________________
೬೦೪] ಪಂಪಭಾರತಂ
ವ|| ಆ ಪ್ರಸ್ತಾವದೊಳ್ಉll ಮಂತ್ರ ಪದಪ್ರವೀಣ ಬಹು ಸಾಧನ ಹೂಂಕರಣಾದಿ ಮಂತ್ರಮಾ
ಮಂತ್ರಿತ ಡಾಕಿನೀ ದಶನ ಘಟ್ಟನ ಜಾತ ವಿಭೀಷಣಂ ಮದೇ | ಭಾಂತ್ರ ನಿಯಂತ್ರಿತಾಶ್ವ ಶವ ಮಾಂಸ ರಸಾಸವ ಮತ್ತಯೋಗಿನೀ ತಂತ್ರವಿದೇನಗುರ್ವನೊಳಕೊಂಡುದೊ ಕರ್ಣನ ಗೆಲ್ಲ ಕೊಳ್ಳುಳಂ || ೧೨೦
ವ|| ಅನ್ನೆಗಮಿತ್ತ ಸಂಸಪ್ತಕ ನಿಕುರುಂಬದೊಳಗೊರ್ವರುಮಂ ಕಿಟಿವೀಲಲೀಯದೆ ರಸಮಂ ಕೊಲ್ವಂತಂತಾನುಂ ಕೊಂದು ಕರ್ಣನೊಳ್ ಪೊಣರಲ್ ಬರ್ಪ ವಿಕ್ರಾಂತ ತುಂಗಂ ನಿಜ ಪತಾಕಿನಿಯ ನಡುವೆ ಮಳವ ಪತಾಕಾ ವಿರಾಜಮಾನುಮಪ್ಪ ತಮ್ಮಣನ ರಥಮಂ ಕಾಣದೆ ಕೌರವಬಳಜಳನಿಧಿಯೊಳ್ ಬಳ್ಳಳ ಬಳದೊಗದ ಕೇಸುರಿಯಂತೆ ತಟತಟಿಸಿ ಮಿಳಿರ್ವ ಪವನತನೂಜನ ಕೇಸರಿಕೇತನಮಪ್ಪ ಪಬಯಿಗೆಯಂ ಕಂಡು ಮುಟ್ಟಿ ವರ್ಷಗಮರಸನಂ ಬೀಡಿಂಗೆ ಕಳಿಪಿ ಮಗುಟ್ಟು ಬಂದ ನಕುಳ ಸಹದೇವರಿಂದರವಿಂದಬಾಂಧವತನೂಜನ ಮಹಾ ಪ್ರಹರಣಹತಿಯೊಳ್ ಯಮನಂದನನ ನೋವುಮನಾತ್ಮೀಯಬಲದ ನಾಯಕರ ಸಾವುಮನಳದುಚಂ|| ಪವನಸುತಂಗೆ ಪಾಸಟಿಗಳೊರ್ವರುಮಿದಳೆಂದಮಾಂತ ಕಾ
ರವಬಲದುರ್ಕನೊಂದಿನಿಸು ಮಾಣಿಸಿ ಪೋಪಮಿಳೇಶನಲ್ಲಿಗಂ || ದವನತ ವೈರಿ ವೈರಿಬಲ ವಾರಿಧಿಯಂ ವಿಶಿಖರ್ವವಹಿಯಿಂ ತವಿಸಿ ಮರುತ್ತನೂಭವನಲ್ಲಿಗೆ ಪೇಟ್ಟಿರದೆ ಭೂಪನಂ ||
