________________
೫೭೪ | ಪಂಪಭಾರತಂ ಕoll ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಲ್ಲಮ್ಮ | ಬುಗಳುಮವರಿತ್ತ ನಲ್ಲಂ ಬುಗಳೆನೆ ಬಳೆಗಾಯದಂತು ಚಲಮನೆ ಕಾವೆಂ 1
೩೯ ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟ ರಿಪುನೃಪಬಲಕ್ಕೆ ತೋಳೆ ಬಿಡುವುದೆನೆ ಕಳಶಜನಿಂ ಬಟೆಕ್ಕೆ ಕರ್ಣಂಗೆಂದು ನುಡಿದ ಬೀರವಟ್ಟಮನೆಂತು ಕಟ್ಟುವೆನೆಂದೊಡಶ್ವತ್ಥಾಮ ನಿಂತೆಂದಂ
ಚಂಗಿ ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ರೊಡೆ ಯುದ್ದದೊಳ್ ವೃಷ | ಧ್ವಜನುಮನಿಕ್ಕಿ ಗೆಲ್ಲರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ ತಜನಿಳವು ಗಡಂ ಪಗೆಯನೇಂ ಗಳ ಪಟ್ಟಮ ಪಾಟಿ ತಿಂಬುದೇ || ೪೦
ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂಚಂ|| ಎನಿತಳವುಳ್ಕೊಡಂ ದ್ವಿಜನ ಗಂಡಗುಣಕಗಿವರಾರೊ ನೆ |
ಟ್ಟನೆ ವಿಷಮೊಳ್ಳೆಗುಳೊಡಮದೊಳ್ಳೆಯ ಕಾಳಿಯ ನಾಗನಾಗದ | ಜೈನ ಪಡೆಮಾತದೊಂದೆ ನೆವಮಾಗಿರೆ ಕೆಯ್ಯುವನಿಕ್ಕಿ ಸತ್ತ ಸಾ ವಿನ ಪಡಿಚಂದಮಾಗಿಯುಮಿದೇಂ ನಿಮಗಯೊ ಗಂಡುವಾತುಗಳ್|| ೪೧
೩೯. 'ನಮ್ಮಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮ ಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು ವಂಶವನ್ನು (ಕ್ಷತ್ರಿಯ ವಂಶವನ್ನು ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಧಿಸುತ್ತೇನೆ' ವ|| ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೊಧನನಿಗೆ ಹೀಗೆ ಹೇಳಿದನು- 'ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು' ಎನ್ನಲು 'ದ್ರೋಣನ ಬಳಿಕ ಕರ್ಣನಿಗೆ' ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೪೦. ರಾಜರೆನ್ನುವವರು ವಾಸ್ತವವಾಗಿಯೂ ಬುದ್ದಿಯಿಲ್ಲದವ ರೆಂಬುದು ಸತ್ಯ. ಅದು ಹಾಗಿರಲಿ; ಎಲೈ ದುರ್ಯೋಧನನೇ, ಬಹಳವಾಗಿ ಪ್ರೀತಿಸಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ಅಭಿಮುಖವಾಗಿ ನಿಂತು ಕರ್ಣನು ಯುದ್ದಮಾಡುತ್ತಾನಲ್ಲವೇ? ಕಟ್ಟುವ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನುವುದೇ ಏನು? ವll ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆಂದನು ೪೧. 'ಎಷ್ಟು ಶಕ್ತಿಯಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರಾರಿದ್ದಾರೋ? ಕೇರೆ ಹಾವಿಗೆ ನೇರವಾಗಿ ವಿಷವಿದ್ದರೂ, ಅದು ಒಳ್ಳೆಯೇ (ಕೇರೆಯ ಹಾವೇ); ಕೃಷ್ಣಸರ್ಪವಾಗಲಾರದು. ಪೌರುಷದ ಸುದ್ದಿಯೊಂದಿದೆ! ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