________________
ವ|| ಆ ಪ್ರಸ್ತಾವದೊಳ್
ಕಂ।।
ಎನ್ನುಮನಸುರಾರಿಯ ಪಿಡಿ
ವುನ್ನತ ಕರಚಕ್ರಮಂದು ಭೀಷಂ ತಡೆಗುಂ 1 ಮುನ್ನಮಡಂಗುವೆನೆಂಬವೂ ಲನ್ನೆಗಮಸ್ತಾಚಳಸ್ಥನಾದಂ ದಿನಪಂ ||
ಕಂ।। ಬರಿಸಿ ಮನೆಗಸುರವೈರಿಯ
ವ|| ಆಗಳೆರಡುಂ ಪಡೆಗಳನಹಾರತೂರ್ಯಂಗಳಂ ಬಾಜಿಸಿ ಮುನ್ನೊತ್ತಿದ ವೇಳೆಗಳ ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್
ನರಸಂ ಭೀಷ್ಮಂಗೆ ಚಕ್ರಮಿಂತೇಕೆ ಮೊಗಂ | ದಿರಿದುದೊ ನಿಮ್ಮಂ ಪಿಡಿದನ ಗರಿದೆನಲರಿದುಂಟೆ ಧುರದೊಳೇನಸುರಾರೀ ||
ಏಕಾದಶಾಶ್ವಾಸಂ | ೫೦೯
ಬೆಸಸೆನೆ ನುಡಿದಂ ಮುರನೆಂ ಬಸುರನನೆನಗಾಗಿ ಕಾದಿ ಭೀಷಂ ಪಿಡಿದೊ | ಪ್ಪಿಸಿದೊಡೆ ವೈಷ್ಣವ ಬಾಣಮ ನೊಸೆದಿತ್ತೆನದಂ ಗೆಲ ಕೆಯ್ದುಗಳೊಳವೇ ||
೨೪
ಭೇದದೊಳಲ್ಲದೆ ಗೆಲಲರಿ
ದಾದಂ ಸುರಸಿಂಧುಸುತನನಿಂದಿರುಳೊಳ್ ನೀಂ | ಭೇದಿಸೆ ನೃಪತಿಯೊರ್ವನೆ
ಆದರದಿಂ ಬಂದು ಸಿಂಧುಸುತನಂ ಕಂಡಂ ||
೨೫
೨೬
೨೭
ನೋಡುತ್ತಿರಲು (ಅವನನ್ನು ತಡೆಯುವುದಕ್ಕಾಗಿ) ದೇವತೆಗಳು ಮಧ್ಯೆ ಪ್ರವೇಶ ಮಾಡಿದರು. ೨೪. ನನ್ನನ್ನು ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಸೇರುವವನಾದನು. (ಸೂರ್ಯನು ಅಸ್ತವಾದನು). ವ|| ಆಗ ಎರಡು ಸೈನ್ಯಗಳೂ ಯುದ್ಧ ನಿಂತಿತೆಂದು ತಿಳಿಸುವ ವಾದ್ಯಗಳನ್ನು ಬಾಜಿಸಿದುವು. ಮೊದಲು ಎದ್ದಿದ್ದ ಅಲೆಗಳು ಸಮುದ್ರವನ್ನು ಪ್ರವೇಶಿಸುವಂತೆ ಸೈನ್ಯಗಳು ತಮ್ಮತಮ್ಮ ಶಿಬಿರಗಳನ್ನು ಪ್ರವೇಶಿಸಿದವು. ಆಗ ೨೫. ಧರ್ಮರಾಜನು ಕೃಷ್ಣನನ್ನು ಮನೆಗೆ ಬರಮಾಡಿಕೊಂಡು ನಿಮ್ಮ ಚಕ್ರವು ಭೀಷ್ಮನಿಗೇಕೆ ವಿಮುಖವಾಯಿತೋ? ಕೃಷ್ಣ! ನಿಮ್ಮನ್ನಾಶ್ರಯಿಸಿದ ನನಗೆ ಯುದ್ಧದಲ್ಲಿ ಅಸಾಧ್ಯವೆಂಬುದಿಲ್ಲ ಎಂದನು. ೨೬. ಕೃಷ್ಣ ಹೇಳಿದನು : ಮುರನೆಂಬ ಅಸುರನೊಂದಿಗೆ ಕಾದಿ ಸೋಲಿಸಿ ನನಗೊಪ್ಪಿಸಿದುದರಿಂದ ಮಚ್ಚಿ ಭೀಷ್ಮನಿಗೆ ನಾನು ವೈಷ್ಣವಾಸ್ತ್ರ ಕೊಟ್ಟಿದ್ದೆ. ಅದನ್ನು ಯಾರೂ ಗೆಲ್ಲಲಾರರು ಎಂದನು. ೨೭. ಭೀಷ್ಮನನ್ನು ಭೇದೋಪಾಯದಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಈ ರಾತ್ರಿ ನೀನು ಅವನನ್ನು ಭೇದಿಸು ಎನ್ನಲು ರಾಜನೊಬ್ಬನೇ ಆದರದಿಂದ ಬಂದು ಭೀಷ್ಮನನ್ನು ಕಂಡನು.