________________
ಉಪೋದ್ಘಾತ | ೫೭
ಅಷ್ಟರಲ್ಲಿ ದುಃಖತಪ್ತನಾದ ಮಗನನ್ನು ನೋಡಲು ಅವನ ಮಾತಾಪಿತೃಗಳಾದ ಧೃತರಾಷ್ಟ್ರಗಾಂಧಾರಿಯರು ಬರುವುದನ್ನು ಕೇಳಿ ಅವರ ಮುಖವನ್ನು ನೋಡುವುದಕ್ಕೆ ನಾಚಿ 'ಸಂಧಿಯನ್ ಒಲ್ವುದೆ ಕಜ್ಜಂ ಎಂಬವರ್ಗಳ ಮಾತುಗೇಳ್ವನಿತನ್, ಇನ್ನೆನಗೆ ಬಿದಿ ಮಾಡಿತಾಗದೇ' ಎಂದು ಹಲುಬುತ್ತಿರುವಷ್ಟರಲ್ಲಿಯೇ ಅಲ್ಲಿಗೆ ತಾಯಿತಂದೆಗಳು ಬರುವರು, ದುರ್ಯೋಧನನು ಬಹು ವಿನಯಪೂರ್ವಕ ನಮಸ್ಕಾರಮಾಡುವನು. ಅವರು ಇವನನ್ನು ಹರಸಿ 'ನೀನಿದ್ದರೆ ಉಳಿದವರೆಲ್ಲ ಇದ್ದಹಾಗೆಯೆ, ದಯವಿಟ್ಟು ನೀನು ಪಾಂಡವರಲ್ಲಿ ಸಂಧಿಮಾಡಿಕೊಂಡು ಸುಖವಾಗಿ ಬಾಳು' ಎನ್ನುವರು. ದುರ್ಯೋಧನನಿಗೆ ಅದು ಸರ್ವಥಾ ಇಷ್ಟವಿಲ್ಲ.
ತಲೆದೋಯಲ್ಯ, ಅಣಂ, ಅಳ್ಳಿ ವೈರಿನೆಲನಂ - ಪೋಪೊಕ್ಕೆನ್, ಎಂಬನ್ನೆಗಂ ಚಲದಿಂದೆಯುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್ ನೆಲದೊಳ್ ಪಂಬಲೆ? ಮತ್ತಂ, ಎನ್ನ ಮುಳಿಸಿಂಗೆ, ಆಂ ಕಾದುವೆಂ, ಪೇಸಿದಂ ನೆಲಗಂಡಂತೆ ನೆಲಕ್ಕೆ, ಗೆಲ್ಲೊಡಂ, ಅದಂ ಚಃ ಮತ್ತಂ, ಆನಾಳ್ವೆನೇ?11 ತಪ್ಪದು ಕರ್ಣನ ಬಟಿಕೆ ಸಂಧಿಯ ಮಾತನಗೆ, ಆತನಿಲ್ಲದೆ, ಎಂ ತಪ್ಪುದೊ ರಾಜ್ಯಂ, ಈ ಗದೆಯುಂ, ಈ ಭುಜಾದಂಡಮುಳ್ಳಿನಂ ಕೊನ ರ್ತಪುದೊ ಪೇಟೆಂ, ಎನ್ನ ಪಗೆ, ನೋವಾದಂಜುವುದೇಕೆ? ನಿಂದರೇಂ ತಪ್ಪುದೂ ಪೇಟೆಂ, ಅಯ್ಯ, ನೊಸಲೊಳ್ ಬರೆದಕ್ಕರಂ, ಆ ವಿಧಾತನಾ ||
ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ಸೂಚಿಸಿ ಅವರನ್ನು ಗೌರವದಿಂದ ಬೀಳ್ಕೊಟ್ಟು ತಾನು ಮಹಾಸತ್ವನಾದುದರಿಂದ ಶಾಂತಿಯುತನಾಗಿ ಶಲ್ಯನಿಗೆ ಸೇನಾಧಿಪತ್ಯಾಭಿಷೇಕವನ್ನು ಮಾಡಿ ಕಳುಹಿಸುವನು, ಶಲ್ಯನೂ ಯುದ್ಧದಲ್ಲಿ ಮಡಿಯುವನು. ಇಲ್ಲಿ ವ್ಯಾಸಭಾರತದ ದುರ್ಯೋಧನನು ಪಲಾಯನದಲ್ಲಿ ಮನಸ್ಸುಮಾಡಿ ಮಡುವನ್ನು ಕುರಿತು ಓಡುವನು. ಆದರೆ ಪಂಪನ ದುರ್ಯೋಧನನಾದರೋ ಮದ್ರನಾಥನು ಭಕ್ಷ್ಮೀಭೂತನಾದುದನ್ನು ಕೇಳಿ
ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರರಾ ಜಾದಿ ಮಹೀಭುಜ ಧುರದೊಳ್, ಎನ್ನಯ ದೂಸನ್ ಆಟಿ ಮಟ್ಟಿದಂ ತಾದರ್, ಒಂದ ಮಯ್ಯುಟಿದುದು, ಎನಗಾವುದು ಮೆಟ್ಟದು, ಎಮ್ಮೆ ಮುಂ ದಾದ ವಿರೋಧಿಸಾಧನಮನ್, ಎನ್ನ ಗದಾಶನಿಯಿಂದ, ಉರುಳುವಂ ||
ಎಂದು 'ನಿಜಭುಜವಿಕ್ರಮೈಕಸಹಾಯಕನಾಗಿ ಗದೆಯಂ ಕೊಂಡು ಸಂಗ್ರಾಮಕ್ಕೆ ಏಕಾಕಿಯೆಂದೇಳಿಸಿದ ಸಂಜಯನಂ ನೋಡಿ ಮುನಿದು' ನೆಣದ ಪಳ್ಳಗಳನ್ನು ಪಾಯ್ದು ನೆತ್ತರ ತೊಲೆಗಳನ್ನು ದಾಟಿ ಯುದ್ಧರಂಗದಲ್ಲಿ ಹೋಗುತ್ತಿರಲಾಗಿ ಮರುಳುಗಳು ತನ್ನನ್ನು ಮರುಳೆಂದು ಕರೆಯಲು ಅದಕ್ಕೆ ಮುಗುಳಗೆ ನಕ್ಕು 'ಎನ್ನಂ ವಿಧಾತ್ರಂ ಮರುಳಾಡಿದ ಕಾರಣದಿಂದಂ ಈ ಮರುಳ ಕಣ್ಣಿಗೆ ಆಂ ಮರುಳಾಗಿ ತೋಟೆದೆನೆಂದು ನೊಂದುಕೊಂಡು ಮುಂದೆ 'ಧೃಷ್ಟದ್ಯುಮ್ನಕಚಗ್ರಹವಿಲುಳಿತಮೌಳಿಯುಂ ತದೀಯಕೌಕ್ಷೇಯಕಥಾ ವಿದಾರಿತಶರೀರನುಮಾಗಿ ಬಿಟ್ಟೆರ್ದ ಶರಾಚಾರ್ಯರ' ಕಾಣುವನು. ತತ್‌ಕ್ಷಣವೇ ಅವನ ಗುರುಭಕ್ತಿಯ ಎಲ್ಲೆಯು ಮಿತಿ ಮೀರುವುದು.