | ನೆಲದೊಳ್ ಪರಿಬಲೆ ಮತ್ತಮನ್ನ ಮುಳಿಸಿಂಗಾಂ ಕಾದುವಂ ಪೇಸಿದಂ ನೆಲೆಗಂಡಂತೆ ನೆಲಕ್ಕೆ ಗೆಲ್ಗೊಡಮದಂ ಚಿಃ ಮತ್ತಮಾನಾಳ್ವನೇ || ೧೭
ವ|| ಅಂತುಮಲ್ಲದೆಯುಂಚಂt ತೊಡರದೆ ನೀಮುಮಾ ನಗು ಪಾಂಡುವುಮೊಂದಿಯ ಬಟ್ಟೆಯಿಂದೊಡಂ
ಬಡು ನಿಮಗಿಲ್ಲ ಜೂದ ನವಮಾಗಿರೆ ಮಲಿಗನಾದನಾನ ಪೂ | ಇಡುವಗೆಗೆನ್ನೊಳಾದ ಕಿಸುರೆನ್ನೊಡವೋಪುದಿದೊಳ್ಳಿತೆನ್ನ ಪಿಂ
ಬಡಿನೊಳೆ ನಿನಯ ನಿಮಗಂ ಮಗನನೆ ಧರ್ಮನಂದನಂ || ೧೮ eroll
ತಪ್ಪದು ಕರ್ಣನಿಂ ಬಣಿಕ ಸಂಧಿಯ ಮಾತನಗಾತನಿಲ್ಲದೆ ತಪ್ಪುದೂ ರಾಜ್ಯಮಿ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ | ರ್ತಶದ ಪೇಟಿಮನ, ಪಗೆ ನೋವಳದಂಜುವುದೇಕೆ ನಿಂದರೇಂ ತಪ್ಪುದೊ ಪೇಟಿಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ || ೧೯
ಧರ್ಮರಾಯನು ಸಾಯುತ್ತಾನೆ. ದುರ್ಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು? ವll ಎಂದು ಪುನಃ ದುರ್ಯೋಧನನು ಹೀಗೆಂದನು - ೧೭. ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು ಎಂದು ಹೇಳುವಷ್ಟರಲ್ಲಿಯೇ ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ ಪುನಃ ಹಂಬಲೇ? ನನ್ನ ಕೋಪಕ್ಕಾಗಿ ನಾನು ಕಾದುತ್ತಿದ್ದೇನೆ. (ಇದು ಅಶಾಶ್ವತ ಎಂಬ ವಾಸ್ತವಾಂಶವನ್ನು ತಿಳಿದೇ ಈ ನೆಲಕ್ಕೆ ಹೇಸಿದ್ದೇನೆ. ಗೆದ್ದರೂ ಛಃ ಪುನಃ ನಾನು ಅದನ್ನು ಆಳುತ್ತೇನೆಯೇ? - ವ|| ಹಾಗಲ್ಲದೆಯೂ ೧೮, ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ. ನಿಮಗೆ ಒಂದು ಅಸಮಾಧಾನವೂ ಇಲ್ಲ. ಜೂಜೆ ಕಾರಣವಾಗಲು ಈ ಪ್ರತಿಜ್ಞೆಮಾಡಿದ ಬದ್ಧದ್ವೇಷಕ್ಕೆ ನಾ:- ಮೊದಲಿಗನಾದೆ. ನನ್ನಲ್ಲಿ ಹುಟ್ಟಿದ ಈ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು. ನನ್ನ ಹಿಂದುಗಡೆ (ನಾನು ಸತ್ತ ಬಳಿಕ) ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ? (ನೀವು ಅವನೊಡನೆ ಸುಖವಾಗಿ ಬಾಳಬಹುದು) ೧೯. ಕರ್ಣನಾಗಿ ಹೋದಮೇಲೆ ಸಂಧಿಯ ಮಾತು ತಪ್ಪು (ನನಗೆ ದೋಷಯುಕ್ತವಾದುದು). ಅವನಿಲ್ಲದೆ ನನಗೆ ರಾಜ್ಯವು ಹೇಗಾಗುತ್ತದೆ ? ಈ ಗದೆಯೂ ಬಾಹುದಂಡವೂ ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೆಯೇ, ದುಃಖವನ್ನು ಅನುಭವಿಸಿಯಾದ ಮೇಲೆಯೂ ಹೆದರುವುದೇಕೆ? ಅಪ್ಪಾ ಯುದ್ಧವನ್ನು ನಿಲ್ಲಿಸಿದರೂ ಬ್ರಹ್ಮನು ಹಣೆಯಲ್ಲಿ ಬರೆದ