________________
೫೨೬ ) ಪಂಪಭಾರತಂ ಜಿವುಳಿದುವಂತೆ ತೊಟ್ಟುಳದುಟಿದು ಪದಿನಾಲ್ಕಾಸಿರ ಮದಾಂಧ ಗಂಧಸಿಂಧುರಂಗಳುಮನೊಂದು ಲಕ್ಕ ರಥಮುಮನರೆದು ಸಣ್ಣಿಸಿದಂತೆ ಮಾಡಿದಾಗಳ್ ಗಜಾಸುರನೊಳಾಸುರಂಬೆರಸು ತಾಗುವಂಧಕಾರಾತಿಯಂತೆ ಭೀಮಸೇನಂ ಬಂದು ಪೊಣರೆ- ಚಂll ತೊಲಗಿದು ಸುಪ್ರತೀಕ ಗಜಮಾಂ ಭಗದತ್ತನೆನಿಲ್ಲಿ ನಿನ್ನ ತೋ
ಊಲದ ಪೊಡರ್ಪು ಸಲ್ಲದಲೆ ಸಾಯದೆ ಪೋಗೆನೆ ಕೇಳು ಭೀಮನಾಂ | ತೊಲೆಯದಿರುರ್ಕಿನೊಳ್ ನುಡಿವೆಯೇ ಕರಿ ಸೂಕರಿಯಲ್ಲಿ ಪತ್ನಿ ಗಂ|
ಟಲನೊಡೆಯೊತ್ತಿ ಕೊಂದಪನಿದದಮ್ಮನುಮೆನ್ನನಾಂಫುದೇ || ೭೩
ವ|| ಎಂದು ನಾರಾಚಂಗಳಿಂ ತೋಡುಂ ಬೀಡುಂ ಕಾಣಲಾಗದಂತು ಸುಪ್ರತೀಕ ಕರಿಯೆಂಬ ಗಿರಿಯ ಮೇಲೆ ಭೀಮನೆಂಬ ಕಾಲಮೇಘಂ ಸರಲ ಸರಿಯಂ ಸುರಿಯೆಚಂ|| ಸಿಡಿಲೆಜಪಂದದಿಂದಾಗಿ ದಿಕ್ಕರಿ ತನ್ನ ವರೂಥಮಂ ಪಡ
ಡಿಸೆ ಮರುತ್ತುತಂ ಮುಳಿದು ಮಚ್ಚರದಿಂ ಗಜೆಗೊಂಡು ಸುತ್ತುಗೊಂ || ಡಡಿಗಿಡೆ ನುರ್ಗಿ ಪೊಯ್ಯು ಪಂಪಿಂಗುವುದುಂ ಕರಿ ನೊಂದು ಕೋಪದಿಂ ಪಿಡಿದಆಗಿತ್ತು ಭೀಮನನಗುರ್ವಿಸಿ ಪಾಂಡವ ಸೈನ್ಯಮಳ್ಳುಜಿಲೆ || ೭೪
ಭಗದತ್ತನು ನಡೆಸುತ್ತಿದ್ದ ಸುಪ್ರತೀಕವೆಂಬ ಆನೆಯು ಯುದ್ಧರಂಗದ ಮಧ್ಯೆ ಆಶ್ಚರ್ಯವಾಗುವ ಹಾಗೆ ನಿರಾಯಾಸವಾಗಿ ಹರಿಯಿತು! ವ ಹಾಗೆ ಓಡಿದ (ಪರಿದ) ಬೀದಿಗಳಲ್ಲೆಲ್ಲ ರಕ್ತನದಿಗಳು ಹರಿದುವು. ಕೆಂಡದ ಪ್ರವಾಹದಂತೆ ಹರಿಯುತ್ತಿರುವ ಸುಪ್ರತೀಕದ ಸೊಂಡಲಿನ, ಕಾಲಿನ, ಕೊಂಬಿನ ಪೆಟ್ಟಿನಿಂದ ಸೈನ್ಯವೆಲ್ಲವನ್ನು ಯಮನೇ ಚೂರ್ಣ ಮಾಡಿದಂತೆ (ಚಿಗುಳಿಯನ್ನು ತುಳಿದಂತೆ) ಸಂಪೂರ್ಣವಾಗಿ ತುಳಿದು ಹದಿನಾಲ್ಕು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳನ್ನೂ ಒಂದು ಲಕ್ಷ ರಥವನ್ನೂ ಅರೆದು ಪುಡಿಮಾಡಿತು. ಅದನ್ನು ನೋಡಿದ ಭೀಮನು ಗಜಾಸುರನೆಂಬ ರಾಕ್ಷಸನೊಡನೆ ರಭಸದಿಂದ ಕೂಡಿ ತಗಲುವ ಈಶ್ವರನಂತೆ ಬಂದು ಹೋರಾಡಿದನು-೭೩. (ಭಗದತ್ತನು ಭೀಮನನ್ನು ಕುರಿತು) ತೊಲಗು ಇದು ಸುಪ್ರತೀಕವೆಂಬ ಆನೆ. ನಾನೇ ಭಗದತ್ತ. ಇಲ್ಲಿ ನಿನ್ನ ತೋಳಿನ ಶಕ್ತಿಯ ಹಿರಿಮೆಯು ಸಲ್ಲುವುದಿಲ್ಲ. ಎಲವೋ ಸಾಯದೆ ಹೋಗು ಎಂದನು. ಅದನ್ನು ಕೇಳಿ ಭೀಮನು (ಎಲವೋ) ನಾನು 'ಭೀಮ; ಅಹಂಕಾರದಿಂದ ತೂಗಾಡಬೇಡ, ಗರ್ವದಿಂದ ಅಹಂಕಾರದಿಂದ ಮಾತನಾಡುತ್ತಿದ್ದೀಯೆ. ಈ ಆನೆಯು ನನಗೆ ಹಂದಿಗೆ ಸಮಾನ. ಇದರ ಮೇಲೆ ಹತ್ತಿ ಇದರ ಗಂಟಲನ್ನು ಅಮುಕಿ ಕೊಲ್ಲುತ್ತೇನೆ. ಇದಲ್ಲ ಇದರಪ್ಪನೂ ನನ್ನನ್ನು ಪ್ರತಿಭಟಿಸಬಲ್ಲುದೇ ? ವli ಎಂದು ಬಾಣಗಳನ್ನು ತೊಡುವುದೂ ಬಿಡುವುದೂ ಕಾಣದಂತೆ ಸುಪ್ರತೀಕಗಜವೆಂಬ ಬೆಟ್ಟದ ಮೇಲೆ ಭೀಮನೆಂಬ ಪ್ರಳಯಕಾಲದ ಮೋಡವು ಬಾಣದ ಮಳೆಯನ್ನು ಸುರಿಸಿತು. ೭೪. ದಿಗ್ಗಜವಾದ ಸುಪ್ರತೀಕವು ಸಿಡಿಲೆರಗುವ ವೇಗದಿಂದ ಎರಗಿ ತನ್ನ ತೇರನ್ನು ತಲೆಕೆಳಗುಮಾಡಲು ಭೀಮನು ಕೋಪಿಸಿಕೊಂಡು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಸುತ್ತಲೂ ಬಳಸಿ ಹೆಜ್ಜೆ ಕೆಡುವಂತೆ ನುಗ್ಗಿ ಹೊಡೆದು ಹಿಂದಕ್ಕೆ ಹೋದನು. ಆನೆಯು ವಿಶೇಷವಾಗಿ