________________
೫೧೮ | ಪಂಪಭಾರತ ಚಂ|| ಆದಟನಳುರ್ಕೆಯಂ ಬಲದಳುರ್ಕೆಯುಮಂ ಗಡೆಗೊಂಡು ನೀಮಿದಾ
ವುದು ಪಡೆಮಾತನಿಂತು ನುಡಿದಿರ್ ಪುದುವಾಳಿಯೊಳನ್ನ ಬಳಿದ ಆ್ಯದ ಬಗೆಗಂಡಿರೇ ಮಗನೆ ನೀಂ ಪಗೆಯಂ ತಳದೊಟ್ಟು ನೆಟ್ಟನೆ
ನದ ಬಗೆಗೆಟ್ಟು ದಾಯಿಗಳಿಂ ಮಗುಟ್ಟುಂ ಪುದುವಟ್ಟುದೆಂಬಿರೇ ||೫೦
ವ|| ಎಂಬುದುಮಿಲ್ಲಿಂದಂ ಮೇಲಾದ ಕಜ್ಜಮಂ ನೀನೆ ಬಲೆ ಬೀಡಿಂಗೆ ಬಿಜಯಂಗೆಯ್ಕೆಮೆನೆ ಪೊಡೆವಟ್ಟು ಸುಯೋಧನಂ ಪೋದನಾಗಳ್ಚಂ|| ನರದ ವಿರೋಧಿನಾಯಕರನಾಹವದೊಳ್ ತಳೆದೊಟ್ಟಲೊಂದಿದೆ
ಡ್ಕುರುಳ್ಳಿನಮಾ ಗುಣಾರ್ಣವನಡುರ್ತಿದಲ್ಲಿ ಸಿಡಿ ನೆತ್ತರೊಳ್ | ಪೊರದು ನಿರಂತರಂ ಪೊಲಸು ನಾಚುವ ಮೆಯ್ಯನೆ ಕರ್ಚಲೆಂದು ಚೆ
ಚರಮಪರಾಂಬುರಾಶಿಗಿಟಿವಂತಿಲೆದಂ ಕಮಳ್ಳೆಕಬಾಂಧವಂ ||
ವ|| ಆಗಳ್ ದುರ್ಯೋಧನನಾಯ ಸೇನಾನಾಯಕನಪ್ಪ ಗಾಂಗೇಯಂ ಬಿದಿರ ಸಿಡಿಂಬಿನ ಪೊದಳೊಳಗೆ ಮಜದೋಣಗಿದ ಮೃಗರಾಜನಂತ ಶರಶಯನದೊಳೊಗಿದಂ ಕದನತ್ರಿಣೇತ್ರನನೆಂತು ಗೆಲ್ವೆನೆಂದು ಚಿಂತಿಸಿ ಮಂತ್ರಶಾಲೆಯಂ ಪೊಕ್ಕು ಕರ್ಣ ದ್ರೋಣ ಕೃಪ ಕೃತವರ್ಮಾಶ್ವತ್ಥಾಮ ಶಲ್ಯ ಶಕುನಿ ಸೈಂಧವ ಭೂರಿಶ್ರವಃ ಪ್ರಕೃತಿಗಳೆಲ್ಲಂ ಬಲೆಯನಟ್ಟಿ ಬರಿಸಿಶಾ!! ಆಯ್ಕೆ ಸಾಧಿಸಿಕೊಂಡು ಪಾಂಡುಸುತರಂ ನಗ್ನೆಂಗೆ ಬೆನ್ನಿತ್ತು ದಲ್
ಸಯಾಯ್ತಜ್ಜನ ಮಾತು ನಮ್ಮ ಪಡೆಯಂ ಕಾವನ್ನರಿನ್ನಾರೊ ಸು | ಪ್ರೀತಂ ಕಾವೊಡೆ ಕರ್ಣನುಮದಲಿಂ ನಾಮೆಲ್ಲಮಾತಂಗೆ ನಿ| ರ್ದೈತಂ ಬೀರದ ಬೀರವಟ್ಟಮನಿದಂ ನಿರ್ವ್ಯಾಜದಿಂ ಕಟ್ಟುವಂ
ಹೀಗೆಂದನು-೫೦, ಪರಾಕ್ರಮದ ಅತಿಶಯವನ್ನೂ ಸೈನ್ಯದ ಆಧಿಕ್ಯವನ್ನೂ ಒಟ್ಟಿಗೇ ಹೊಂದಿ ನೀವು 'ಕೂಡಿ ಬಾಳಿ' ಎಂಬ ಈ ಪ್ರತಿಮಾತನ್ನು (ಉಪದೇಶವನ್ನು) ಈ ರೀತಿ ನುಡಿದಿರಿ. ನನ್ನ ಅಳುಕಿದ ಹೆದರಿದ ಮನಸ್ಸನ್ನೇನಾದರೂ ಕಂಡಿರೇನು? ಮಗನೆ ನೀನು ನೇರವಾಗಿ ಶತ್ರುವನ್ನು ಕತ್ತರಿಸಿ ರಾಶಿಮಾಡು ಎಂದು ಹೇಳದೆ ಜ್ಞಾತಿಗಳಲ್ಲಿ ಇನ್ನೂ ಕೂಡಿ ಬಾಳು ಎನ್ನುವುದೇ ? ವ|| ಎನ್ನಲು 'ಇನ್ನು ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು (ಇನ್ನು ಮೇಲಾಗಬೇಕಾದ ಕಾರ್ಯವನ್ನು) ನೀನೇ ಬಲ್ಲೆ, ಬೀಡಿಗೆ ಹೊರಡು' ಎನ್ನಲು ನಮಸ್ಕಾರಮಾಡಿ ದುರ್ಯೋಧನನು ಹೋದನು. ೫೧. ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ ಸಿಡಿದ ರಕ್ತದಿಂದ ಲೇಪನಗೊಂಡು ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಜಾಗ್ರತೆಯಾಗಿ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು. ವ|| ಆಗ ದುರ್ಯೊಧನನು ತನ್ನ ಸೇನಾನಾಯಕನಾದ ಭೀಷ್ಕನು ಬಿದಿರ ಮೆಳೆಯ ಪೊದರಿನಲ್ಲಿ ಮರೆತು ಮಲಗಿದ ಸಿಂಹದಂತೆ ಶರಶಯನದಲ್ಲಿ ಮಲಗಿದನು. ಅರ್ಜುನನನ್ನು ಹೇಗೆ ಗೆಲ್ಲಲಿ ಎಂದು ಚಿಂತಿಸಿ ಮಂತ್ರಶಾಲೆಯನ್ನು ಪ್ರವೇಶಮಾಡಿ ಕರ್ಣ, ದ್ರೋಣ, ಕೃಪ, ಕೃತವರ್ಮ, ಅಶ್ವತ್ಥಾಮ, ಶಲ್ಯ, ಶಕುನಿ, ಸೈಂಧವ, ಭೂರಿಶ್ರವನೇ ಮೊದಲಾದವರಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿದನು. ೫೨. ಪಾಂಡವರನ್ನು ಗೆದ್ದುದಾಯಿತೇ? ಬಾಂಧವ್ಯಕ್ಕೆ