________________
ಏಕಾದಶಾತ್ನಾಸಂ | ೫೪೫ ಮll ಬಿಜಯಂಗೆಯ್ಯನ ಪೋಪುದುಂ ನೃಪನದಂ ಧರ್ಮಾತ್ಮಜಂ ಕೇಳು ಪೇ
ಅಜಿತಂಗಾ ಹರಿ ಪೇಟ್ಟುದೊಂದು ನಯದಿಂದಾ ರಾತ್ರಿಯೋಲ್ ಪೋಗಿ ಕುಂ | ಭಜನಂ ಕಂಡು ವಿನಮ್ರನಾಗಿ ನುಡಿದಂ ನೀಮಿಂತು ಕೆಯೋಂಡು ಕಾ ದ ಜಗತ್ತೂಜಿತ ಬೆಟ್ಟನಾದೊಡಮಗಿಂ ಬಾಯ್ತಾಸೆಯಾವಾಸೆಯೋ 1 ೧೨೭ ಕoll - ನಿಮ್ಮಳವನಣಿದು ಮುನಮೆ
ನಿಮ್ಮ ಪ್ರಾರ್ಥಿಸಿದೆಮೀಗಳದುವಂ ಮಂದಿರ್ | ನಿಮ್ಮಯ ಧರ್ಮದ ಮಕ್ಕಳ ಎಮ್ಮಂ ಕಡೆಗಣಿಸಿ ನಿಮಗೆ ನೆಗಟ್ಟುದು ದೊರೆಯೇ || ೧೨೮ ಎನೆ ಗುರು ಕರುಣಾರಸಮದು ಮನದಿಂ ಪೊಅಪೊಸ್ಟ್ ನಿನಗೆ ಜಯಮಕ್ಕುಮನಂ | ತನ ಪೇಟ್ಟ ತಂದೆ ನೆಗಟನೆ
ವಿನಯದ ಬೀಳ್ಕೊಂಡು ನೃಪತಿ ಬೀಡಂ ಪೊಕ್ಕಂ || ೧೨೯ ವ|| ಆಗಳಾರೂಢಸರ್ವಜ್ಞ ಪ್ರತಿಜ್ಞಾರೂಢನಾಗಿ ಗಂಗಾನದೀ ತರಂಗೋಪಮಾನ ದುಕ್ಲಾಂಬರ ಪರಿಧಾನನುಮಾಗಿ ಧವಳಶಯಾತಳದೊಳ್ ಮಜ್ದೂಅಗಿದನಮೋಘಾಸ್ತ್ರ ಧನಂಜಯನಂ ಪುಂಡರೀಕಾಕ್ಷಂ ನೋಡಿಚoll ಅರಿದು ಕೋಲಿ ಸೈಂಧವನನಾಜಿಯೊಳೀತನ ಪೂಣ್ಣ ಪೂಣೆಯುಂ
ಪಿರಿದವನುಗ್ರ, ಪಾಶುಪತ ಬಾಣದಿನಲ್ಲದೆ ಸಾಯನಂತದಂ | ಹರನೊಸೆದಿತ್ತುಮೇನದು ಮುಷ್ಟಿಯನೀಯನೆ ಬೇಡವೇಚ್ಚುದಾ ದರದದನೆಂದು ಚಕ್ರಿ ಶಿವನಲ್ಲಿಗೆ ಕೊಂಡೊಗದಂ ಕಿರೀಟಿಯಂ || ೧೩೦
೧೨೭. ನೀನು ದಯಮಾಡಿಸು ಎನ್ನಲು ರಾಜನು ಹೊರಟು ಹೋದನು, ಅದನ್ನು ಧರ್ಮರಾಯನು ಕೇಳಿ ಕೃಷ್ಣನಿಗೆ ತಿಳಿಸಿದನು. ಅದನ್ನು ಹೇಳಿದ ಒಂದು ನೀತಿ (ಉಪಾಯ)ಯಿಂದ ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು ಬಹಳ ನಮ್ರತೆಯಿಂದ ಹೇಳಿದನು. ನೀವು ಹೀಗೆ ಅಂಗೀಕಾರಮಾಡಿ (ದುರ್ಯೋಧನನ ಪಕ್ಷವನ್ನು) ಕರುಣವಿಲ್ಲದೆ ಕಾದಿದರೆ ಲೋಕಪೂಜ್ಯರಾದವರೇ ನಮಗೆ ಇನ್ನು ಬಾಳುವಾಸೆ ಯಾವುದು? ೧೨೮. ನಿಮ್ಮ ಶಕ್ತಿಯನ್ನು ತಿಳಿದು ಮೊದಲೇ ನಿಮ್ಮನ್ನು ಪ್ರಾರ್ಥಿಸಿದನು. ಈಗ ಅದನ್ನೂ ಮರೆತು ನಿಮ್ಮಧರ್ಮದ ಮಕ್ಕಳಾದ ನಮ್ಮನ್ನು ಉದಾಸೀನ ಮಾಡಿ ನೀವು ನಡೆದುಕೊಳ್ಳುವುದು ಸರಿಯೇ ? ೧೨೯. ಎನ್ನಲು ಆಚಾರ್ಯನಾದ ದ್ರೋಣನು ಕರುಣಾರಸವು ಮನಸ್ಸಿನಿಂದ ಹೊರಹೊಮ್ಮುತ್ತಿರಲು 'ಕೃಷ್ಣನು ಹೇಳಿದ ಹಾಗೆ ಮಾಡು, ನಿನಗೆ ಜಯವಾಗುತ್ತದೆ' ಎಂದನು. ವಿನಯದಿಂದ ಅಪ್ಪಣೆಯನ್ನು ಪಡೆದು ಹೊರಟು ಧರ್ಮರಾಜನು ತನ್ನ ಮನೆಯನ್ನು ಪ್ರವೇಶಿಸಿದನು. ವ|| ಆಗ ಆರೂಢಸರ್ವಜ್ಞನಾದ ಅರ್ಜುನನು ಪ್ರತಿಜ್ಞೆಯನ್ನು ಮಾಡಿದವನಾಗಿ ಗಂಗಾನದಿಯ ಅಲೆಗಳಿಗೆ ಸಮಾನವಾದ ರೇಷ್ಮೆಯ ಬಟ್ಟೆಯ ಹೊದಿಕೆಯುಳ್ಳವನಾಗಿ ಬಿಳಿಯ ಹಾಸಿಗೆಯ ಮೇಲೆ ಮರೆತು ಮಲಗಿದನು. ಹಾಗೆ ಮಲಗಿದ್ದ ಅಮೋಘಾಸ್ತಧನಂಜಯನಾದ ಅರ್ಜುನನನ್ನು ಕೃಷ್ಣನು ನೋಡಿ -೧೩೦. ಸೈಂಧವನನ್ನು ಯುದ್ಧದಲ್ಲಿ ಕೊಲ್ಲುವುದು ಅಸಾಧ್ಯ. ಇವನು (ಅರ್ಜುನನು) ಮಾಡಿದ ಆಜ್ಞೆಯೂ ಗುರುತರವಾದುದು. ಜಯದ್ರಥನು ಉಗ್ರವಾದ