________________
೫೦೮ | ಪಂಪಭಾರತಂ
ಮೂಲಕ್ಕೆ ರಥಮುಮನೊಂದು ಕೋಟಿ ತುರುಷ್ಕ ತುರಂಗಂಗಳುಮಂ ಪದಿನೆಂಟು ಕೋಟಿ ಪದಾತಿಯುಮನಲಸದೆ ಪೇಸೇಜ್ ಕೊಂದು ಪರಶುರಾಮನಲ್ಲಿ ಪಡೆದ ದಿವ್ಯಾಸ್ತ್ರಂಗಳನೊಂದನೊಂದು ಸೂಳೆ ತೊಟ್ಟು
ಕಂ।।
ನುಡಿವಳಿಗೆ ನರನ ರಥಮಂ
ಪಡುವಣ್ಣಾವುದುವರಂ ಸಿಡಿಲ್ವಿನಮೆಚ್ಚ | ಚುಡಿಯೆ ಭುಜಬಲದೆ ಹರಿಯುರ
ದೆಡೆಯಂ ಬಿರಿಯೆಚ್ಚು ಮೆದನಳವಂ ಭೀಷಂ ||
ವ|| ಆಗಳ
ಕಂ।।
ದೇವಾಸುರದೊಳಮಿಂದಿನ
ನೋವಂ ನೊಂದಯೆನುಟೆದ ಕೆಯ್ದುವಿನೊಳಿವು |
ಸಾವನೆ ಸೆರಗಂ ಬಗೆದೊಡೆ
ಸಾವಾದಪುದೆಂದು ಚಕ್ರಿ ಚಕ್ರದೊಳಿಟ್ಟಂ ||
ಇಷ್ಟೊಡೆ ತನಗಸುರಾರಿಯ
ಕೊಟ್ಟ ಮಹಾ ವೈಷ್ಣವಾಸ್ತಮಂ ಗಾಂಗೇಯಂ | ತೊಟ್ಟಿಸುವುದುಮೆರಡುಂ ಕಿಡಿ
ಗುಟ್ಟಿ ಸಿಡಿಲ್ ಸಿಡಿಯ ಪೋರ್ದುವಂಬರತಳದೊಳ್ ||
ಪೋರ್ವುದುಮಿಂ ಪೆಜತಂಬಿಂ
ತೀರ್ವುದೆ ಪಗೆಯೆಂದು ಪಾಶುಪತಮಂ ಪಿಡಿಯಲ್ | ಪಾರ್ವುದುಮರ್ಜುನನಾಗ
• ಬೇರ್ವೆರಸು ಕಿಲೆ ಬಗೆಯ ಸುರರೆಡೆವೊಕ್ಕರ್ ||
UG
ود
೨೩
ಜುಗುಪ್ಪೆಯಾಗುವ ಹಾಗೆ ಕೊಂದನು. ಪರಶುರಾಮನಿಂದ ಪಡೆದಿದ್ದ ದಿವ್ಯಾಸ್ತ್ರಗಳೊಂದೊಂದನ್ನೂ ಒಂದೊಂದು ಸರದಿಯಿಂದ ತೊಟ್ಟು ೨೦. ಆಡಿದ ಮಾತನ್ನು ಪೂರ್ಣಗೊಳಿಸುವುದಕ್ಕೆ (ಮಾತ್ರ) ಅರ್ಜುನನ ತೇರನ್ನು ಪಶ್ಚಿಮದ ಕಡೆ ಎಂಟುಗಾವುದದವರೆಗೆ ಸಿಡಿದು ಹೋಗುವಂತೆ ಹೊಡೆದನು. ರಥದ ಅಚ್ಚು ಮುರಿಯಿತು. ಬಾಹುಬಲದಿಂದ ಕೃಷ್ಣನ ಹೃದಯಪ್ರದೇಶವನ್ನು ಬಿರಿಯುವಂತೆ ಹೊಡೆದು ಭೀಷ್ಮನು ತನ್ನ ಶಕ್ತಿಯನ್ನು ಪ್ರದರ್ಶಿಸಿದನು. ವ|| ಆಗ ೨೧. ದೇವಾಸುರರ ಯುದ್ಧದಲ್ಲಿಯೂ ಈ ದಿನದ ನೋವನ್ನು ಅನುಭವಿಸಿರಲಿಲ್ಲ; ಉಳಿದ ಆಯುಧಗಳಿಂದ ಇವನು ಸಾಯುತ್ತಾನೆಯೇ? ಸಹಾಯವನ್ನು ಅಪೇಕ್ಷಿಸಿದರೆ ಮರಣವುಂಟಾಗುತ್ತದೆ ಎಂದು ಶ್ರೀಕೃಷ್ಣನು ಚಕ್ರಾಯುಧದಿಂದಲೇ ಹೊಡೆದನು. ೨೨. ಭೀಷ್ಮನು ವಿಷ್ಣುವು ಕೊಟ್ಟ ಮಹಾವೈಷ್ಣವಾಸವನ್ನು ಪ್ರಯೋಗಿಸಿದನು. ಎರಡು ಅಸ್ತ್ರಗಳೂ ಕಿಡಿಗಳನ್ನು ಚೆಲ್ಲಿ ಸಿಡಿಲು ಸಿಡಿಯುವಂತೆ ಆಕಾಶಪ್ರದೇಶದಲ್ಲಿ ಹೋರಾಡಿದುವು. ೨೩. ಶತ್ರುವು ಇನ್ನು ಬೇರೆಯ ಬಾಣದಿಂದ ನಾಶವಾಗುವುದಿಲ್ಲವೆಂದು ಯೋಚಿಸಿ ಮೂಲೋತ್ಪಾಟನಮಾಡುವುದಕ್ಕೆ ಅರ್ಜುನನು ಪಾಶುಪತಾಸ್ತ್ರವನ್ನೇ ಹಿಡಿಯಲು