________________
ದಶಮಾಶ್ವಾಸಂ / ೪೬೧ ಮ! ಮದವದ್ದಂತಿ ಮದಾಂಬುಧಾರಗಳವಂದೊಂದೊಂದಲೊಳ್ ಕೂಡ ಪ
ಇದ ಜಾತ್ಯತ್ವ ರಥಾಶ್ವ ಸಂಕುಳ ಖಲೀನೋದೂತ ಲಾಲಾಜಲಂ | ಕದಡತ್ರಮವುಂಕೆ ಬೇಜ ಪರಭಾಗಂಬತ್ತು ಲೋಕಕ್ಕೆ ಸ ನಿದಮಾಗಿರ್ದುವು ಕೌರವಧ್ವಜಿನಿಯೊಳ್ ಕಾಳಿಂದಿಯುಂ ಗಂಗೆಯುಂ || ೩೧
ವ|| ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ ಕುಲಗಿರಿಗಳನ್ನಾಡಯುಂ ತನ್ನ ಬಲದ ಪದಾಭಿಘಾತದೊಳಂ ಕುಲಗಿರಿಗಳ ಜೀಣಿಟ್ಟು ವಾಜಪೇಯಿಯುಂ ತನ್ನ ಬಲದ ಪದೋತ್ಥಿತ ರಜಮೆ ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ ನಿಚವಯಣದಿಂ ಬಂದು ಕುರುಕ್ಷೇತ್ರದ ಪೂರ್ವ ದಿಗ್ನಾಗದೋಳ್ ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು ಧರ್ಮಪುತ್ರನಲ್ಲಿಗುಳೂಕನೆಂಬ ದೂತನನಿಂತೆಂದಟ್ಟಿದಂಚಂಗಿ ಮಸೆಯಿಸುಗುಳ್ಳ ಕೆಯ್ತುಗಳನರ್ಚಿಸುಗಾನಗಳು ತಗುಳು ಪೂ
ಜಿಸುಗೆ ವಿಶುದ್ದ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಬ್ಬಿವೀ ! ' ಸಿಸುಗೆ ನಿರಂತರಂ ರವಳಿ ಘೋಷಿಸುಗಿಂದ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ | ೩೨
ಬರಲಾರವು, ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕೆಟ್ಟು ಮುಂದೆ ಹೋಗಲಾರವು, ಸೂರ್ಯಬಿಂಬವು ಪ್ರಕಾಶಹೀನವಾಗಿ ವೈಭವದ ಭಾರದಿಂದ ಕೂಡಿದ ಕೌರವಸೇನೆಯಂತೆಯೇ ಕೊನೆ, ಎಲ್ಲೆ, ಪ್ರಮಾಣಗಳನ್ನು ತಿಳಿಯಲಾರದಂತಿದ್ದುವು ೩೧, ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವೂ ಸಿದ್ದವಾಗಿ ಅಲಂಕೃತವಾಗಿರುವ ಜಾತ್ಯತ್ವ ಮತ್ತು ರಥಾಶ್ವ (ಜಾತಿ ಕುದುರೆ ಮತ್ತು ತೇರಿನ ಕುದುರೆಗಳ ಕಡಿವಾಣಗಳ ಸಮೂಹದಿಂದ ಹುಟ್ಟಿದ ಜೊಲ್ಲಿನ ರಸವೂ ಒಂದರೊಡನೊಂದುಗೂಡಲು (ಒಂದನ್ನೊಂದು ಒತ್ತರಿಸಲು) ಗಂಗಾ ಯಮುನಾನದಿಗಳು ಬೇರೆ ಆಕಾರವನ್ನು ಪಡೆದು ಕೌರವ ಸೈನ್ಯ ಪ್ರದೇಶದಲ್ಲಿ ಹರಿಯುವ ಹಾಗಿದ್ದುವು. ವ ದುರ್ಯೋಧನನು ಸೈನ್ಯದ ಆನೆಗಳ ಸಮೂಹದ ಕಿವಿಯ ಬೀಸುವಿಕೆಯ ಪೆಟ್ಟಿನಿಂದ ಕುಲಪರ್ವತಗಳಳ್ಳಾಡಿದುವು. ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಪುಡಿಯಾಗಿ ಮೇಲಕ್ಕೆದ್ದು ಹಾರಿದುವು. ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ ಮಹಾಸಮುದ್ರಗಳನ್ನು ಇದ್ದಕ್ಕಿದ್ದ ಹಾಗೆ ತುಂಬಿತು. ಹೀಗೆ ನಿತ್ಯಪ್ರಯಾಣದಿಂದ ಬಂದು ಕುರುಕ್ಷೇತ್ರದ ಪೂರ್ವದಿಗ್ಯಾಗದಲ್ಲಿ ಪ್ರಳಯ ಕಾಲವೇ ಗುಂಪುಗೂಡಿದ ಹಾಗೆ ಬೀಡನ್ನು ಬಿಟ್ಟು ದುರ್ಯೋಧನನು ಧರ್ಮರಾಜನ ಹತ್ತಿರಕ್ಕೆ ಉತೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು. ೩೨. ಇರುವ ಆಯುಧಗಳನ್ನು ಹರಿತಮಾಡಲಿ, ಆನೆಗಳನ್ನು ಪೂಜಿಸಲಿ, ಪರಿಶುದ್ಧರಾದ ಕುದುರೆಗಳನ್ನು ಶ್ರದ್ದೆಯಿಂದ ಪೂಜಿಸಲಿ; ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ. ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಘೋಷವಾಗುತ್ತಿರಲಿ; ಉತ್ಸಾಹದಿಂದ ಕೂಡಿ ಯುದ್ದಮಾಡಬೇಕಾದ ಈದಿನ ಯುದ್ಧರಂಗದಲ್ಲಿ ವ್ಯರ್ಥಾಲಾಪ ಮಾಡುತ್ತಿರಲು ಕಾರಣವೇನು ? ನೇರವಾಗಿ ನಾಳೆಯಿಂದಲೇ ಕಾಳಗ