________________
ಏಕಾದಶಾಶ್ವಾಸಂ /೫೨೭ ವ! ಅಂತಗಿದೊಡೆ ಕೋಡಕೆಯ್ಯ ಕಾಲೆಡೆಗಳೊಳ್ ಬಿಣ್ಣುಮಂ ಪೆಣೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದ ಪನ್ನೆರಡು ಯೋಜನಂಬರನೊತ್ತುವುದು
ಕಂ।। ಕರಿಯುಂ ಕುರುಭೂಮಿಯ ನಡು
ವರೆಗಂ ಪವನಜನನೊತ್ತೆ ತೋಳ್ವಲವಾಗಳ್ 1 ಸರಿ ಸರಿಯಾದುದು ತದ್ದಿ
ಕರಿಗಂ ಭೀಮಂಗಮುಗ್ರ, ಸಂಗರ ಧರೆಯೊಳ್ ||
2.99
ವ|| ಅನ್ನೆಗಮಿತ್ತ ಸಂಸಪಕಬಲಮೆಲ್ಲಮನಳತೆ ಪೆಳ ಕಿವುದುದು ಕೊಲ್ವ ವಿಕ್ರಾಂತತುಂಗಂ ಚಕ್ರಿಯನಿಂತೆಂದಂ
ಚoll ಪರಿದುದು ಸುಪ್ರತೀಕ ಗಜಮೇಳದವಂ ಭಗದತ್ತನಾಮದ
ದ್ವಿರದಮನಾಂಕೆಗೊಂಡು ಪೆಣೆವಂ ಪವನಾತ್ಮಜನೀಗಳಾಹವಂ | ಪಿರಿದುದಲತ್ತ ಪೋಪಮನ ತದ್ರಥಮಂ ಹರಿ ವಾಯುವೇಗದಿಂ ಪರಿಯಿಸೆ ತಾಗಿದಂ ಹರಿಗನಂಕದ ಪೊಂಕದ ಸುಪ್ರತೀಕಮಂ | 22
ವ! ಅಂತು ತಾಗಿ ಮೃಗರಾಜ ನಖರ ಮಾರ್ಗಣಂಗಳೊಳಂ ಕೂರ್ಮನಖಾಸ್ತ್ರಂಗಳೊಳ ಮಾನೆಯುಮಂ ಭಗದತ್ತನುಮಂ ಪೂಡ ಭಗದತ್ತ ಮುಳಿದು ಭೂದತ್ತಮಪ್ಪ ದಿವ್ಯಾಂಕುಶಮಂ ಕೊಂಡು
ಯಾತನೆಯನ್ನನುಭವಿಸಿ ಕೋಪದಿಂದ ಭೀಮನನ್ನು ಹೆದರಿಸಿ ಪಾಂಡವಸೈನ್ಯವು ಭಯಪಡುವ ಹಾಗೆ ಅವನನ್ನು ಹಿಡಿದು ಮೇಲೆ ಬಿದ್ದಿತು. ವ|| ಭೀಮನು ಆ ಆನೆಯ ಕೊಂಬು, ಸೊಂಡಿಲು ಕಾಲಿನ ಮಧ್ಯದಲ್ಲಿ ಭಾರವನ್ನು ಹೊರಳಿಸುವ ರೀತಿಯಿಂದ ಹತ್ತಿ ಡೊಕ್ಕರವೆಂಬ ಪಟ್ಟಿನಿಂದ ಆನೆಯನ್ನು ಕುರುಕ್ಷೇತ್ರದಿಂದ ಆ ಕಡೆಗೆ ಹನ್ನೆರಡುಯೋಜನದವರೆಗೆ ನೂಕಿದನು. ೭೫. ಆನೆಯೂ ಭೀಮನನ್ನು ಕುರುಭೂಮಿಯ ಮಧ್ಯದವರೆಗೆ ನೂಕಲು ಆಗ ಆ ಭಯಂಕರವಾದ ಯುದ್ಧರಂಗದಲ್ಲಿ ಬಾಹುಬಲ ಭೀಮನಿಗೂ ಆ ಆನೆಗೂ ಸರಿಸಮಾನವಾಯಿತು. ವ|| ಅಷ್ಟರಲ್ಲಿ ಸಂಸಪ್ತಕರ ಸೈನ್ಯವನ್ನೆಲ್ಲ ಹೆದರಿ ಬೆದರುವಂತೆ ಅಜ್ಜುಗುಜ್ಜಿಯಾಗುವ ಹಾಗೆ ತುಳಿದು ಕೊಲ್ಲುವ ಮಹಾಪರಾಕ್ರಮಿಯಾದ ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು. ೭೬. ಸುಪ್ರತೀಕವೆಂಬ ಆನೆಯು ಓಡಿಬರುತ್ತಿದೆ. ಅದನ್ನು ಹತ್ತಿ ಬರುತ್ತಿರುವವನು ಭಗದತ್ತ; ಆ ಮದ್ದಾನೆಯನ್ನು ತಡೆದು ಹೆಣೆದುಕೊಂಡಿರುವವನು ಭೀಮ. ಈಗ ಆ ಕಡೆ ಯುದ್ಧವು ಹಿರಿದಾಗಿದೆ. ಆ ಕಡೆ ಹೋಗೋಣ' ಎಂದನು. ಆ ತೇರನ್ನು ಕೃಷ್ಣನು ವಾಯುವೇಗದಿಂದ ಆ ಕಡೆಗೆ ಓಡಿಸಿದನು. ಅರ್ಜುನನು ಖ್ಯಾತವೂ ಅಹಂಕಾರಿಯೂ ಆದ ಸುಪ್ರತೀಕವೆಂಬ ಆನೆಯನ್ನು ಬಂದು ತಾಗಿದನು. ವ| ಸಿಂಹದ ಉಗುರಿನಂತಿರುವ ಬಾಣಗಳಲ್ಲಿಯೂ ಆಮೆಯ ಉಗುರಿನಂತಿರುವ ಅಸ್ತ್ರಗಳಲ್ಲಿಯೂ ಆನೆಯನ್ನೂ ಭಗದತ್ತನನ್ನೂ ಹೂಳಿದನು. ಭಗದತ್ತನು ಕೋಪಿಸಿಕೊಂಡು ಭೂದೇವಿಯಿಂದ
ಆ