________________
ದಶಮಾಶ್ವಾಸಂ / ೪೯೩ ವ|| ಅಂತುತ್ತರಂ ತನಗಳವುಮದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ
ಉlು.
ತಾರಕನಂ ಗುಹಂ ಮುಳಿದು ಶಕ್ತಿಯಿನಾಂತಿಡುವಂತರಾತಿ ಸಂ ಹಾರಕವಪ್ಪ ವಿನ್ನುರಿತ ಶಕ್ತಿಯಿನಾತನವಿಟ್ಟು ಖದಿಂ | ವಾರಣಮಂ ಪಡಲ್ವಡಿಸಿ ತಾಂ ಪೆಂಪಿಂಗುವುದುಂ ಬಲಕ್ಕೆ ಹಾ ಹಾ ರವಮುಹ್ಮ ದಂತಿವರಸಾಜಿಯೊಳುತ್ತರನಟ್ಟಿ ತಟ್ಟೆದಂ ||
೧೧೨
ವ|| ಅಂತುತ್ತರನಂ ಜವಂಗೆ ಪೊಸತಿಕ್ಕುವ೦ತಿಕ್ಕಿ ಬಸವಳದ ಶಲ್ಯನಂ ಕೃತವರ್ಮ೦ ತನ್ನ ರಥಮನೇಳಿಸಿಕೊಂಡು ನಿಂದನನ್ನೆಗಮಿತ್ತಲಮರಾಪಗಾಸುತನ ಮೊನೆಯೊಳ್ ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ ತನ್ನ ತಮ್ಮನತೀತನಾದುದಂ ಕೇಳು
ಚಂ|| ಪ್ರಳಯಪಯೋಧಿವೋಲಳುರ್ದು ಪಂಕುಳಿಗೊಂಡ ಮದೇಭವೈರಿವೋಲ್
ಕೆಳರ್ದು ಲಯಾಗ್ನಿಮೋಲಳುರ್ದು ಮದ್ರಮಹೀಶನನೆಮ್ಮೆ ತಾಗೆ ಬ | wಳ ಬಳದತ್ತು ಶಲ್ಯನೊಳೆ ಕಾಳಗಮೀಗಳೆನುತ್ತುಮಂತೆ ಕೆ ಯೊಳಲಂಕೇತು ಸಿಂಧುತನಯಂಬೆರಸಾಗಡೆ ಬಂದು ತಾಗಿದಂ || ೧೧೩
ಅಸ್ತರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ (ತನ್ನ ಆನೆಯನ್ನು ಅವನ ಮೇಲೆ ಭೂಬಿಟ್ಟು ಒಮ್ಮೆಯೇ ತೇರಿನಿಂದ ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು. ವ|| ಹಾಗೆ ಉತ್ತರನು ತನಗೆ ಪರಾಕ್ರಮವೂ ಶಕ್ತಿಯೂ ಚಂದ್ರನಂತೆ ಅಭಿವೃದ್ಧಿಯಾಗುವ ಹಾಗೆ ಕಾದಲು ಶಲ್ಯನು ರಥಹೀನನಾಗಿ ಅವಮಾನಗೊಂಡು-೧೧೨. ಹಿಂದೆ ತಾರಕಾಸುರನನ್ನು ಷಣ್ಮುಖನು ಎದುರಿಸಿ ಶಕ್ತಾಯುಧದಿಂದ ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ ಶಸ್ತ್ರಾಯುಧದಿಂದ ಉತ್ತರವನ್ನು ಹೊಡೆದು ಆತನ ಆನೆಯನ್ನು ಕೆಳಗುರುಳಿಸಿದನು. ಪಾಂಡವಸೈನ್ಯದಲ್ಲಿ ಹಾ ಹಾ ರವವನ್ನುಂಟುಮಾಡಿ ಶಲ್ಯನು ಹಿಂದಿರುಗುತ್ತಿರಲು ಯುದ್ದದಲ್ಲಿ ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು (ಕುಸಿದನು). ವಗೆ ಉತ್ತರವನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು ತನ್ನ ರಥದಲ್ಲಿ ಹತ್ತಿಸಿಕೊಂಡು ತಾನು ಯುದ್ಧಕ್ಕೆ ನಿಂತನು. ಅಷ್ಟರಲ್ಲಿ ಈಕಡೆ ಭೀಷ್ಮನು ಯುದ್ಧದಲ್ಲಿ ಆರ್ಭಟಿಸಿ ವೇಗದಿಂದ ಯುದ್ದಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು ತನ್ನ ತಮ್ಮನು ಸತ್ತುಹೋದುದನ್ನು ಕೇಳಿದನು -೧೧೩. ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ ಹುಚ್ಚುಹಿಡಿದ ಸಿಂಹದಂತೆ ಪ್ರಳಯಾಗ್ನಿಯಂತೆ ಹರಡಿ ಶಲ್ಯರಾಜನನ್ನು ವೇಗದಿಂದ ಬಂದು ತಾಗಿದನು. ಈಗ ಶಲ್ಯನಲ್ಲಿ ಯುದ್ಧವು ಅಧಿಕವಾಗಿ ಬೆಳೆದಿದೆ ಎಂದು ಹೇಳುತ್ತ ದುರ್ಯೋಧನನು ಆ ಯುದ್ದಭಾರವನ್ನು ತಾನೇ ವಹಿಸುವುದಕ್ಕಾಗಿ (ಶಲ್ಯನನ್ನು ರಕ್ಷಿಸುವುದಕ್ಕಾಗಿ) ಭೀಷ್ಮನೊಡನೆ ಅಲ್ಲಿಗೆ ಬಂದು ತಾಗಿದನು.