________________
೪೦ | ಪಂಪಭಾರತಂ ಪೊಡಮಟ್ಟು ಕುಂತಿಯಂ ವಿದುರನ ಮನೆಯಲಿರು ಸುಭದ್ರೆಯನಭಿಮನ್ಯುವೆರಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳುಪಿ ನಿಜಜನಂಬೆರಸು ಗಂಗೆಯಂ ಪಾಯ್ಡದು ಪಡುವಣದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳು ಪೋಗೆವೋಗೆ' ಇಲ್ಲಿ ಎಷ್ಟು ವಿಷಯಗಳು ಅಡಕವಾಗಿವೆ!
* ಪಂಪನ ಅನೇಕ ಪದ್ಯಗಳು ಛಂದೋಬದ್ಧವಾದ ಗದ್ಯದಂತೆ ಸರಳವಾಗಿ ಹರಿಯುತ್ತಿರುವುದು ಪಂಪನ ಶೈಲಿಯು ಶ್ಲಾಘನೀಯವಾಗುವುದಕ್ಕೆ ಮತ್ತೊಂದು ಕಾರಣ. ಅವನ ಪದ್ಯಗಳು ಒಂದರ ಮುಂದೊಂದು ಬರುವ ವಾಕ್ಯಮಾಲೆಗಳಾಗಿರುವವಲ್ಲದೆ ಅನೇಕ ಕಡೆಗಳಲ್ಲಿ ಪದ್ಯದಲ್ಲಿಯ ವಾಕ್ಯವು ಆ ಪದ್ಯದಲ್ಲಿಯೇ ಮುಗಿಯದೆ ಮುಂದೆ ಬರುವ ಗದ್ಯಪ್ರಾಂತದಲ್ಲವತರಿಸಿ ಪರಿಸಮಾಪ್ತವಾಗುವುದು : ಮುಂದಿನ ಎರಡು ಪದ್ಯಗಳು ಇವಕ್ಕೆ ಉತ್ತಮ ಉದಾಹರಣೆಗಳು. ,
ಬಲಿಯಂ ಕಟ್ಟಿದನಾವನ್, ಈ ಧರಣಿಯಂ ವಿಕ್ರಾಂತದಿಂದಂ ರಸಾ ತಲದಿಂಧದನಾವನ್, ಅಂದು ನರಸಿಂಹಾಕಾರದಿಂ ದೈತ್ಯನಂ ಚಲದಿಂ ಸೀಳವನಾವನ್, ಅಬಿಮಥನಪ್ರಾರಂಭದೊಳ್ ಮಂದರಾ ಚಲಮಂ ತಂದವನಾವನ್, ಆತನೆ ವಲಂ ತಕ್ಕಂ ಪೇಜರ್ ತಕ್ಕರೇ || ದಿವಿಜೇಂದ್ರ ಸುಖಮಿರ್ದನೆ, ದಿತಿಸುತವಾಬಾಧೆಗಳ ದೇವರ್ಗಿ ಇವಲಾ, ಷೋಡಶರಾಜರಿರ್ಷ ತಾನೇನ್, ಎಮನ್ವಯಕ್ಷಾ ಪರಾ ವವಿಳಾಸಂಗಳೊಳಿರ್ಪರ್, ಏ ದೊರತು ತಾನೆಮ್ಮಯ್ಯನಶ್ವರಮಂ ತಿವೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಜಗರ್ಭಾತ್ಮಜಾ || ಈ ಪದ್ಯಗಳು ಎಷ್ಟು ಸುಲಭವಾಗಿವೆ ! ಸರಳವಾಗಿವೆ!
ಪಂಪನು ಕಥಾಶರೀರದಲ್ಲಿ ಬಹು ಭಾಗವನ್ನು ಸಂವಾದರೂಪದಲ್ಲಿ ಬರೆದಿರುವುದು ಅವನ ಕಾವ್ಯಕ್ಕೆ ಒಂದು ಪ್ರತ್ಯೇಕವಾದ ಚೈತನ್ಯವನ್ನುಂಟುಮಾಡಿದೆ. ಪಾತ್ರಗಳಾಡುವ ಭಾಷೆ ಬಹುಸರಳವಾಗಿದೆ. ಆದರೂ ಪೂರ್ಣವಾದ ತೂಕದಿಂದ ಕೂಡಿದೆ. ಅವು ಶಲ್ಯದ ಮೊನೆಯಂತೆ ನೇರವಾಗಿ ಹೃದಯವನ್ನು ಭೇದಿಸಿ ಪ್ರವೇಶಮಾಡುವುವು. ಅಗ್ರಪೂಜಾಸಂದರ್ಭದಲ್ಲಿ ಶಿಶುಪಾಲನು ಧರ್ಮರಾಜನಿಗೆ ಆಡಿದ ಮಾತುಗಳಿವು.
ಮನದೊಲವರಮುಳ್ಳೂಡ ಕುಡು ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ ಮನುಜಾಧೀಶ್ವರ ಸಭೆಯೊಳ್ ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ತಾ | - ಅಳವಡೆಯದೆದ್ದು ಬಳಬಳ ಬಳೆವಿನೆಗಂ ಪಚ್ಚಪಸಿಯ ತುಳುಕಾಳಿಂಗೆ ಗಳಿಕೆಯನೆ ಮಾಡಿ ನೀನುಂ ಪಟಿಯಂ ಕಟ್ಟದೆಯೊ ಭೂಪಂ ರಿನಿಬರ ಕೊರಳೊಳ್ ದೇವರನಡಿಗೆಗಿಸಿ ಸಕ ಲಾವನಿತಳದಧಟರ ಪಡಲ್ವಡಿಸಿದ ಶಾ