________________
ದ್ವಾದಶಾಶ್ವಾಸಂ | ೬೩೩ ಕುಡುಮಿಂಚಿನ ಸಿಡಿಲುರುಳಿಯೋ ಟೊಡಂಬಡಂ ಪಡೆಯ ಕರ್ಣನೊಡಲಿಂದಾಗಳ್ | ನಡೆ ನೋಡೆ ನೋಡೆ ದಿನಪನೊ ಳೊಡಗೂಡಿದುದೊಂದು ಮೂರ್ತಿ ತೇಜೋರೂಪಂ |
೨೧.
೨೧೬
ಪಿಡಿದರೆ ಪುರಿಗನಯನರ ಸ್ಟುಡಿದನೆ ಬದನೆ ತಾನೆ ತನ್ನನೆ ಚಲಮಂ | ಪಿಡಿದಟಿದನೆಂದು ದೇವರ
ಪಡೆ ಗಡಣದ ಪೂಗುದಿನತನೂಜನ ಗಂಡಂ | ೨೧೬ ಚಂti ನೆನೆಯದಿರಣ ಭಾರತದೊಳಿಂ ಪರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೋಳಾ ದೊರೆ ಕರ್ಣನೇಟು ಕ || ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮಂದು ಕ ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ಲೆ ಭಾರತಂ || ೨೧೭
ವ|| ಅಂತು ರಿಪುಕುರಂಗಕಂಠೀರವನ ಕೆಯ್ಯೋಳ್ ವೈಕರ್ತನಂ ಸಾಯಲೊಡು ಮೇಲುದು ಬೀಸಿ ಬೊಬ್ಬಿಟಿದಾರ್ವ ಪಾಂಡವಪತಾಕಿನಿಯೊಲ್ಕಂ|| ಬದ್ದವಣದ ಪಣಿಗಳ ಕಿವಿ
ಸದಂಗಿಡ ಮೋದಿಗೆ ದೇವದುಂದುಭಿರವದೂಂ | ದುದ್ಧಾನಿ ನೆಗತಿ ಮುಗುಳಲ * ರೊದ್ದ ಕರಂ ಸಿದ್ದಮಾದುದಂಬರತಲದೊಳ್
១og
ಚಂಚಲೆಯಾದಳು, ೨೧೫. ಕುಡಿಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿನ ರೂಪವನ್ನು ಹೋಲುವ ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ (ಹೊರಟು) ಸೂರ್ಯನಲ್ಲಿ ಐಕ್ಯವಾಯಿತು. ೨೧೬. “ದಿವ್ಯಾಸವನ್ನು ಹಿಡಿದನೆ? ಎರಡು ಮಾತನ್ನಾಡಿದನೇ ? ಭಯಪಟ್ಟನೆ? ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು' ಎಂದು ದೇವತೆಗಳ ಸಮೂಹವು ಕರ್ಣನ ಪೌರುಷವನ್ನು ಹೊಗಳಿತು. ೨೧೭. ಅಣ್ಣಾ ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ; ಒಂದೇ ಮನಸ್ಸಿನಿಂದ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ; ಕರ್ಣನಿಗೆ ಯಾರು ಸಮಾನ? ಕರ್ಣನ ಪರಾಕ್ರಮ, (ಯುದ್ದ, ಕರ್ಣನ ವಿಶೇಷವಾದ ಸತ್ಯ, ಕರ್ಣನ ಪೌರುಷ, ಪ್ರಸಿದ್ದವಾದ ಕರ್ಣನ ತ್ಯಾಗ ಎಂದು ಕರ್ಣನ ಮಾತಿನಿಂದಲೇ ತುಂಬಿ ಭಾರತವು ಕರ್ಣರಸಾಯನವಾಗಿದೆಯಲ್ಲವೇ? ವ|ಹಾಗೆ ರಿಪುಕುರಂಗಕಂಠೀರವನಾದ ಅರ್ಜುನನ ಕಯ್ಯಲ್ಲಿ ಕರ್ಣನು ಸಾಯಲು ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಆರ್ಭಟಮಾಡಿ ಪಾಂಡವಸೈನ್ಯವು ಜಯಶಬ್ದಮಾಡಿತು. ೨೧೮. ಮಂಗಳವಾದ್ಯಗಳು ಭೋರ್ಗರೆದುವು. ಕಿಪಿ ಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು. ದೇವದುಂದುಭಿಯೊಡನೆ