________________
೫೪೨ / ಪಂಪಭಾರತಂ
ಮ||
ಬರಮಂ ಬಾಳ ಶಶಾಂಕಮೌಳಿ ಕುಡೆ ಪೆತ್ತೊಂದುರ್ಕಿನಿಂದೋವದಾಂ ತು ರಣೋತ್ಸಾಹದಿನೆಮ್ಮನೊರ್ವನೆ ಭರಂಗೆಯತ್ತ ದುರ್ಯೋಧನಂ | ಬೆರಸಾ ದ್ರೋಣನನಟ್ಟಿ ಸಿಂಧು ವಿಷಯಾಧೀಶಂ ಪೊದರೊಂದು ಮ ಚರದಿಂ ನಿನ್ನ ತನೂಜನಂ ಕೊಲಿಸಿದಂ ಮತ್ತಾಂತವರ್ ಕೊಲ್ವರ್ || ೧೧೭
ವ|| ಎಂಬುದುಂ ಪ್ರಚಂಡ ಕೋಪ ಪಾವಕ ಪ್ರಶಮಿತ ಶೋಕರಸನುಮುನ್ನತ ಲಲಾಟ ತಟ ಘಟಿತ ಭೀಷಣ ಭ್ರುಕುಟಿಯುಂ ಕಲ್ಪಾಂತ ದಿನಕರ ದುರ್ನಿರೀಕ್ಷನುಮುತ್ತಾತ ಮಾರುತನಂತೆ ಸಕಲ ಭೂಭೂತ್ಕಂಪಕಾರಿಯುಂ ವಿಂಧ್ಯಾಚಳದಂತೆ ವರ್ಧಮಾನೋತ್ಸಧನು ಮಂಧಕಾರಾತಿಯಂತೆ ಭೈರವಾಕಾರನುಮಾಗಿ
ಮ|| ರಸೆಯಿಂ ಭೂತಳದಿಂ ಕುಳಾದಿ ದಿಗ್ಧಂತಿಯಿಂ ವಾರ್ಧಿಯಿಂ
ದೆಸೆಯಿಂದಾಗಸದಿಂದಜಾಂಡ ತಟದಿಂದಲ್ಲಿ ಪೊಕ್ಕಿರ್ದುಮಿಂ | ಮಿಸುಕಲ್ ತೀರ್ಗುಮೆ ವೈರಿಗೆನ್ನ ಸುತನಂ ಕೊಂದಿರ್ದುದು ಕೇಳು ಸೈ ರಿಸಿ ಮಾರ್ದಪೆನಿನ್ನು ಮೆಂದೊಡಿದನಾಂ ಪೇರಿತಳ್ ನೀಗುವಂ || ೧೧೮ ಕಂ11 ಬಳೆದ ಸುತಶೋಕದಿಂದೀ
ಗಳೆ ಸುರಿಗುಮ ಸುರಿಯವಾ ಜಯದ್ರಥನ ಚಿತಾ | ನಳನಿಂದಮೊಗೆದ ಪೊಗೆಗಳ್
ಕೊಳೆ ಸುರಿವೊಡೆ ಸುರಿವುದೆನ್ನ ನಯನಜಲಂಗಳ್ ||
೧೧೯
೧೧೭. ಸೈಂಧವನು ಈಶ್ವರನಿಂದ ಪಡೆದ ವರದ ಅಹಂಕಾರದಿಂದ ದಾಕ್ಷಿಣ್ಯರಹಿತನಾಗಿ ನಮ್ಮನ್ನು ಎದ್ದು ಎದುರಿಸಿ ಆರ್ಭಟ ಮಾಡುತ್ತ, ದುರ್ಯೋಧನನೊಡನೆ ದ್ರೋಣನನ್ನು ಬೇರೆ ಕಡೆಗೆ ಕಳುಹಿಸಿ ತನ್ನಲ್ಲಿ ನೆಲೆಗೊಂಡಿದ್ದ ಮತ್ಸರದಿಂದ ನಿನ್ನ ಮಗನನ್ನು ಕೊಲ್ಲಿಸಿದನು. ಬೇರೆಯವರು ಅಭಿಮನ್ಯುವನ್ನು ಕೊಲ್ಲಲು ಸಾಧ್ಯವೇ? ವ| ಎನ್ನಲು ಅತ್ಯಂತ ಘೋರವಾದ ಕೋಪಾಗ್ನಿಯಿಂದ ಶೋಕರಸವು ಆರಿಹೋಯಿತು. ಎತ್ತರವಾದ ಮುಖದಲ್ಲಿ ಹುಬ್ಬು ಭಯಂಕರವಾಗಿ ಗಂಟಿಕ್ಕಿತು. ಪ್ರಳಯಕಾಲದ ಸೂರ್ಯನಂತೆ (ಕಣ್ಣಿನಿಂದ) ನೋಡಲಾಗದವನೂ ವಿಪತ್ಕಾಲದ ಗಾಳಿಯಂತೆ ಸಮಸ್ತ ಬೆಟ್ಟಗಳನ್ನೂ ನಡುಗಿಸುವವನೂ ವಿಂಧ್ಯಪರ್ವತದಂತೆ ಎತ್ತರವಾಗಿ ಬೆಳೆಯುತ್ತಿರುವವನೂ ಈಶ್ವರನಂತೆ ಭಯಂಕರಾಕಾರವುಳ್ಳವನೂ ಆದನು. ೧೧೮. ಪಾತಾಳದಿಂದಲೂ ಭೂಮಂಡಲದಿಂದಲೂ ಕುಲಪರ್ವತಗಳ ಸಮೂಹದಿಂದಲೂ ದಿಗ್ಗಜಗಳಿಂದಲೂ ಸಮುದ್ರಗಳಿಂದಲೂ ದಿಕ್ಕುಗಳಿಂದಲೂ ಬ್ರಹ್ಮಾಂಡದಿಂದಲೂ ಆಚೆಯ ಕಡೆ ಎಲ್ಲಿ ಹೊಕ್ಕಿದ್ದರೂ ನನ್ನ ಶತ್ರುವಿಗೆ (ಅಲ್ಲಿಂದ) ಅಳ್ಳಾಡಲು ಸಾಧ್ಯವೇ? ನನ್ನ ಮಗನನ್ನು ಕೊಂದಿರುವುದನ್ನು ಕೇಳಿಯೂ ಸೈರಿಸಿಕೊಂಡು ಇನ್ನೂ ಸುಮ್ಮನಿದ್ದೇನೆ ಎಂದರೆ ಈ ದುಃಖವನ್ನು ನಾನು ಮತ್ತಾವುದರಿಂದ ಪರಿಹಾರಮಾಡಿಕೊಳ್ಳಲಿ, ೧೧೯. ಅಭಿವೃದ್ಧಿಯಾಗುತ್ತಿರುವ ಪುತ್ರಶೋಕದಿಂದ ಈಗ ನನ್ನ ಕಣ್ಣೀರು ಸುರಿಯುತ್ತಿಲ್ಲ, ಸುರಿಯುವುದಿಲ್ಲ; ಆ ಸೈಂಧವನ ಚಿತಾಗ್ನಿಯಿಂದ ಹುಟ್ಟಿದ ಹೊಗೆಗಳು ಸುತ್ತಿ ಅವರಿಸಲು