________________
ದ್ವಾದಶಾಶ್ವಾಸಂ | ೫೭೫ ವ|| ಎಂಬುದುಂ ತೈಲೋಕ್ಯ ಧನುರ್ಧರನಪ್ಪಯ್ಯಯ್ಯನ ಗಂಡನಾತನೀ ಮೀಂಗುಲಿಗಂ ಮೆಚ್ಚನಿವನಂ ಮುಂ ಕೊಂದು ಬಲೆಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿಟ್ಟು ಕರ್ಣನ ಮೇಲವಾಯ್ತುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ
ಕ೦ll ಅಸದಳವಾಗಿಯುಮೀ ನ - ಮ್ಮ ಸೈನಮಿಂತೊರ್ವರೊರ್ವರೊಳ್ ಸೆಣಸಿ ಖಳ |
ವ್ಯಸನದೊಳೆ ಕೆಟ್ಟುದಲ್ಲದೆ
ಡ ಸುಯೋಧನ ನಿನಗೆ ಮಲೆವ ಮಾರ್ವಲಮೋಳವೇ || ಈ ವll ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾದೆ ಸುಯೋಧನನ ನಿಂತೆಂದಂಖಚರಫ್ತುತಂ | ಬೀರವಟ್ಟಮನಾನಿರೆ ನೀನೀ ಸೂತಸುತಂಗಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತಿ ಖಳನಿಲ್ಲಿ ಧನಂಜಯ | ಕ್ರೂರಬಾಣಗಹಾವಳಿಯಿಂದಾಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯಂ ಗಡಾ || ೪೩ . ವ|| ಎಂಬುದುಂ ಮುಳಿಸುವರಸಿದ ಮುಗುಳಗೆಯಿಂ ಕರ್ಣನಿಂತೆಂದಂಮll ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳನ್ನ ಕೆ
ಯುವಿನೊಳ ತೀರದುದಾವ ಕೆಯ್ಯುವಿನೊಳಂ ತೀರ್ದಪುದೇ ನಿನ್ನ ಕೆ || ಯುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ಯುವಿ ,
ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕರೇ || - ೪೪ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇನು ?' (ಎಷ್ಟು ಪ್ರೀತಿಯೋ) ವ|| ಎನ್ನಲು 'ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಬೆಸ್ತರವನು (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು) ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ' ಎಂದು ಕತ್ತಿಯನ್ನು ಒರೆಯಿಂದ ಹೊರಕ್ಕೆ ಸೆಳೆದು ಕರ್ಣನ ಮೇಲೆ ಹಾಯ್ದನು. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು - ೪೨. `ದುರ್ಯೊಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸುವ ಪ್ರತಿಸೈನ್ಯವಿರುತ್ತಿದ್ದಿತೆ ?' ವಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು - ೪೩. 'ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ. ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು-೪೪, 'ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಸಾಮರ್ಥ್ಯವುಳ್ಳ ನನ್ನ