________________
೬೪೦] ಪಂಪಭಾರತಂ ಕಂ|| ಪೂಕಿನಿತಳಸವಸದಿಂ
ದೀ ಕಲಹಂ ಧರ್ಮಸುತನನಾಂ ನಿನಗೆ ನಿರಾ | ಪೇಕಮೊಡಂಬಡಿಸುವೆನಿಂ
ತೀ ಕಜ್ಜಂ ಕೂರ್ಪೊಡೆನಗೆ ಕೆಯೊಳ್ ಮಗನೇ ||
ವ|| ಎಂದನುಬಂಧಿಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ ನುಡಿಯಂ ಕೇಳಭಿಮಾನಧನಂ ಸುಯೋಧನನಿಂತೆಂದಂಉll ದೋಷಮೆ ನಿಮ್ಮ ಪೇಜ್ಜುದೆನಗೆಂತುಮೊಡಂಬಡಲಪ್ಪುದೊಂದೆ ದು
ಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ ಪೊರಳ್ಳಿ ಕೋಂ || ದೀ ಸಮರಾವನೀತಳದೊಳಿಂ ಬಲಿಗೆನಮೊಲೈನಲ್ಲ ನಿ ರ್ದೋಷಿಗಳೊಳ್ ಪೃಥಾಸುತರೊಳಿಂ ಮಗುಟ್ಟುಂ ಪುದುವಾಳನೆಂಬೆನೇ || ೧೪ ವ|| ಎಂಬುದುಮಂಧಮಹೀಪತಿ ನೀನಿದಾವುದು ಮಾತಾಗಿ ನುಡಿವೈಕಂil ಅನುಜರ್ ನಾಲ್ವರುಮಂ ಧ
ರ್ಮನಂದನಂ ವೇಳೆಗೊಂಡು ಕಾವಂ ಪೂಣರ್ದಾ | ವನುವರದೊಳಮನೆ ಪೇಯ್ ಪವ ನನಂದನಂಗಳವು ಪೊಣರೆ ತಾಂ ಬಪನೇ | ಎನೆ ನೃಪನೆಂದಂ ಧರ್ಮಜ ನನುಜರ್ಕಳೊಳೊರ್ವನದೂಡೊಡನಟಿವ ಸುಯೋ | ಧನನಲ್ಲಿ ನೂರ್ವರುಂ ತ ಸ್ವನುಜರ್ಕಳ್ ಸಾಯ ಬಾಜ್ವುದಂ ನಂಬಿದಿರೇ ||
೧೬
ಕೇಳು; ಯೋಚಿಸು; ತಂದೆಯು ಹೇಳುವುದಕ್ಕೆ ಒಪ್ಪು. ೧೩. ಈ ಜಗಳವು ಇಷ್ಟಕ್ಕೇ ಬೇಗ ನಿಲ್ಲಲಿ. ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವ ಹಾಗೆ ಮಾಡುತ್ತೇನೆ. ನನ್ನನ್ನು ನೀನು ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು ವ|ಎಂದು ಮೋಹಪಾಶದಿಂದ ಬಂಧಿತರಾದ ತಾಯಿತಂದೆಯರು ನುಡಿದ ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು-೧೪, ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಡಂಬಡತಕ್ಕುದೇ ಆದರೆ ಒಂದು ವಿಚಾರ ಮಾತ್ರ. ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಪಾಪಿಯಾದ ಭೀಮನನ್ನು ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ ಬಲಿಯಿಕ್ಕುವವರೆಗೆ ಒಪ್ಪಲಾರೆ. ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಪುನಃ ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ ವಎನ್ನಲು ಕುರುಡುರಾಜನಾದ ಧೃತರಾಷ್ಟ್ರನು (ದುರ್ಯೋಧನನನ್ನು ಕುರಿತು) ಇದು ಯಾವ ಮಾತೆಂದು ನುಡಿಯುತ್ತಿದ್ದೀಯ? ೧೫. ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ ಯಾವ ಯುದ್ದದಲ್ಲಾದರೂ ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು ಪ್ರತಿಜ್ಞೆಮಾಡಿ ರಕ್ಷಿಸುತ್ತಿರುವಾಗ ಭೀಮನಿಗೆ ನಾಶವುಂಟಾದರೆ ತಾನು ಬದುಕುತ್ತಾನೆಯೇ? ೧೬. ಎನ್ನಲು ದುರ್ಯೋಧನನೆಂದನು. ತಮ್ಮಂದಿರು ನಾಲ್ವರಲ್ಲಿ ಒಬ್ಬನು ಸತ್ತರೂ ಜೊತೆಯಲ್ಲಿಯೇ