________________
೪೬ | ಪಂಪಭಾರತಂ ನಿಲೆ' ಎನ್ನುವನು. ಪಂಪನ ಕೃಷ್ಣನು ಭಗವಂತನೇ ಆದರೂ ಮಾನವನಂತೆಯೇ ಅರ್ಜುನನ ಪರಮಮಿತ್ರನಾಗಿ ಉಚ್ಚರಾಜಕಾರಣಪಟುವಾಗಿ ನಡೆದುಕೊಳ್ಳುತ್ತಾನೆ. ಕೊನೆಗೆ ವಿಬುಧವನಜವನಕಳಹಂಸನಾದ ಧರ್ಮರಾಜನು ಪುರುಷೋತ್ತಮನನ್ನು ಕುರಿತು
ನಿನ್ನ ದಯೆಯಿಂದಂ, ಅರಿನ್ನಪ ರಂ, ನೆರೆ ಕೊಂದೆಮಗೆ ಸಕಳ ರಾಜಶ್ರೀಯುಂ ನಿನ್ನ ಬಲದಿಂದ ಸಾರ್ದುದು
ನಿನ್ನುಪಕಾರಮನದೇತಜಿತೋಳ್ ನೀಗುವೆನೋ ||
ಎಂದು ಅನುನಯವಚನ ರಚನಾಪರಂಪರೆಗಳಿಂದ ಮುಕುಂದನನ್ನು ದ್ವಾರಾವತಿಗೆ ಕಳುಹಿಸಿಕೊಡುತ್ತಾನೆ.
ಅರ್ಜುನನು ಪಂಪಭಾರತದ ಕಥಾನಾಯಕ. ಆದುದರಿಂದಲೇ ಅದಕ್ಕೆ 'ವಿಕ್ರಮಾರ್ಜುನ ವಿಜಯ' ಎಂದು ಕವಿ ನಾಮಕರಣ ಮಾಡಿದ್ದಾನೆ. ಅವನ ಅಪರಾವತಾರನೆಂದು ಭಾವಿಸಿದ ಅರಿಕೇಸರಿಯ ವೀರ್ಯ ಶೌರ್ಯ ಔದಾರ್ಯಗಳನ್ನು ಅದ್ದೂರಿಯಿಂದ ಚಿತ್ರಿಸುವುದಕ್ಕಾಗಿಯೇ ಪಂಪನು ಈ ಕಾವ್ಯವನ್ನು ರಚಿಸಿದುದು. ಆದುದರಿಂದ ಅವನ ಪಾತ್ರರಚನೆಯಲ್ಲಿ ಕವಿತಾಗುಣಾರ್ಣವನು ತನ್ನ ಸರ್ವಶಕ್ತಿಯನ್ನು ವ್ಯಯಮಾಡಿದ್ದಾನೆ. ಎರಡು ಮಕ್ಕಳಾಗಿದ್ದರೂ ಕುಂತಿ ಸರ್ವ ಲಕ್ಷಣಸಂಪನ್ನನಾದ ಮತ್ತೊಬ್ಬನಿಗೆ ಆಸೆಪಡುತ್ತಾಳೆ. ವ್ರತೋಪವಾಸವನ್ನು ಮಾಡುತ್ತಾಳೆ, ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಇಂದ್ರನು 'ಕುಲಗಿರಿಗಳ ಬಣ್ಣುಮಂ ಧರಾತಳದ ತಿಣ್ಣುಮಂ ಆದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ, ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮಂ, ಈಶ್ವರನ ಪ್ರಭುಶಕ್ತಿಯುಮಂ, ಜವನ ಬಲ್ಲಾಳನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಗೂಡಿಸಿ ಕುಂತಿಯ ಗರ್ಭಪುಟೋದರದೊಳ್ ತನ್ನ ದಿವ್ಯಾಂಶವೆಂಬ ಮುಕ್ತಾಫಲಬಿಂದುವಿನೊಡನೆ ಸಂಕ್ರಮಿಸಿ' ಇಡುತ್ತಾನೆ. ಕುಂತಿಗೆ ಷೋಡಶಸ್ವಪ್ನವಾಗುತ್ತದೆ. ಗ್ರಹಗಳೆಲ್ಲವೂ ತಂತಮುಚ್ಚಸ್ಥಾನಗಳಲ್ಲಿದ್ದ ಶುಭಮುಹೂರ್ತದಲ್ಲಿ ತೇಜೋಮಯನಾದ ಶಿಶುವುದಿಸಿದನು, ದೇವದುಂದುಭಿ ಮೊಳಗಿತು. ಮೂವತ್ತುಮೂಲದೇವರೂ ಇಂದ್ರನೊಡಗೂಡಿ ಜನೋತ್ಸವವನ್ನು ಮಾಡಿ, ಮುಂಡಾಡಿ ನೂರೆಂಟು ನಾಮಗಳಿಂದ ನಾಮಕರಣೋತ್ಸವವನ್ನು ಮಾಡಿದರು. ಭೀಷ್ಮನ ತೋಳ ತೊಟ್ಟಿಲಿನಲ್ಲಿ ಬೆಳೆದನು. ಕುಶಾಗ್ರಬುದ್ದಿಯಾದ ಗುಣಾರ್ಣವನು ಕೃಪಾಚಾರ್ಯನ ಪಕ್ಕದಲ್ಲಿ ಉಳೊದುಗಳನ್ನೆಲ್ಲ ಕಲಿತನು. ದ್ರೋಣಾಚಾರ್ಯರಲ್ಲಿ ಅಭ್ಯಸಿಸಿ ಪಾರಂಗತನಾದನು. ದ್ರುಪದನನ್ನು ಪರಾಭವಿಸಿ ಗುರುದಕ್ಷಿಣೆಯನ್ನಿತ್ತನು. ಅಲ್ಲಿ ಕರ್ಣನ ಪರಿಚಯವಾಯಿತು. ಹಾಗೆಯೇ ಅವನೊಡನೆ ಸ್ಪರ್ಧೆಯೂ ಪ್ರಾರಂಭವಾಯಿತು. ಕೆಲಕಾಲ ಸಹೋದರರೊಡನೆ ವಾರಣಾವತದಲ್ಲಿ ಸುಖವಾಗಿ ವಾಸಿಸಿದನು. ಅರಗಿನ ಮನೆಯ ಪ್ರಸಂಗದಿಂದ ಬೇರೆ ಬೇರೆ ಕಡೆಯಲ್ಲಿದ್ದು ಛತ್ರಪತಿ ಪುರದಲ್ಲಿ ಮತ್ಯಭೇದನದಿಂದ ಬ್ರೌಪದಿಯನ್ನು ವರಿಸಿದನು. ಅಲ್ಲಿಂದ ಮುಂದೆ ಪಂಪನು ಭಾರತದ ಬಹುಭಾಗವನ್ನು