________________
೬೩೨ಪಂಪಭಾರತಂ
ವ|| ಆಗಳಖಿಳಭುವನಭವನಸಂಹಾರಕಮಷಂಜಲಿಕಾಸ್ತಮನಮೋಘಾಸ್ತ್ರ ಧನಂಜಯನಾ ಕರ್ಣಾಂತಂಬರಂ ತೆಗೆದಾಕರ್ಣಾಂತಂ ಮಾಡಲ್ ಬಗೆದು ಕಂಧರಸಂಧಿಯಂ ನಿಟ್ಟಿಸಿ
ಮII ಸll ಮುಳಿದೆಚ್ಚಾಗಳ ಮಹೋಗ್ರಪ್ರಳಯಶಿಖಿ ಶಿಖಾನೀಕಮಂ ವಿಸ್ಕುಲಿಂಗಂ
ಗಳುಮಂ ಬೀಳುತ್ತುಮೌರ್ವಜ್ಜಳನರುಚಿಯುಮಂ ತಾನೆ ತೋಜುತ್ತುಮಾಟಂ | ದಳುರುತ್ತುಂ ಬಂದು ಕೊಂಡಾಗಳೆ ಗಗನತಳಂ ಪಾಯ್ದ ಕೆನ್ನೆತ್ತರಿಂದು ಚಳಿಸುತ್ತಿರ್ಪನ್ನೆಗಂ ಬಿಟ್ಟುದು ಭರದ ಸಿಡಿಲ್ಲ ಕರ್ಣೋತ್ತಮಾಂಗಂ || ೨೧೩
ವlt ಅಂತು ತಲೆ ನೆಲದೊಳುರುಳೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯ ಪ್ರಾಣದೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲ ನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡನೆ ದುದಾಹರಣಯೊಳಿನುದಾಹರಣಮುಮಾಗೆ ಗುಣಾರ್ಣವನ ಶರಪರಿಣತಿಯಿಂದ ಕುಲಶೈಲಂ ಬೀಟ್ಟಂತೆ ನೆಲನದಿರೆ ಬಿಲ್ಲಾಗಳ
ಕಂ11
ಚಾಗದ ನನ್ನಿಯ ಕಲಿತನ ದಾಗರಮನೆ ನಗಲ್ಲ ಕರ್ಣನೊಡಲಿಂದೆಂತುಂ | ಪೊಗಲ್ಯತೆಯದೆ ಸಿರಿ ಕರ ಮಾಗಳ್ ಕರಿಕರ್ಣತಾಳ ಸಂಚಳೆಯಾದಳ್ ||
* ೨೧೪
೨೧೩. ಕೋಪದಿಂದ ಹೊಡೆಯಲು ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ ಕಿಡಿಗಳನ್ನೂ ಕೆದರುತ್ತ ಬಡಬಾಗ್ನಿಯ ಕಾಂತಿಯನ್ನು ತಾನೇ ಪ್ರದರ್ಶಿಸುತ್ತ ಮೇಲೆ ಬಿದ್ದು ಹರಡುತ್ತ ಬಂದು ತಗಲಿದಾಗ ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು. ವll ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ವೀರ್ಯವು ಪ್ರಕಾಶಿಸಲು ಪ್ರಾಣವು ಶರೀರದಿಂದ ಹೋದರೂ ಸತ್ಯವು ಮಾತ್ರ ಹೋಗದಿರುವುದನ್ನು ಉದಹರಿಸುವಂತೆ ಅವನ ಕೀರ್ತಿಯು ಹದಿನಾಲ್ಕು ಲೋಕಗಳನ್ನೂ ಆವರಿಸಿ ಚಂದ್ರನಿರುವವರೆಗೂ ನಿಲ್ಲುವಂತೆ ಅವನ ಮುಂಡವು ಪತ್ತೆಂಟು ಬಾಣಗಳನ್ನು ಹೊಡೆದು ದೃಢವಾಗಿ ನಿಂತಿತು. ಪ್ರಕಾಶಮಾನವಾಗಿ ನಿಂತಿತು. ಪ್ರಕಾಶಮಾನವಾದ ಆ ತಲೆಯನ್ನು ಅಪಹರಣಮಾಡಿದುದು ಒಳ್ಳೆಯತನದ ಮಾರ್ಗದರ್ಶನವಾಗಲು ಅರ್ಜುನನ ಬಾಣಕೌಶಲ್ಯದಿಂದ ಮುಂಡವೂ ಕುಲಪರ್ವತವು ಬೀಳುವ ಹಾಗೆ ಭೂಮಿಯು ಕಂಪಿಸುವ ಹಾಗೆ ಬಿದ್ದಿತು. ೨೧೪. ತ್ಯಾಗ ಸತ್ಯ ಪರಾಕ್ರಮಗಳಿಗೆ ಆವಾಸಸ್ಥಾನವೆಂದು ಪ್ರಸಿದ್ಧವಾಗಿದ್ದ ಕರ್ಣನ ಶರೀರದಿಂದ ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