________________
ಏಕಾದಶಾಶ್ವಾಸಂ /೫೧೯ ವ|| ಎಂಬುದುಂ ಕರ್ಣನಿಂತೆಂದಂಮ|| ಸುರಸಿಂಧೂದ್ಭವನಿಂ ಬಚೆಕ್ಕೆ ಪೆರಾರ್ ಸೇನಾಧಿಪತ್ಯಕ್ಕೆ ತ
ಕರೆ ಲೋಕೈಕ ಧನುರ್ಧರಂ ಕಳಶಜಂ ತಕ್ಕಂ ನದೀನಂದನಂ | ಗೆ ರಣಕ್ಕಾಂ ನೆರವಾದೆನಪ್ರೊಡಿನಿತೇಕಾದಪ್ಪುದೀ ಪೊಲಿ ಪೊ
ಟಿರವೇಡೀವುದು ಬೀರವಟ್ಟಮನದಂ ದ್ರೋಣಂಗೆ ನೀಂ ಭೂಪತೀ || ೫೩ * ವ|| ಅಂತು ಭೀಷ್ಮಾದನಂತರಂ ದ್ರೋಣಯೆಂಬುದು ಪರಾಶರ ವಚನಮನೆ ಕರ್ಣನ ನುಡಿಗೊಡಂಬಟ್ಟುಕಂ| ವಿಸಸನ ರಂಗಕ್ಕಾನಿರೆ
ಬೆಸಗೊಳ್ಳುದೆ ಪರನೆಂದು ಜಯಪಟಹಂಗಳ | ದೆಸೆದೆಸೆಗೆಸವಿನೆಗಂ ಕ
ಟ್ಟಿಸಿಕೊಂಡು ಬೀರವಟ್ಟಮಂ ಕಳಶಭವಂ || ವಗಿ ಅಂತು ಕುಂಭಸಂಭವನನೇಕ ಶಾತಕುಂಭ ಕುಂಭಸಂಭ್ರತ ಮಂಗಳಗಂಗಾ ಜಲಂಗಳಿಂ ಪವಿತ್ರೀಕೃತಗಾತ್ರನಾಗಿ ಕೌರವಬಳಾಗ್ರಗಣ್ಯನಾಗಿರ್ದನಿತ್ತ ತದ್ವತ್ತಾಂತ ನೆಲ್ಲಮನಜಾತಶತ್ರು ಕೇಳು ಜನಾರ್ದನನೊಡನೆ ರಿಪುಬಳಮರ್ದನೋಪಾಯಮಂ ಸಮಕಟ್ಟುತಿರ್ಪನ್ನೆಗಂ -
ಆಶ್ರಯಕೊಟ್ಟು (ಸೋತು) ಅಜ್ಞನಾಡಿದ ಮಾತು ನೆಟ್ಟಗಾಯಿತಲ್ಲವೇ? ಇನ್ನು ಮೇಲೆ ನಮ್ಮ ಸೈನ್ಯವನ್ನು ರಕ್ಷಿಸುವವರಾರಿದ್ದಾರೆ. ರಕ್ಷಿಸುವುದಕ್ಕೆ ಸಮರ್ಥನಾದವನು ಈ ಕರ್ಣನೇ! ಆದುದರಿಂದ ನಾವೆಲ್ಲ ಎರಡನೆಯ ಮಾತಿಲ್ಲದೆ (ಸರ್ವಾನುಮತದಿಂದ) ಯಾವ ನೆಪವೂ ಇಲ್ಲದೆ ವೀರಪಟ್ಟವನ್ನು (ಸೇನಾಧಿಪತ್ಯವನ್ನು ಅವನಿಗೆ ಕಟ್ಟೋಣ ವ|| ಎನ್ನಲು ಕರ್ಣನು ಹೀಗೆಂದನು-೫೩. ಭೀಷ್ಮನಾದ ಮೇಲೆ ಸೇನಾಧಿಪತ್ಯಕ್ಕೆ ಯೋಗ್ಯರಾದವರು ಬೇರೆ ಯಾರಿದ್ದಾರೆ? ಯೋಗ್ಯರಾದವರಿರುವ ಪಕ್ಷದಲ್ಲಿ ಪ್ರಪಂಚದ ಬಿಲ್ದಾರರಲ್ಲೆಲ್ಲ ಅಗ್ರೇಸರನಾದ ದ್ರೋಣನೇ ಯೋಗ್ಯನಾದವನು. ನಾನು ಭೀಷ್ಮನಿಗೆ ಸಹಾಯಮಾಡಿದ್ದಿದ್ದರೆ ಹೀಗೇಕಾಗುತ್ತಿತ್ತು. ಈ ಹೊತ್ತೇ ಹೊತ್ತು (ಇದೇ ಸರಿಯಾದ ಕಾಲ), ಸಾವಕಾಶ ಮಾಡಬೇಡ; ದುರ್ಯೊಧನ, ವೀರಪಟ್ಟವನ್ನು ನೀನು ದ್ರೋಣನಿಗೆ ಕೊಡು, ವt 'ಭೀಷ್ಮನಾದ ಮೇಲೆ ದ್ರೋಣ ಎಂಬುದು ವ್ಯಾಸಋಷಿಗಳ ಮಾತು' ಎನ್ನಲು ಹಾಗೆಯೇ ಆಗಲಿ ಎಂದು ಕರ್ಣನ ಮಾತಿಗೆ ಒಪ್ಪಿದನು. ೫೪. ಯುದ್ಧರಂಗಕ್ಕೆ ನಾನಿರುವಾಗ ಬೇರೆಯವರನ್ನು ಪ್ರಶ್ನೆಮಾಡುವುದೇ (ವಿಚಾರಮಾಡುವುದೇ) ಎಂದು ಹೇಳುತ್ತ ಜಯಭೇರಿಗಳು ದಿಕ್ಕುದಿಕ್ಕುಗಳಲ್ಲಿಯೂ ಭೋರ್ಗರೆಯುತ್ತಿರಲು ದ್ರೋಣನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವ|| ಹಾಗೆ ದ್ರೋಣಾಚಾರ್ಯನು ಅನೇಕ ಚಿನ್ನದ
ಕಲಶಗಳಲ್ಲಿ ತುಂಬಿಟ್ಟಿದ್ದ ಮಂಗಳ ಗಂಗಾಜಲದಿಂದ ಶುದ್ದಿ ಮಾಡಲ್ಪಟ್ಟ ಶರೀರ . ವುಳ್ಳವನಾಗಿ ಕೌರವಸೈನ್ಯದ ಮೊದಲಿಗನಾಗಿದ್ದನು. ಈ ಕಡೆ ಈ ವೃತ್ತಾಂತವನ್ನೆಲ್ಲ ಧರ್ಮರಾಯನು ಕೇಳಿ ಕೃಷ್ಣನೊಡನೆ ಶತ್ರುಸೈನ್ಯವನ್ನು ನಾಶಪಡಿಸುವ ಉಪಾಯವನ್ನು