________________
೫೬ | ಪಂಪಭಾರತಂ ಫಲಿಸದಿರುವಾಗ ವೈರವಾಗಿ ಪರಿಣಮಿಸಿ ಉದ್ದಿಷ್ಟ ಕಾರ್ಯಸಿದ್ದಿಯಾಗದಿದ್ದಾಗ' ಛಲದ ರೂಪವನ್ನು ತಾಳುತ್ತದೆ. ದೂತಪ್ರಸಂಗ ಬ್ರೌಪದೀಕೇಶಾಪಕರ್ಷಣ ಪಾಂಡವರ ವನವಾಸ ಅಜ್ಞಾತವಾಸಗಳಲ್ಲಿ ಛಲವೂ ಮತ್ತಷ್ಟು ರೂಢಮೂಲವಾಗಿ, ಪಾಂಡವರನ್ನು ಆದಷ್ಟು ಹಿಂಸಿಸುವುದೂ ಅವರ ಕಷ್ಟವನ್ನು ನೋಡಿ ತಾನು ಸುಖಿಸುವುದೂ ದುರ್ಯೊಧನನ ಪರಮಧೇಯವಾಗುತ್ತದೆ. ಭೀಷ್ಮದ್ರೋಣಾದಿ ಹಿರಿಯರು ತನ್ನನ್ನೇ ಭರ್ತೃನೆ ಮಾಡುವುದು ಛಲದ ಸಾಧನೆಗೆ ಮತ್ತಷ್ಟು ಪ್ರಚೋದಕವಾಗುವುದು. ಅಂಗಾರವರ್ಮ ಮತ್ತು ಅಂಗದಪರ್ಣರ ಪ್ರಸಂಗವು ಆತ್ಮಾಭಿಮಾನವನ್ನು ತಲೆಯೆತ್ತುವಂತೆ ಮಾಡುತ್ತದೆ. ಕೃಷ್ಣ ದೌತ್ಯವು ನಿಷ್ಪಲವಾಗಲು ಯುದ್ದವು ಅನಿವಾರ್ಯವಾಗುವುದು. ಭೀಷ್ಮದ್ರೋಣಾದಿನಾಯಕರ ಅವಲಂಬನದಿಂದ ಜಯವನ್ನು ಗಳಿಸಲು ದುರ್ಯೊಧನನು ಪ್ರಯತ್ನಿಸುವನು. ಅಲ್ಪಕಾಲದಲ್ಲಿಯೆ ಅವರೆಲ್ಲ ಪಾಂಡವಪಕ್ಷಪಾತಿಗಳು, ಅಥವಾ ಮರೆಯ ಪಾಂಡವರು ಎಂಬ ಶಂಕೆಹುಟ್ಟುವುದು. ಯುದ್ಧದಲ್ಲಿ ಪುತ್ರಮಿತ್ರ ಬಾಂಧವರೆಲ್ಲ ಅಳಿಯುವರು. ಬಾಲ್ಯದಿಂದ ಒಡಲೆರಡು ಅಸುವೊಂದೆಂಬಂತಿದ್ದ ಕರ್ಣನೂ ದೈವಾಧೀನವಾಗುವನು. ಏಕಾದಶಾಹಿಣಿಯಲ್ಲಿ ತಾನೊರ್ವನೆ ಉಳಿಯುವನು. ಅವನೊಡನೆ ಅವನ ಅಭಿಮಾನವೊಂದೆ ಉಳಿಯುವುದು. ಇಲ್ಲಿಂದ ಮುಂದೆ ಪಂಪನ ದುರ್ಯೋಧನನ ಪಾತ್ರವು ವ್ಯತ್ಯಸ್ತವಾಗುವುದು. ಆ ಪಾತ್ರದ ನಿಜವಾದ ವ್ಯಕ್ತಿತ್ವವು ಪ್ರಕಾಶಕ್ಕೆ ಬರುವುದು. ಕರ್ಣವಧಾನಂತರ ಪಂಪನ ದುರ್ಯೋಧನನು ಸಂಜಯ ದ್ವಿತೀಯನಾಗಿ ರಣರಂಗದಲ್ಲಿ ಹೊರಡುವನು. ಸೂರ್ಯಪುತ್ರನ ಮರಣವಾರ್ತೆಯನ್ನು ಕೇಳಿ ಮೂರ್ಛಿತನಾಗಿ ಎಚ್ಚೆತ್ತು ಅವನಿಗಾಗಿ ದುಃಖಪಡುವನು. ಇವನ ಸ್ನೇಹದ ಉತ್ಕಟಾವಸ್ಥೆಯೆಷ್ಟು!
ನೀನುಮಗ, ಇನ್ನೆನಗೆ ಪೇಟಿನ್ ಪೆರಾರ್, ಎನಗಾಸೆ, ನಿನ್ನಂ ನಾನುಂ ಆಗಲ್ಲೆನೇ ಕೆಳೆಯ, ಬೆನ್ನನೆ ಬಂದಪೆನ್, ಆಂತರಂ ಯಮ ಸ್ಥಾನಮನೆಯ್ದಿಸುತ್ತ ಇದುವೆ ದಂದುಗಂ, ಎಂತರ್ದಮುಟ್ಟಿ ಕೂರ್ತು ಪೇಶ್ ಮಾನಸವಾಲನ್, ಅಂಗವಿಷಯಾಧಿಪ ನೀಂ ಪೊಅಗಾಗೆ ಬಾಳ್ವೆನೇ? | ಒಡಲೆರಡು, ಒಂದೆ ಜೀವಂ, ಇವರ್ಗೆ, ಎಂಬುದನ್, ಎಂಬುದು ಲೋಕಂ, ಈಗಳಾ ನುಡಿ ಪುಸಿಯಾಯು ನಿನ್ನದು ಕಿರೀಟಿಯ ಶಾತಶರಂಗಳಿಂದ ಪೋ ಪೊಡಂ, ಎನಗಿನ್ನುಂ ಈ, ಒಡಲೊಳಿರ್ದುದು ನಾಣಿಲಿಜೀವಂ, ಎಂದೂಡ, ಆ ವೆಡೆಯೊಳ್ ನಿನ್ನೊಳ್ ಎನ್ನ ಕಡುಗೂರ್ಮೆಯುಂ, ಅಜುಂ, ಅಂಗವಲ್ಲಭಾ ಅತಿಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನ್, ಆನ್ ಅಳವಂ, ಮುನ್ನಡೆದಿರ್ದು೦, ಎನ್ನರಸನ್, ಆನ್, ಏಕಿತ್ತೆನಿಲ್ಲ, ಏಕೆ, ಪೇಟ್ಟು ಅಜೆಪಿ ಒಲ್ಲೆನುಮಿಲ್ಲ ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನ್ ಆಂ
ನೆಣಿತಿ ಕೊಂದಂ, ಮುಳಿಸಿಂದಂ, ಅಂಗನೃಪತೀ ಕೌಂತೇಯರೇಂ ಕೊಂದರೇ || ಎಂದು ಕರ್ಣನ ಮರಣಕ್ಕಾಗಿ ಬಾಯಲೆದು ಪಳಯಿಸುವನು.