________________
ಚoll
೫೧೬ | ಪಂಪಭಾರತ
ಇದು ರಣಮೆನ್ನೊಳಾಂತಿವ ಮೆಯ್ಯಲಿಯುಂ ಸಮರೈಕಮೇರುವೆ . ನದಟುಮಳುರ್ಕೆಯುಂ ಪಿರಿದು ಸೇಡಿಗದಂತಿದಿರಾಂಪೆನೆಂದಣಂ || ಬೆದಳದೆ ನಟ್ಟ ಕೂರ್ಗಣೆಯ ಬಿಣೇಯತೆಯಿಂದ ಬಬಿಲ್ಲನುರ್ವಿ ಪೆ
ರ್ವಿದಿರ ಸಿಡಿಂಬಿನೊಳ್ ಪುದಿದದೊಂದು ಕುಳಾಚಳದಂತೆ ಸಿಂಧುಜಂ || ೪೫ ಉ11 ತಿಂತಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ ಮಯೊಳತ್ತಮಿ
ತಂ ತೆರೆದಿರ್ದ ಪುಣ್ಣಳೆಸೆವಕ್ಕರದಂತಿರೆ ನೋಡಿ ಕಲ್ಲಿಮಂ | ಬಂತವೊಲಿರ್ದನಟ್ಟವಣೆ ಕೋಲ್ಗಳ ಮೇಲೆಸೆದಿರ್ದ ವೀರ ಸಿ ದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ || ೪೬ ನಡೆದುದು ಬಾಳ ಕಾಲದೊಳೆ ತೊಟ್ಟೆನಗಂಕದ ಶೌಚವೀಗಳೊ ಗಡಿಪುದೆ ಮುಟ್ಟಿ ನಾಂ ನೆಲನನೇಕದು ಪೆಣ್ಣಡಿಮೆಂದು ಮೆಯ್ಯೋಳ | ಆಡಿದ ವಿಕರ್ಣ ಕೋಟಿಯೊಳಣಂ ನೆಲ ಮುಟ್ಟದೆ ನೋಡೆ ಬಿಳ್ಕೊಡಂ ಬಡಿಸಿದನಯ್ಯ ಶೌಚ ಗುಣದುನ್ನತಿಯಂ ಸುರಸಿಂಧುನಂದನಂ || ೪೭
ವ|| ಅಂತು ಶರಪಂಜರದೊಳೊಅಗಿಯುಮೊಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ ಸ್ವಚ್ಚಂದಮಿಚ್ಚುವಪ್ಪುದಳೆಂದುತ್ತರಾಯಣಂ ಬರ್ಪನ್ನಮಿರಿಸಿದನಂತುಮಾಗಳ್ ನಾಯಕರ ಬಾಣಗಳೆಲ್ಲವನ್ನೂ ಭೀಷ್ಮನು ಕಡಿದು ಹಾಕಿದನು. (ಆಗ) ಆ ಶಿಖಂಡಿಯು ಹೆಜ್ಜೆ ತಪ್ಪಿ ಮುಂದೆ ಬಂದು ನಿಂತರೂ ಮುಖವನ್ನು ದೀರ್ಘವಾಗಿ ನೋಡಿದರೂ ಆರ್ಭಟಮಾಡಿ ಹೊಡೆದರೂ ಮೊನಚಾದ ಬಾಣಗಳು ತನ್ನ ಶರೀರದಲ್ಲಿ ನಾಟಿ ಕಿಕ್ಕಿರಿದರೂ ಭೀಷ್ಮನು ತನ್ನ ಮನಸ್ಥೆರ್ಯವನ್ನು ಕಳೆದುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ, ಹೆದರಲಿಲ್ಲ, ಬೆದರಲಿಲ್ಲ. ೪೫. ಇದು ಯುದ್ದ ನನ್ನನ್ನು ಪ್ರತಿಭಟಿಸುವ ಶೂರನಾದರೋ ಸಮರೈಕಮೇರುವೆಂಬ ಬಿರುದುಳ್ಳ ಅರ್ಜುನ; ನನ್ನ ಪರಾಕ್ರಮವೂ ಅದರ ವ್ಯಾಪ್ತಿಯೂ ಹಿರಿದಾದುದು. ಹೇಡಿಗೆ ಹೇಗೆ ಪ್ರತಿಭಟಿಸಲಿ ? ಎಂದು ಸ್ವಲ್ಪವೂ ಹೆದರದೆ ತನ್ನ ಶರೀರದಲ್ಲಿ ನಾಟಿಕೊಂಡಿರುವ ಹರಿತವಾದ ಬಾಣಗಳ ವಿಶೇಷವಾದ ಭಾರದಿಂದ ಉಬ್ಬಿ ಬೆಳೆದ ಹೆಬ್ಬಿದಿರಿನ ಮೆಳೆಯಿಂದ ತುಂಬಿದ ಒಂದು ಕುಲಪರ್ವತದಂತೆ ಭೀಷ್ಮನು ಆಯಾಸದಿಂದ ಜೋತುಬಿದ್ದನು. ೪೬. ಶರೀರದ ನಾನಾಕಡೆಗಳಲ್ಲಿ ಎಲ್ಲೆಲ್ಲಿಯೂ ನೆಲವನ್ನು ಮುಟ್ಟದೆ ಗುಂಪುಗುಂಪಾಗಿ ನಾಟಿಕೊಂಡಿರುವ ಬಾಣಗಳಿಂದ ಬಾಯಿಬಿಟ್ಟುಕೊಂಡಿರುವ ಹುಣ್ಣುಗಳು ಇಲ್ಲಿ ನೋಡಿ ಕಲಿಯಿರಿ' ಎಂಬ ಪ್ರಕಾಶಮಾನವಾದ ಅಕ್ಷರಗಳ ಹಾಗಿರಲು ಭೀಷ್ಮನು ವ್ಯಾಸಪೀಠದ ಮೇಲಿರುವ ಪ್ರತಾಪತತ್ವದ ವೀರಶಾಸನವನ್ನು ಬರೆದಿರುವ ಪುಸ್ತಕದ ಹಾಗೆ ಶೋಭಿಸುತ್ತಿದ್ದನು. ೪೭. ಬಾಲ್ಯಕಾಲದಿಂದ ಹಿಡಿದು ಪ್ರಸಿದ್ದವಾದ ಬ್ರಹ್ಮಚರ್ಯವು ನಡೆದುಬಂದಿದೆ. ಈಗ ನಾನು ಸ್ತ್ರೀಯಾದ ಅವಳನ್ನು ಮುಟ್ಟಿ ನನ್ನ ಶೌಚಗುಣವನ್ನು ಹೋಗಲಾಡಿಸುವುದೇ? ಕೆಡಿಸುವುದೇ ? ಎಂದು ಶರೀರದಲ್ಲಿ ನಾಟಿಕೊಂಡು ತುಂಬಿದ್ದ ಲೆಕ್ಕವಿಲ್ಲದ ಬಾಣಗಳಿಂದ ಭೂದೇವಿಯನ್ನು ಸ್ವಲ್ಪವೂ ಮುಟ್ಟದೆ ಭೀಷ್ಮನು ತನ್ನ ಶೌಚಗುಣವನ್ನು ಪ್ರಸಿದ್ದಪಡಿಸಿದನು. ವ|| ಹೀಗೆ ಶರಪಂಜರದಲ್ಲೊರಗಿದ್ದರೂ