________________
ಏಕಾದಶಾಶ್ವಾಸಂ | ೫೧೫ ಪಂಚಪಾಂಡವ ಪ್ರಮುಖನಾಯಕರೆಲ್ಲರುಂಬೆರಸು ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟುಕೊಂಡು : ಬಂದು ಪೇಂಕುಳಿಗೊಂಡ ಸಿಂಹಮಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ಉ|| ಅಂಬರಮಲ್ಲಮಂಬಿನೊಳೆ ಪೂತಿ ಮಹೀಭುಜರತ್ತಮಚ ಕಿ
ತಂಬುಗಳತ್ತಮವ್ವಳಿಗೆ ಮಾಣದವಂ ಕಡಿದಿಕ್ಕಿ ತನ್ನ ನ | ಇಂಬುಗಳಿಂದಮಾರ್ದಿರದಡುರ್ತಿಸೆ ಭೂಭುಜರೆಲ್ಲಮಲ್ಲಿ ಬಿ
ಝುಂ ಬೆಳಗಾಗೆ ಬಂದು ಪೊಣರ್ದ೦ ಸೆರಗಿಲ್ಲದೆ ವಿಕ್ರಮಾರ್ಜುನಂ || ೪೨ ವ|| ಅಂತು ಪೂಣರ್ದಾಗಳೆಮ್ಮ ಮಮ್ಮಂಗಮೆಮಗಮೀಗಳನುವರು ದೊರೆಯಾಯ್ಕೆಂದು ಪರಶುರಾಮನ ಕೊಟ್ಟ ದಿವ್ಯಾಸ್ತಂಗಳನೊಂದನೊಂದು ಸೂಳೆ ತೊಟ್ಟೆಚ್ಚಾಗಳಚಂtt ಜ್ವಳನ ಪತಿಯಂ ಕಡಿದು ವಾರುಣ ಪತಿಯಿನೈಂದ್ರ ಬಾಣಮಂ
ಕಳೆದು ಸಮೀರಣಾಸದಿನಿದಿರ್ಟದ ಭೂಭುಜರೆಲ್ಲರಂ ಭಯಂ | ಗೊಳಿಸಿ ನಿಶಾತ ವಿಶರದಿಂ ಸುರರಂಬರದೊಳ್ ತಗುಳು ಬಿ
ಚಳಿಗೆ ನದೀಜನುಚ್ಚಳಿಸೆ ಕಾದಿದನೇಂ ಕಲಿಯೋ ಗುಣಾರ್ಣವಂ || ೪೩
ವl ಅಂತಮೋಘಾ ಧನಂಜಯಂ ತನ್ನಮೋಘಾಸ್ತ್ರಂಗಳಂ ಕಡಿದೊಡೆ ಸಾಮಾನ್ಯಾಸ್ತಂಗಳೊಳ್ ಧರ್ಮಪುತ್ರಂಗೆ ತನ್ನ ನುಡಿದ ನುಡಿವಳಿಯಂ ನೆನೆದಲ್ಲಳಿಗಾಳಗಂಗಾದೆಚoll ಕಡಿದನುದಗ್ರ ನಾಯಕರ ಸಾಯಕಮಲ್ಲಮನಾ ಶಿಖಂಡಿ ಪೊ
ಕಡಿಗಿಡೆ ಬಂದು ಮುಂದೆ ನಿಲೆಯುಂ ಮೊಗಮಂ ನಡೆ ನೋಡಿಯಾತನಾ | ರ್ದೊಡನೊಡನೆಚೊಡೆಚ್ಚ ಮೊನೆಯಂಬುಗಳಲ್ಲೆಡಿಪೋಗೆಯುಂ ಮನಂ
