________________
೪೯೨ | ಪಂಪಭಾರತಂ
ಕಂ
ಮೃಗರಾಜನಖರ ಬಾಣಾ
ಳಿಗಳಿಂ ತೆಗೆನೆದು ಶಲ್ಯನುದಿಗೆ ಬಿದುವಂ ಮೃಗರಾಜಂಗಳ ಪೋಟ್ಟವೊ
ಅಗಲ್ವಿನಂ ಪೋಟ್ಟುವುದ ಬಾಣಾವಳಿಗಳ
೧೦೯
ವ|| ಅಂತಾ ದಂತಿಘಟೆಯಂ ಪಡಲ್ವಡಿಸಿ ನೀಳನೇಟದಾನೆಯುಮಮೂತಿ ಕೊಂಡೆಚ್ಚಾಗಳ್
ಕಂ।।
ಪೆಗಿಡುವ ದಂತಿಯಂ ಕಲಿ
ನಿಸಿ ಚಲಂ ನೆಲಸೆ ತೋಟಿಕುಡುವುದುಮಾಗಳ್ | ಪೊಮುಯ್ಯುವರಂ ತನ ದುಅದಚ್ಚು ಶಲ್ಯನಾಂತ ನೀಳನ ತಲೆಯಂ
೧೧೦
;
ವ|| ಅಂತು ನೀಳಂ ನೀಳಗಿರಿಯ ಮೇಗಣಿಂ ಬರಿಸಿಡಿಲ್ ಪೊಡೆಯ ಕಡವ ಮೃಗರಾಜನಂತೆ ಹಸ್ತಿಮಸ್ತಕದಿಂ ಕೆಡೆವುದುಮತ್ತ ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದುತ್ತರಂ ನಾಲ್ವತ್ತು ಸಾಸಿರಮಾನೆವೆರಸರಸನಂ ಹೆಳಗಿಕ್ಕಿ ಬಂದಾಂತಾಗಳ್
ಚಂ।। ನಗೆ ಪಗೆವಾಡಿ ಗೋಗ್ರಹಣದೊಳ್ ಪೋಮಾಳದ ಬನ್ನದೊಂದು ನೆ ಟ್ಟಿಗೆ ಮನಮಂ ಪಳಂಚಲೆಯೆ ಮಾಣದೆ ಶಲ್ಯನನಂದಶಲ್ಯನಂ | ಬಗೆವವೊಲೇಳಿದಂ ಬಗೆದು ದಂತಿಯನಾಗಡ ತೊಟೆಕೊಟ್ಟು ತೊ ಟ್ಟಗೆ ರಥಮಂ ಪಡಲ್ವಡಿಸಿ ಪೂನರಾತಿಯನಸ್ತ್ರಕೋಟಿಯಿಂ ।।
000
ಶಲ್ಯನನ್ನು ರಾಜನ ಸೇನಾಧಿಪತಿಯಾದ ನೀಲನು ಮಧ್ಯೆ ನುಗ್ಗಿ ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ ಪ್ರತಿಭಟಿಸಿದನು. ೧೦೯. ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ ಶಲ್ಯನು ದೀರ್ಘವಾಗಿ ಸೆಳೆದು ಹೊಡೆಯಲಾಗಿ ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ ಆ ತೀಕ್ಷ್ಮವಾದ ಬಾಣಸಮೂಹಗಳು (ಕುಂಭಸ್ಥಳಗಳನ್ನು) ಬೇರೆಯಾಗುವ ಹಾಗೆ (ಹೋಳುಗಳಾಗುವ ಹಾಗೆ) ಸೀಳಿ ಹಾಕಿದುವು. ವ|| ಹಾಗೆ ಆ ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ ನೀಲನು ಹತ್ತಿದ ಆನೆಯನ್ನೂ ಬಲವಾಗಿ ಅಮುಕಿ ಹೊಡೆದನು. ೧೧೦. ಹಿಮ್ಮೆಟ್ಟುತ್ತಿದ್ದ ಆನೆಯನ್ನು `ಶೂರನಾದ ನೀಲನು ನಿಲ್ಲಿಸಿ ಹೆಚ್ಚಿನ ಛಲದಿಂದ ಅದನ್ನು ಶಲ್ಯನ ಮೇಲೆ ಬಿಡಲು ಆಗ ಶಲ್ಯನು ಭುಜದವರೆಗೆ ಬಾಣಗಳನ್ನು ಸೆಳೆದು ತನ್ನನ್ನು ಪ್ರತಿಭಟಿಸಿದ ನೀಲನ ತಲೆಯನ್ನು ಸಾವಕಾಶಮಾಡದೆ ವೇಗವಾಗಿ ಹೊಡೆದನು. ವ| ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ ವೇಗವಾಗಿ ಕೆಳಗುರುಳುವ ಸಿಂಹದ
;
ಹಾಗೆ ಆನೆಯ ಕುಂಭಸ್ಥಳದಿಂದ ಕೆಡೆದನು. ಆಕಡೆ ಭೂರಿಶ್ರವನ ಯುದ್ಧದಲ್ಲಿ ಕಾದುತ್ತಿದ್ದ ಉತ್ತರನು ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದನು. ೧೧೧. ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವು ನೇರವಾಗಿ ತನ್ನ ಮನಸ್ಸನ್ನು ತಗುಲಿ ವೇದನೆಯನ್ನುಂಟುಮಾಡುತ್ತಿರಲು ತಡೆಯದೆ ಉತ್ತರನು ಶತ್ರುರಾಜನನ್ನು