________________
ನವಮಾಶ್ವಾಸಂ / ೪೪೫ ಬರೆ ಹಿಡಿಂಬೆಗಂ ಭೀಮಂಗಂ ಪುಟ್ಟಿದ ಮಗ ಘಟೋತ್ಕಚನಜುವತ್ತೆಂಟು ಕೋಟಿ ರಾಕ್ಷಸ ಬಲಂಬೆರಸು ಬರ ಸಾಮಂತ ಚೂಡಾಮಣಿಯ ಕೃತೋಪಕಾರಮಂ ನೆನದಂಗದಪರ್ಣನೆಂಬ ಗಂಧರ್ವ೦ ನಾಲ್ಕು ಕೋಟಿ ಗಂಧರ್ವಬಲಮುಮುವತ್ತು ಸಾಸಿರ ಗಿಳಿಯ ಬಣ್ಣದ ಕುದುರೆಗಳುಂ ಬೆರಸು ಗಂಧರ್ವಲೋಕಮೆ ಕಿತ್ತಿಟ್ಟು ಬರ್ಪಂತೆ ಬರೆ ಮಹಾ ಪ್ರಚಂಡರುಂ ಪ್ರತಾಪಿಗಳುಮಪ್ಪ ಪಂಚಪಾಂಡವರುಮಂಕದಭಿಮನ್ಯುವುಂ ಕೆಲ ಕೆಲದೊಳೋಲಗಿಸುತ್ತುಂ ಬರ ಕೊಂತಿಯ ಮಾವನಪ್ಪ ಕೊಂತಿಭೋಜನುಂ ಸೋಮಕಂ ಬೆರಸೊಂದಕೊಹಿಣೀ ಬಲಂಬೆರಸು ಬರೆ ಮತ್ತು ಪ್ರಭಕಬಲಮುಮಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟಕ ರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕಾಂಧ ದ್ರವಿಳ ಗಜಮುಬಾಹ್ನ ಮುಖೋಪ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣಾಶ್ವಕರ್ಣ ತುರುಷ್ಕ ಪ್ರವರ ನಾನಾದೀಪ ದೇಶಾಧೀಶ್ವರರುಂ ಪಗೆಗಂ ಪಾಟಿಗಂ ಪರಿಭವಕ್ಕಂ ಪಣವೆಗಂ ಪಾಗುಡಕ್ಕಂ ಪಳಬದ್ದಕ್ಕಂ ವೈವಾಹಿಕ ಸಂಬಂಧಕ್ಕಂ ಮೈತ್ರಕ್ಕಂ ಮೇರೆಗಂ ಅಟ್ಟಟ್ಟಿಗಂ ಸ್ವಾಮಿ ನೃತ್ಯ ಸಂಬಂಧಕ್ಕಂ ದೋರ್ವಲಕ್ಕಂ ಮೈಮೆಗಂ ಮೋಕ್ಷಕ್ಕಂ ಮಹಾಸಮುದ್ರದೊಳ್ ಮಹಾನದಿಗಳ ಕೂಡುವಂತೇಬಿಕ್ಕೋಹಿಣೀ ಬಲಂ ಕೂಡಿ ನಡೆಯೆ ತನ್ನ ನಾಲ್ವರ್ ತಮ್ಮಂದಿರೊಡನೆ
ಎದ್ದುಬರುವಂತೆ ಬಂದನು. ಹಿಡಿಂಬೆಗೂ ಭೀಮನಿಗೂ ಹುಟ್ಟಿದ ಘಟೋತ್ಕಚನು ಅರವತ್ತೆಂಟು ಕೋಟಿ ರಾಕ್ಷಸಸೈನ್ಯದೊಡಗೂಡಿ ಬಂದನು. ಅರ್ಜುನನು ಮಾಡಿದ ಉಪಕಾರವನ್ನು ನೆನೆಸಿಕೊಂಡು ಅಂಗದಪರ್ಣನೆಂಬ ಗಂಧರ್ವನು ನಾಲ್ಕು ಕೋಟಿ : ಗಂಧರ್ವಸೈನ್ಯವೂ ಅರವತ್ತು ಸಾವಿರ ಗಿಳಿಯ ಬಣ್ಣದ ಕುದುರೆಗಳೂ ಕೂಡಿ ಗಂಧರ್ವಲೋಕವೇ ಕಿತ್ತು ಎದ್ದು ಬರುವ ಹಾಗೆ ಬಂದನು. ಮಹಾಪ್ರಚಂಡರೂ ಪ್ರತಾಪಿಗಳೂ ಆದ ಶ್ರುತಸೋಮಕರೇ ಮೊದಲಾದ ಪಂಚ ಉಪಪಾಂಡವರೂ ಶೂರನಾದ ಅಭಿಮನ್ಯುವೂ ಪಕ್ಕಪಕ್ಕದಲ್ಲಿ ಸೇವೆಮಾಡುತ್ತಿದ್ದರು.ಕುಂತಿಯ ಮಾವನಾದ ಕುಂತೀಭೋಜನು ಸೋಮಕನೊಡಗೂಡಿ ಒಂದಕ್ಟೋಹಿಣಿ ಸೈನ್ಯದ ಜೊತೆಯಲ್ಲಿ ಬಂದು ಸೇರಿದನು. ಮತ್ತು ಪ್ರಭದೈಕ ಬಲವೂ ಅಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟ ಕರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕ ಆಂಧ್ರ ದ್ರವಿಡ ಗಜಮುಖ ಅಶ್ವಮುಖ ಉಷ್ಟಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣ ಅಶ್ವಕರ್ಣ ತುರುಷ್ಕರೇ ಮುಖ್ಯರಾದ ನಾನಾದ್ವೀಪದ ಒಡೆಯರೂ ಧರ್ಮಕ್ಕೂ ಸೋಲಿಗೂ ಹಳೆಯ ಸಂಬಂಧಕ್ಕೂ ಕಪ್ಪಕಾಣಿಕೆಗೂ ಲಾಭ ಮತ್ತು ಪ್ರಯೋಜನಾದಿಗಳಿಗೂ ಮದುವೆಯ ನಂಟುತನಕ್ಕೂ ಸ್ನೇಹಕ್ಕೂ ಗಡಿಯಲ್ಲಿದ್ದು ದಕ್ಕೂ ದೌತ್ಯಕ್ಕೂ ಆಳರಸರ ಸಂಬಂಧಕ್ಕೂ ತೋಳಬಲಕ್ಕೂ ಮಹಿಮೆಗೂ ಮೋಕ್ಷಕ್ಕೂ ಹೀಗೆ ನಾನಾ ಕಾರಣಕ್ಕಾಗಿ ಮಹಾಸಮುದ್ರಕ್ಕೆ ಮಹಾನದಿಗಳು ಬಂದು ಕೂಡುವಂತೆ ಏಳು ಅಕ್ಟೋಹಿಣಿ ಸೈನ್ಯಸಮೇತರಾಗಿ ಬಂದು ಸೇರಿದರು. ತನ್ನ ನಾಲ್ಕು ಜನ ತಮ್ಮಂದಿರೊಡನೆ ಮಂಗಳಾಭರಣಗಳಿಂದಲಂಕೃತನಾಗಿ ಮಂಗಳಪ್ರಧಾನವಾದ