________________
ದ್ವಾದಶಾಶ್ವಾಸಂ | ೬೦೩ ಚಂll ಎರೆದನ ಪೆಂಪುಮಾಂತಧಿಕನಪ್ಪನ ಹೆಂಪುಮನೀವ ಕಾವ ನಿ
ನೈರಡುಗುಣಂಗಳುಂ ಬಯಸುತಿರ್ಪುವು ನಿನ್ನೊಳಿವಂದಿರೇತಾಳ್ | ದೊರೆ ದೊರೆವತ್ತ ಕಾಳೆಗದ ಗೆಲ್ಲದ ಸೋಲದ ಮಾತು ನಿನ್ನೊಳಂ
ನರನೊಳಮಿರ್ದುದುಯ್ದ ಸಿಸುಗಳ ಸಿಬಿರಕ್ಕೆ ಬಬಲ್ಲ ಭೂಪನಂ || ೧೧೮
ವ! ಅದಲ್ಲದೆಯುವತ್ತ ದುರ್ಯೋಧನಂಗಂ ಭೀಮಂಗಮನುವರಂ ಪೂಣರ್ದಿದರ್ುದರಸನಂ ಬೇಗಂ ಪೋಗಿ ಕೆಯೊಲ್ವಮಂದು ಬರೆವರೆ ಯುಧಿಷ್ಠಿರನಟಿಯೆನೊಂದ ನೋವು ಕಂಡು ಪಾಂಡವಬಲದ ನಾಯಕರುತ್ತಾಯಕರಾಗಿ ತಂತಮ್ಮ ಚತುರ್ವಲಂಗಳನೊಂದು ಮಾಡಿಕೊಂಡು ಕಾಲಾಗ್ನಿಯಂ ಕಿಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು ಕಣಯ ಕಂಪಣ ಮುಸಲ ಮುಸುಂಡಿ ಭಂಡಿವಾಳ ತೋಮರ ಮುದ್ಧರ ಮಹಾ ವಿವಿಧಾಯುಧಂ ಗಳೊಳಿಟ್ಟುಮೆಚ್ಚುಮಿದುಮಗುರ್ವುಮದ್ಭುತಮುಮಾಗೆ ಕಾದುವಾಗಳ್ಚoll ಎನಗಮರಾತಿ ಸಾಧನಮಿದಿರ್ಚುಗುಮಳದಿದಿರ್ಚಿ ಬಾಲ್ಕುಮಿ
ನೈನ ಪತುಂಟಿ ದೋಷಮನಗಂತದ ದೋಷಮದಾಗಲಾಗದಂ | ದಿನ ತನಯಂ ತಗುಳಿಗೆ ನಿಶಾತ ಶರಾಳಿಗಳಿಯೆ ಚಕ್ಕು ಚ
ಕನೆ ಕೊಳೆ ಮೊಕ್ಕುಮೊಕ್ಕನೆ ಶಿರಂಗಳುರುಳುವು ವೈರಿಭೂಪರಾ || ೧೧೯ ನಕುಲಸಹದೇವರಿಬ್ಬರೂ ಬಂದು ಎದುರಿಸಲು ಇವರನ್ನು ಏನುಮಾಡುವುದು (ತನಗೆ ಸಮಾನರಲ್ಲದ ಇವರೊಡನೆ ಏನು ಯುದ್ಧಮಾಡುವುದು) ಎಂದು ದಯೆತೋರಿ ಶಲ್ಯನ ಮನಸ್ಸನ್ನು ಪರೀಕ್ಷಿಸೋಣವೆಂದು ಪ್ರಶ್ನೆಮಾಡಲು, ಶಲ್ಯನು ತನ್ನಳಿಯಂದಿರಾದ ನಕುಲಸಹದೇವರ ಸಾವಿಗೆ ಸೈರಿಸಲಾರದೆ ಹೀಗೆಂದನು -೧೧೮. ನಿನ್ನ ದಾನಮಾಡುವ (ಔದಾರ್ಯ), ರಕ್ಷಿಸುವ (ಪರಾಕ್ರಮ) ಗುಣಗಳು ಬೇಡುವವನ ಆಧಿಕ್ಯವನ್ನೂ ಪ್ರತಿಭಟಿಸಿದ ಪರಾಕ್ರಮಿಯ ಆಧಿಕ್ಯವನ್ನೂ ಬಯಸುವುವು. ನಿನ್ನಲ್ಲಿ ಈ ನಕುಲಸಹದೇವರು ಯಾವಗುಣಗಳಲ್ಲಿ ಸಮಾನರು. ಯುದ್ಧದ ಜಯಾಪಜಯಗಳ ಮಾತು ನಿನಗೆ ಸಮಾನತೆಯನ್ನು ಪಡೆದಿರುವ ಅರ್ಜುನನಲ್ಲಿಯೂ ನಿನ್ನಲ್ಲಿಯೂ ಇದೆ. ಈ ಶಿಶುಗಳು ಬಳಲಿರುವ ಧರ್ಮರಾಯನನ್ನು ಬೀಡಿಗೆ ಕರೆದುಕೊಂಡು ಹೋಗಲಿ. ವ|| ಅದಲ್ಲದೆಯೂ ಆ ಕಡೆ ದುರ್ಯೊಧನನಿಗೂ ಭೀಮನಿಗೂ ಯುದ್ಧವು ಹೆಣೆದುಕೊಂಡಿದೆ. ಬೇಗಹೋಗಿ ರಾಜನನ್ನು ರಕ್ಷಿಸೋಣ ಎಂದು ತೇರನ್ನು ಬೇರೆಕಡೆಗೆ ತಿರುಗಿಸಿದನು. ಧರ್ಮರಾಜನು ಸಾಯುವಷ್ಟು ಬಲವಾಗಿ ನೊಂದನೋವನ್ನು ಪಾಂಡವಬಲದ ನಾಯಕರು ನೋಡಿ ಪ್ರತಿಭಟಿಸಿದವರಾಗಿ ತಮ್ಮತಮ್ಮ ಚತುರಂಗ ಬಲವನ್ನು ಒಟ್ಟಾಗಿ ಸೇರಿಸಿಕೊಂಡು ಕಾಲಾಗ್ನಿಯನ್ನು ಬೆಂಕಿಯ ಕಿಡಿಗಳು ಬಳಸಿ ಕೊಳ್ಳುವ ಹಾಗೆ ಕರ್ಣನನ್ನು ಮುತ್ತಿ ಆವರಿಸಿಕೊಂಡರು. ಕಣಯ, ಕಂಪಣ, ಮುಸಲ, ಮುಸುಂಡಿ, ಭಿಂಡಿವಾಳ, ತೋಮರ, ಮುದ್ಧರ ಎಂಬ ದೊಡ್ಡದಾದ ಬೇರೆಬೇರೆಯ ನಾನಾವಿಧವಾದ ಆಯುಧ ವಿಶೇಷಗಳಿಂದ ಎಸೆದೂ ಹೊಡೆದೂ ಕತ್ತರಿಸಿಯೂ ಭಯಂಕರವೂ ಆಶ್ಚರ್ಯಕರವೂ ಆಗುವ ಹಾಗೆ ಯುದ್ಧಮಾಡಿದರು. ೧೧೯. 'ನನ್ನನ್ನು ಶತ್ರುಸೈನ್ಯವು ಎದುರಿಸುತ್ತಿದೆ; ಹೆದರದೆ ಪ್ರತಿಭಟಿಸಿ ಇನ್ನೂ ಬದುಕಿದೆ ಎಂದರೆ ನನಗೆ
39