ಗಿಡನವನಾಂಕಗೊಳ್ಳನಗಿಯಂ ಸುಗಿಯಂ ಸುರಸಿಂಧುನಂದನಂ || ೪೪ ಮುಖ್ಯವಾಗಿರುವ ನಾಯಕರೆಲ್ಲರೊಡಗೂಡಿ ಧರ್ಮರಾಯನು ಶಿಖಂಡಿಯನ್ನು ಮುಂದುಮಾಡಿಕೊಂಡು ಬಂದು, ಹುಚ್ಚು ಹಿಡಿದ ಸಿಂಹವನ್ನು ಮುತ್ತುವ ಹಾಗೆ ಮುತ್ತಿದನು. ೪೨. ಭೀಷ್ಮನು ಆಕಾಶಪ್ರದೇಶವೆಲ್ಲವೂ ಬಾಣಸಮೂಹಗಳಲ್ಲಿಯೇ ಹೂತುಹೋಗುವ ಹಾಗೆ ರಾಜರುಗಳು ಎಲ್ಲ ಕಡೆಗಳಿಂದಲೂ ಪ್ರಯೋಗಿಸಿದ ಬಾಣಗಳು ಯಾವ ಕಡೆಗೂ ನುಗ್ಗಲು ಅವಕಾಶಕೊಡದೆ ತನ್ನ ಉತ್ತಮ ಬಾಣಗಳಿಂದ ಕತ್ತರಿಸುತ್ತಿರಲು ಅರ್ಜುನನು ಆರ್ಭಟಮಾಡಿ ಸಾವಕಾಶಮಾಡದೆ ಸಮೀಪಿಸಿ ಹೊಡೆದು ಅಲ್ಲಿಯ ರಾಜರುಗಳೆಲ್ಲ ಸಂಭ್ರಾಂತರಾಗುವ ಹಾಗೆ ಭಯವಿಲ್ಲದೆ ಮುಂದೆ ಬಂದು ಹೋರಾಡಿದನು. ವ|| ನಮ್ಮ ಮೊಮ್ಮಗನಿಗೂ ನಮಗೂ ಈಗ ಯುದ್ಧವು ಸಮಾನವಾಯಿತು ಎಂದು ಭೀಷ್ಮನು (ತಮ್ಮ ಆಚಾರ್ಯರಾದ) ಪರಶುರಾಮನು ಕೊಟ್ಟ ದಿವ್ಯಾಸ್ತಗಳನ್ನು ಒಂದೊಂದಾಗಿ ಕ್ರಮದಿಂದ ಪ್ರಯೋಗಿಸಿದನು. ೪೩. ಆಸ್ಟ್ರೇಯಾಸ್ತ್ರವನ್ನು ವಾರಣಾಸ್ತದಿಂದ ಕತ್ತರಿಸಿ ಐಂದ್ರಾಸ್ತವನ್ನು ವಾಯ್ಸಸ್ತದಿಂದ ಎದುರಿಸಿ ರಾಜರುಗಳನ್ನೆಲ್ಲ ಹೆದರುವ ಹಾಗೆ ಮಾಡಿ ದೇವತೆಗಳೆಲ್ಲ ಆಕಾಶದಲ್ಲಿ ಗುಂಪುಗುಂಪಾಗಿ ಕೂಡಿ ಸ್ತೋತ್ರಮಾಡುತ್ತಿರಲು ಅರ್ಜುನನು ಇಂದ್ರಾಸ್ತದಿಂದ ಭೀಷ್ಕನು ಮೇಲಕ್ಕೆ ನೆಗೆಯುವ ಹಾಗೆ ಹೋರಾಡಿದನು. ಅರ್ಜುನನ ಶೌರ್ಯ ಸಾಮಾನ್ಯವೆ? ವll ಹಾಗೆ ಬೆಲೆಯೇ ಇಲ್ಲದ ಅಸ್ತಗಳನ್ನುಳ್ಳ ಅರ್ಜುನನು ತನ್ನ ಅಮೋಘಾಸ್ತ್ರಗಳನ್ನು ಕತ್ತರಿಸಲು ಭೀಷ್ಮನು ಧರ್ಮರಾಜನಿಗೆ ತಾನು ಕೊಟ್ಟ ಮಾತನ್ನು ಜ್ಞಾಪಿಸಿಕೊಂಡು ಸಾಮಾನ್ಯವಾದ ಬಾಣಗಳಿಂದ ಮೇಳಗಾಳೆಗವನ್ನು ಕಾದಿದನು. ೪೪. ಶ್ರೇಷ್ಠರಾದ