________________
೪೬೦ / ಪಂಪಭಾರತಂ
ಬರೆ ಯುಯುತ್ಸು ದುಶ್ಯಾಸನ ಚಿತ್ರಸೇನ ದುಸ್ಸಹ ದುಸ್ಸಳ ಎಂದಾನುವಿಂದ ದುರ್ಧಷ್ರಣ ದುರ್ಮಷ್ರಣ ದುಸ್ಸರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಳೆದು ಬಳಸಿ ಬರೆ ವಿಳಯಕಾಳ ವಾತಾಹತಿಯಿಂ ಜಳನಿಧಿಯ ತಳರ್ವಂತೆ ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್
ಚoll ಕರಿ ಮಕರಂಗಳಂ ಕರಿ ಘಟಾವಳಿಯಬಕುಳಂಗಳಂ ಭಯಂ ಕರತರಮಾದ ಪೆರ್ದೆರೆಗಳಂ ಹಯಸಂತತಿ ಮತ್ಸಕೋಟಿಯಂ | ಸುರಿತ ನಿಶಾತಹೇತಿಯುತ ಸದ್ಧಟಕೋಟಿ ನಿರಂತರಂ ತಿರ ಸ್ಮರಿಸಿರೆ ಪೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಾರ್ಣವಂ || ಮದವದ್ದಂತಿ ವರೂಥ ವಾಜಿ ಭಟ ಸಂಘಾತಂಗಳಿ ಲೆಕ್ಕಮಂ ಬುದನಾಂ ನಿಟ್ಟಿಸಲಾನೊಂದನವೆಂ ತತ್ತ್ವನ ಪಾದೋತಂ | ಪುದಿದತ್ತಂ ರಜಮಂಬರಸ್ಥಳಮುಮಂ ಮುಟ್ಟಿತ್ತು ತಳುರ್ವಿ ಪ ರ್ವಿದೊಡಾ ಮುನ್ನಿನ ತೆಳುಗೆಟ್ಟು ಕೆಸಲಾಯಾಕಾಶ ಗಂಗಾಜಲಂ || ೨೯
ಮ||
ಚಂ
ರವಿಕಿರಣಾಳಿಗಳ ಧ್ವಜಪಟಾಳಿಯ ತಿಂತಿಣಿಯಿಂದಮುರ್ಚಲಾ ಅವ ರವಿವಾಜಿಗಳ ನೆಗೆದ ಪಾಂಸುಗಳಿಂ ದೆಸೆಗೆಟ್ಟು ಹೋಗಲಾ | ಅವ ರವಿಬಿಂಬಮಂದಸೆಯಲಾದ ಪೆಂಪಿನ ತಿನಾಂತ ಕೌ ರವಬಳದಂತು ಮೇರೆ ಪವಣೆಂಬುದನಿನ್ನಳವಂದನಾವುದೋ ||
೨೮
202
ಮುಸ್ಸಹ, ದುಸ್ಸಳ, ವಿಂದಾನುವಿಂದ, ದುರ್ಧಷ್ರಣ, ದುರ್ಮಷ್ರಣ, ದುಸ್ಪರ್ಶನ, ದುಷ್ಕರ್ಣ, ಸುಬಾಹು, ದುರ್ಮುಖ, ವಿಕರ್ಣ, ವಿವಿಂಶತಿ, ಸುಲೋಚನ, ಚಿತ್ರೋಪಚಿತ್ರ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹುಗಳೇ ಮೊದಲಾದ ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು. ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಿತು. ೨೮. ನೀರಾನೆಗಳನ್ನೂ ಮೊಸಳೆಗಳನ್ನೂ ಆನೆಯ ಸಮೂಹವೂ, ಮೇಘಸಮೂಹವನ್ನೂ ಅತಿಭಯಂಕರವಾದ ದೊಡ್ಡ ಅಲೆಗಳನ್ನೂ ಕುದುರೆಗಳ ಸಮೂಹವೂ, ಮೀನಿನ ಸಮೂಹವನ್ನು ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಒಳ್ಳೆಯ ಭಟಸಮೂಹವೂ ಒಂದೇಸಮನಾಗಿ ತಿರಸ್ಕರಿಸುತ್ತಿರಲು ಚತುರಂಗಸೇನಾಸಮುದ್ರವು ಘೋಷಿಸುತ್ತಿರುವ ಸಮುದ್ರವನ್ನೇ ಮೀರಿ ಬಂದಿತು. ೨೯. ಮದ್ದಾನೆ, ತೇರು, ಕುದುರೆ, ಕಾಲಾಳುಗಳು ಈ ಲೆಕ್ಕವುಳ್ಳದ್ದು ಎಂದು ನಾನು ಹೇಳಲಾರೆ. ಇಷ್ಟು ಮಾತ್ರ ಹೇಳಬಲ್ಲೆ. ಆ ಸೈನ್ಯದ ತುಳಿತದಿಂದ ಮೇಲೆದ್ದು ಎಲ್ಲ ಕಡೆಯಲ್ಲೂ ವ್ಯಾಪಿಸಿ ಆಕಾಶಪ್ರದೇಶವನ್ನು ಮುಟ್ಟಿದ್ದ ಧೂಳು ಮತ್ತೂ ಹೆಚ್ಚಾಗಿ ವ್ಯಾಪಿಸಲು ಆಕಾಶಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಛತೆಯನ್ನು ಕಳೆದುಕೊಂಡು ಬಗ್ಗಡವಾಯಿತು. ೩೦. ಸೂರ್ಯನ ಕಿರಣಗಳ ಸಮೂಹವು ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು