________________
೫೪೬ | ಪಂಪಭಾರತಂ
ವ|| ಅಂತು ಮನಃಪವನವೇಗದಿಂ ಕೈಲಾಸ ಶೈಳಮನೆಮ್ಮೆ ಕದನತ್ರಿಣೇತ್ರನಂ ತ್ರಿಣೇತ್ರನ ಮುಂದಿಟಿಪುವುದುಮಭವ ತನ್ನ ಪಾದಪದಂಗಳೆಯಗಿದತಿರಥ ಮಥನನುಮಂ ಮಧುಮಥನನು ಮನಮ್ಮತದೃಷ್ಟಿಯಿಂ ನೋಡಿ ಪಾಶುಪತದ ಮುಷ್ಟಿಯಂ ಬೇಡಲೆಂದು ಬಂದುದಂ ತನ್ನ ದಿವ್ಯಜ್ಞಾನದಿಂದಮಣಿದುಕ೦ll ಅಪಗತ ಕಪಟದೆ ನಟನದ
ನುಪದೇಶಂಗೆಯು ಪರಸಿ ಪೋಗೆನೆ ಪೊಡೆಮ್ | ಟ್ಟು ಪಸಾದವೆಂದ ಹರಿಗನ
ನುಪೇಂದ್ರನಾ ದರ್ಭಶಯನ ತಳಕಿಟೆಪುವುದುಂ || ' ೧೩೧ ವ|| ಅಂತುದಾರ ಮಹೇಶ್ವರನೀಶ್ವರ ವರಪ್ರಸಾದಮೆಲ್ಲಂ ತನಗೆ ನನಸಾಗೆಯುಂ ಕನಸಿನಂದಮಾಗಿ ತೋತಿ ಮಂಗಳಪಾಠಕರವಂಗಳೊಳ್ ಭೋಂಕನೆಂತನನ್ನೆಗಂಕ೦ll ತನ್ನ ಸುತನಲಲೊಳರ್ಜುನ
ನೆನ್ನುದಯಮನೆಯ ಪಾರ್ದು ಪಗೆವರ ಬೇರೋಲ್ | ಬೆನ್ನೀರನೆಯದಿರನದ ನಾನೊಡುವೆನೆಂಬ ತೆಲದಿನಿನನುದಯಿಸಿದಂ ||
೧೩೨ ವ|| ಅಗಳುಭಯ ಸೈನ್ಯಾಂಬುರಾಶಿಗಳಂಬುರಾಶಿಗಳ ನೆಲೆಯಿಂ ತಳರ್ವಂತೆ ತಳರೆ ಕಳಶಸಂಭವನಂದಿನನುವರದೊಳ್ ತನ್ನಂ ಪರಿಚ್ಛೇದಿಸಿ ಕನಕ ಕಳಶ ಸಂಭ್ರತ ಮಂಗಳ ಜಳಂಗಳಂ
ಪಾಶುಪತದಿಂದಲ್ಲದೆ ಸಾಯುವುದಿಲ್ಲ. ಹಾಗೆ ಅದನ್ನು ಈಶ್ವರನು ಪ್ರೀತಿಯಿಂದ ಕೊಟ್ಟಿದ್ದರೆ ತಾನೆ ಏನು ಪ್ರಯೋಜನ? ಅದರ ಪ್ರಯೋಗ ಮಂತ್ರವನ್ನು ಕೊಟ್ಟಿಲ್ಲವಲ್ಲ; ಅದನ್ನು ಭಕ್ತಿಯಿಂದ ಬೇಡಬೇಕಾಗಿದೆ ಎಂದು ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದುಕೊಂಡು ಹೋದನು. ವ|| ಮನೋವೇಗ ವಾಯುವೇಗದಿಂದ ಕೈಲಾಸಪರ್ವತವನ್ನು ಸೇರಿ ಅರ್ಜುನನನ್ನು ಈಶ್ವರನ ಮುಂದೆ ಇಳಿಸಿದನು. ಶಿವನು ತನ್ನ ಪಾದಕಮಲಗಳಿಗೆರಗಿದ ಅರ್ಜುನನನ್ನೂ ಕೃಷ್ಣನನ್ನೂ ಅಮೃತದೃಷ್ಟಿಯಿಂದ ನೋಡಿದನು. ಪಾಶುಪತದ ಮುಷ್ಟಿಯನ್ನು ಬೇಡುವುದಕ್ಕಾಗಿ ಬಂದಿರುವುದನ್ನು ತನ್ನ ದಿವ್ಯಜ್ಞಾನದಿಂದ ತಿಳಿದನು. ೧೩೧. ನಿಷ್ಕಪಟದಿಂದ ಆ ಮಂತ್ರೋಪದೇಶ ಮಾಡಿ ಹರಸಿದನು. ನಮಸ್ಕರಿಸಿ ಅನುಗ್ರಹೀತನಾದೆನೆಂದು ಹೇಳಿದ ಅರ್ಜುನನನ್ನು ಕೃಷ್ಣನು ದರ್ಭೆಯಿಂದ ಮಾಡಿದ (ಹಿಂದಿನ ಹಾಸಿಗೆಯ ಮೇಲಕ್ಕೆ ತಂದು ಇಳಿಸಿದನು. ವಉದಾರಮಹೇಶ್ವರನಾದ ಅರ್ಜುನನು ಈಶ್ವರನ ವರಪ್ರಸಾದವೆಲ್ಲ ತನಗೆ ಪ್ರತ್ಯಕ್ಷನಾಗಿದ್ದರೂ ಕನಸಿನಂತೆ ತೋರುತ್ತಿರಲು ಸ್ತುತಿಪಾಠಕರ ಮಂಗಳಧ್ವನಿಯಿಂದ ಭೋಂಕನೆ ಎಚ್ಚರಗೊಂಡನು; ಅಷ್ಟರಲ್ಲಿ ೧೩೨. ತನ್ನ ಮಗನ ಸಾವಿನ ದುಃಖದಲ್ಲಿ ಅರ್ಜುನನು ನನ್ನುದಯವನ್ನೇ ನಿರೀಕ್ಷಿಸುತ್ತಿದ್ದು ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ; ಅದನ್ನು ನಾನು ನೋಡುತ್ತೇನೆ ಎಂಬ ರೀತಿಯಲ್ಲಿ ಸೂರ್ಯನು ಉದಯವಾದನು. ವಆಗ ಎರಡು ಸೇನಾಸಮುದ್ರಗಳೂ ನೆಲೆಯಿಂದ ಹೊರಡುವಂತೆ ಹೊರಟರು. ದ್ರೋಣಾಚಾರ್ಯನು ಆ ದಿನದ ಯುದ್ಧದಲ್ಲಿ ತನ್ನನ್ನು