________________
೪೪೬ | ಪಂಪಭಾರತಂ ಮಂಗಳವಸದನಂಗೊಂಡು ಮಂಗಳ ಪ್ರಧಾನೋಚಿತ ವಿಜಯಗಜಮನೇಲಿ ವಿದ್ಯೋತವಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು ಬಲದ ಕೊಡ ಮೇಲೆ ಕೆಯ್ಯಂ ಪೇಟೆ ಮುಖವಿಕ್ಷೇಪಣಂಗೆಯ್ದು ಘನಾಘನನಿನಾದದಿಂ ಬೃಂಹಿತಂಗೆಯ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರನಗುಟ್ಟು ಕೊಲ್ಕುದನುದಾಹರಿಸುವಂತೆ ದಕ್ಷಿಣ ಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಪಿತಂಗೆಯ್ಯ ವಿಜಯಹಯಮುಂ ವಿಜಯನ ವಿಜಯಮನ ಸೂಚಿಸಿಮಂll ಎಸಗಿತ್ತಂದನುಕೂಲಮಂದಪವನಂ ಪೆಣ್ಣುಂಬಿಗಳ ಮುತ್ತುತುಂ
ಮುಸುಜುತ್ತುಂ ಬರೆ ಬಂದುದಿಂದ್ರವನದಿಂ ಪೂದಂದಲಂಭೋಧಿ ಗ | ರ್ಜಿಸುವಂತಾದುದು ದೇವದುಂದುಭಿ ಜಯಪ್ರಾರಂಭಮಂ ಸಾಳುವಂ ತೆಸೆದತ್ತಚ್ಚರಿಯಪ್ಪಿನಂ ಜಯಜಯಧ್ಯಾನಂ ದಿಗಂತಂಗಳೊಳ್ || ೯೬ ವ|| ಆ ಪ್ರಸ್ತಾವದೊಳ್ಶಾ|| ವಾತ್ಯಾ ದುರ್ಧರ ಗಂಧ ಸಿಂಧುರ ಕಟ ಸ್ರೋತಸ್ಸಮುದ್ಯನದ
ವಾತಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕ ಶ್ರೇಯಸಃ | ಕಿಂಚಾಕಸ್ಮಿಕ ಪಾಂಸು ಪಲ್ಲವ ಜಳಸ್ಕಂದೀ ಸದಾ ಸಿಂಧುರ ಪ್ರಾಗೇಯಂ ಪ್ರಿಯಗಳ ಭೂಪತಿ ಚಮ್ರಪ್ರಸ್ಥಾನಮಾಚಕ್ಷತೇ || ೯೭
ವಿಜಯಗಜವನ್ನೇರಿ ಪ್ರಕಾಶಿಸುತ್ತ ಬಲಗಡೆಯ ಸುಳಿಯನ್ನುಳ್ಳ ಹೋಮಾಗ್ನಿಯನ್ನು ಪ್ರದಕ್ಷಿಣೆ ಮಾಡಿ ಬಲದ ಕೊಂಬಿನ ಮೇಲೆ ಸೊಂಡಿಲನ್ನಿಟ್ಟು ಮುಖವನ್ನು ಅತ್ತಿತ್ತ ಕೊಡವಿ ಗುಡುಗಿನ ಶಬ್ದದಿಂದ ಘೀಳಿಡುವ ವಿಜಯಗಜವೂ ಭೂಮಿಯನ್ನು ಪ್ರವೇಶಿಸಿ ಅಡಗಿಕೊಂಡಿರುವ ಶತ್ರುಗಳನ್ನು ಅಗೆದು ಕೊಲ್ವುದನ್ನು ಉದಾಹರಿಸುವಂತೆ ಬಲಗಾಲಿನಿಂದ ನೆಲವನ್ನು ಕೆದರಿ ಗಂಭೀರ ಧ್ವನಿಯಿಂದ ಕೆನೆಯುವ ವಿಜಯಹಯವೂ ಅರ್ಜುನನ ವಿಜಯವನ್ನೇ ಸೂಚಿಸಿದುವು. ೯೬, ಆಗ ಗಾಳಿಯು ನಿಧಾನವಾಗಿ ಹಿತಕರವಾಗಿ (ಆಪ್ಯಾಯಮಾನವಾಗಿರುವ ರೀತಿಯಲ್ಲಿ ಬೀಸಿತು. ಹೆಣ್ಣುದುಂಬಿಗಳು | ಮುತ್ತುತ್ತಲೂ ಕವಿಯುತ್ತಲೂ ಬರಲು ಇಂದ್ರವನದಿಂದ ಪುಷ್ಪವೃಷ್ಟಿಯಾಯಿತು. ಸಮುದ್ರವು ಘೋಷಿಸುವ ಹಾಗಾಯಿತು. ದಿಕ್ಕುಗಳ ಅಂಚಿನಲ್ಲಿ ಜಯ ಜಯ ಧ್ವನಿಯು ಆಶ್ಚರ್ಯವನ್ನುಂಟುಮಾಡಿದುವು. ದೇವದುಂದುಭಿರವವು ಜಯೋದ್ಯೋಗವನ್ನು ಸಾರುವಂತೆ ಮೊಳಗಿದುವು. ವ|| ಆ ಸಂದರ್ಭದಲ್ಲಿ ಬಿರುಗಾಳಿಯಿಂದ ಧರಿಸಲಸಾಧ್ಯವಾದ ಮದ್ದಾನೆಗಳ ಕಪೋಲಪ್ರದೇಶದ ಮದಧಾರೆಯನ್ನುಳ್ಳುದೂ ಹಾರುತ್ತಿರುವ ಮದೋದಕದ ಮುತ್ತುತ್ತಿರುವ ದುಂಬಿಗಳ ವೇಗವಾದ ಕುಣಿತದ ರಮಣೀಯ ನಾದದಿಂದ ಸಹಜವಾದ ಶ್ರೇಯಸ್ಸನ್ನುಳ್ಳುದೂ ಮತ್ತು ಅಕಸ್ಮಾತ್ತಾಗಿ ಎದ್ದ ಧೂಳನ್ನುಳ್ಳುದೂ ಆನೆಯ ಸೊಂಡಿಲಿನ ತುದಿಯ ನೀರಿನ ಪ್ರವಾಹದಿಂದ ಯಾವಾಗಲೂ ಹರಿಯುತ್ತಿರುವ ನದಿಯನ್ನುಳ್ಳುದೂ ಆದ ಸೇನಾಪ್ರಯಾಣವನ್ನು ಪ್ರಿಯಗಳ್ಳನೆಂಬ ಬಿರುದುಳ್ಳ ಅರಿಕೇಸರಿರಾಜನು ಅಪೂರ್ವ ರೀತಿಯಲ್ಲಿ