ಇದಕ್ಕಿಂತ ಬೇರೆ ಕಳಂಕವುಂಟೇ ? ನನಗೆ ಆ ದೋಷವು ಆಗಬಾರದು' ಎಂದು ಸೂರ್ಯಪುತ್ರನಾದ ಕರ್ಣನು ರಭಸದಿಂದ ಹೊಡೆಯಲು ಹರಿತವಾದ ಬಾಣಗಳು ಪೂರ್ಣವಾಗಿ ಚಕ್ ಚಕ್ ಎಂದು ಕತ್ತರಿಸಲು ಶತ್ರುರಾಜರ ತಲೆಗಳು ಮೊಕ್‌ಮೊಕ್ ಎಂದು ಉರುಳಿದುವು. ವಗ ಆ ಸಮಯದಲ್ಲಿ ೧೨೦. ರಣಮಂತ್ರ ಪಠನದಲ್ಲಿ ಪ್ರವೀಣರಾದ ಅನೇಕ ಸೈನಿಕರ ಹುಂಕಾರವೇ ಮೊದಲಾದ ಮಂತ್ರವನ್ನುಳ್ಳುದೂ ಆಹ್ವಾನಿತರಾದ ಪಿಶಾಚಿಗಳ ಹಲ್ಲುಕಡಿಯುವುದರಿಂದ ಹುಟ್ಟಿ ವಿಕಾರವೂ ಭಯಂಕರವೂ ಆದ ಶಬ್ದವನ್ನುಳ್ಳುದೂ ಮದ್ದಾನೆಯ ಕರುಳುಗಳಿಂದ ಕಟ್ಟಲ್ಪಟ್ಟ ಕುದುರೆಯ ಹೆಣದ ಮಾಂಸದಲ್ಲಿ ಆಸಕ್ತವಾದ ಮದಿಸಿರುವ ಮರುಳುಗಳ ಸಮೂಹ ವನ್ನುಳ್ಳದ್ದೂ ಆಗಿ ಕರ್ಣನು ಗೆದ್ದ ಯುದ್ಧರಂಗವು ವಿಶೇಷ ಭಯಂಕರವಾಗಿತ್ತು. ವ|| ಅಷ್ಟರಲ್ಲಿ ಈ ಕಡೆ ಸಂಸಪ್ತಕರ ಸಮೂಹದಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲು ಅವಕಾಶ ಕೊಡದಂತೆ ಪಾದರಸವನ್ನು ಮರ್ದಿಸುವ ಹಾಗೆ ಹೇಗೋ ಕೊಂದು ಕರ್ಣನಲ್ಲಿ ಯುದ್ದಮಾಡಲು ಬರುತ್ತಿರುವ ಉತ್ತಮ ಪೌರುಷಶಾಲಿಯಾದ ಅರ್ಜುನನು ತನ್ನ ಸೈನ್ಯಮಧ್ಯದಲ್ಲಿ ಧ್ವಜದಿಂದ ವಿರಾಜಮಾನವಾಗಿ ಮೆರೆಯುವ ತಮ್ಮಣ್ಣನ ರಥವನ್ನು ಕಾಣದೆ ಕೌರವಸೇನಾಸಮುದ್ರದಲ್ಲಿ ವಿಶೇಷವಾಗಿ ಬೆಳೆದು ಹಚ್ಚಿದ ಕೆಂಪುಬಣ್ಣದ ಉರಿಯಂತೆ ತಳತಳಿಸಿ ಅಲುಗಾಡುವ ಸಿಂಹದ ಗುರುತಿನ ಬಾವುಟವನ್ನು ನೋಡಿ ಹತ್ತಿರಕ್ಕೆ ಬರುವಷ್ಟರಲ್ಲಿ ಧರ್ಮರಾಯನನ್ನು ಬೀಡಿಗೆ ಕಳುಹಿಸಿ ಹಿಂತಿರುಗಿ ಬಂದ ನಕುಲಸಹದೇವರಿಂದ ಕರ್ಣನ ಬಲವಾದ ಪೆಟ್ಟಿನಿಂದುಂಟಾದ ಧರ್ಮರಾಯನ ವ್ಯಥೆಯನ್ನೂ ತಮ್ಮ ಸೈನ್ಯದ ನಾಯಕರ ಸಾವನ್ನೂ ತಿಳಿದನು. ೧೨೧. ಭೀಮನಿಗೆ