________________
ಏಕಾದಶಾಶ್ವಾಸಂ | ೫೪೩ ಬಿಸಜಭವನಕ್ಕೆ ಮೃಡನ ಕೃಸುರಾಂತಕನಕ್ಕೆ ಕಾವೊಡಂ ನಾಳಿನೋಳ | ರ್ವಿಸೆ ಕೊಂದು ಸಿಂಧುರಾಜನ ಬಸಿಯಿಂ ಪೊನ್ನ ಮಗನನಾಂ ತೆಗೆಯದಿರೆಂ ||
೧೨೦
ಕೊಂದೆನ್ನ ಮಗನನಿಂ ಭಯ ದಿಂದಂ ರಸೆವೊಕ್ಕುಮಜನ ಗುಂಡಿಗೆವೊಕ್ಕಂ | ಮಂದರಧರನೀ ಪೊರ್ಕು
ಪೊಂದಾವರೆವೊಕ್ಕು ಮೇಣವ ಬರ್ದುಕುವನೇ || ೧೨೧ - ಚ೦ll ಪಡೆ ಪಡೆಮೆಚೆಗಂಡನೆನೆ ಸಂದರಿಕೇಸರಿಯಂಬಗುರ್ವು ನೇ
ರ್ಪಡೆ ನೆಗಾನಣಂ ಸೆಡೆದು ಮಾಣೆನೆ ನಾಳೆ ದಿನೇಶನಸ್ತದೆ ! ತುಡುಗದ ಮನ್ನ ಸೈಂಧವನಗುರ್ವಿಸೆ ಕೊಲ್ಲದೊಡೇನೊ ಗಾಂಡಿವಂ
ಬಿಡಿದನೆ ಚಿಃ ತೊವಲ್ವಿಡಿದೆನಲ್ಲನೆ ವೈರಿಗೆ ಯುದ್ಧರಂಗದೊಳ್ || ೧೨೨
ವll ಎಂದು ನೃಪ ಪರಮಾತ್ಮ ಕೃತಪ್ರತಿಜ್ಞನಾದುದಂ ಸೈಂಧವನ ಸಜ್ಜನಂ ದುಜ್ಯೋದನನ ತಂಗೆ ದುಶ್ಯಳೆ ಕೇಳು ಮಲಮಲ ಮೃಲುಗಿ ತಮ್ಮಣ್ಣನಲ್ಲಿಗೆ ವಂದು ಕಾಲ ಮೇಲೆ ಕವಿದು ಪಟ್ಟುಕ೦ll ತನ್ನ ಸುತನವಿಯಲಟಿಯಲ್
ನಿನ್ನಯ ಮಯ್ತುನನನರ್ಜುನಂ ಪೂನದ | ರ್ಕಾನ್ನಡುಗಿ ಬಂದೆನಿ ನನ್ನೊಲೆಯ ಕಡಗದಣಿವನೇಂ ನೋಡಿದಪಾ ||
೧೨೩ ಆಗ ಮಾತ್ರ ನನ್ನ ಕಣ್ಣೀರು ಸುರಿಯುವುದು. ೧೨೦. ಬ್ರಹ್ಮನಾಗಲಿ ರುದ್ರನಾಗಲಿ ವಿಷ್ಣುವಾಗಲಿ ರಕ್ಷಿಸಿದರೂ ನಾಳೆ ಭಯಂಕರವಾದ ರೀತಿಯಲ್ಲಿ ಕೊಂದು ಆ ಸೈಂಧವನ ಹೊಟ್ಟೆಯನ್ನು ಸೀಳಿ ನನ್ನ ಮಗನನ್ನು ತೆಗೆಯದೆ ಇರುವುದಿಲ್ಲ. ೧೨೧. ನನ್ನ ಮಗನನ್ನು ಕೊಂದು ಭಯದಿಂದ ಇನ್ನು ಅವನು ಪಾತಾಳವನ್ನು ಪ್ರವೇಶಿಸಿದರೂ ಬ್ರಹ್ಮನ ಕಮಂಡಲವನ್ನು ಪ್ರವೇಶಿಸಿದರೂ ವಿಷ್ಣುವಿನ ನಾಭಿಕಮಲವನ್ನು ಸೇರಿದರೂ ಪುನಃ ಆ ಸೈಂಧವನು ಬದುಕಬಲ್ಲನೇ? ೧೨೨. ಸೈನ್ಯವು ನನ್ನನ್ನು 'ಪಡೆಮೆಚ್ಚೆಗಂಡ' ಎನ್ನುತ್ತಿರುವಾಗ ಪ್ರಸಿದ್ಧವಾದ ಅರಿಕೇಸರಿಯೆಂಬ ಪ್ರಶಸ್ತಿಯಿಂದ ನೇರವಾಗಿ ಪ್ರಸಿದ್ಧವಾಗಿರುವಾಗ ನಾನು ಸ್ವಲ್ಪ ಹೆದರಿ ಭಯದಿಂದ ಕುಗ್ಗಿಬಿಡುತ್ತೇನೆಯೇ? ನಾಳೆ ಸೂರ್ಯನು ಮುಳುಗುವುದಕ್ಕೆ ಮುಂಚೆಯೇ ಜಯದ್ರಥನು ಹೆದರುವಂತೆ ಅವನನ್ನು ಕೊಲ್ಲದಿದ್ದರೆ ನಾನು ಗಾಂಡೀವವನ್ನು ಧರಿಸಿದವನೇ ಅಲ್ಲ. ಯುದ್ಧರಂಗದಲ್ಲಿ ಹೆದರಿ ಭಯಸೂಚಕವಾದ ಚಿಗುರು ಹಿಡಿದವನಾಗುವುದಿಲ್ಲವೇ ? ವ|| ಎಂದು ನೃಪಪರಮಾತ್ಮನಾದ ಅರ್ಜುನನು ಪ್ರತಿಜ್ಞೆಮಾಡಿದುದನ್ನು ಸೈಂಧವನ ಪತ್ನಿಯೂ ದುರ್ಯೊಧನನ ತಂಗಿಯೂ ಆದ ದುಶ್ಯಳೆಯು ಕೇಳಿ ವಿಶೇಷವಾಗಿ ದುಃಖಪಟ್ಟು ತಮ್ಮಅಣ್ಣನ ಹತ್ತಿರಕ್ಕೆ ಬಂದು ಕಾಲಿನ ಮೇಲೆ ಕವಿದು ಬಿದ್ದಳು. ೧೨೩. ಅರ್ಜುನನು ತನ್ನ ಮಗನು ಸಾಯಲು ನಿನ್ನ ಮಯ್ತುನನ ಸಾವಿಗೆ ಪ್ರತಿಜ್ಞೆಮಾಡಿದ್ದಾನೆ. ಅದಕ್ಕಾಗಿ