________________
೪೩೪] ಪಂಪಭಾರತಂ ಈ ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್ | ಸೋದರರೆಯ್ದ ಮಯ್ತುನನೆನಾಂ ಪೆಜತೇಂ ಪಡೆಮಾತೂ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಬೆಜರ್ ನರೇಂದ್ರರೇ || ೬೪ ಕಂ|| ಗಂಗೆಗೆ ಕೆಯ್ಯಡೆಯೆಂದು
ತುಂಗಸ್ತನಿ ಕೊಟ್ಟು ಪೋಗ ಸೂತಂ ಕಂಡಾ | ತ್ಯಾಂಗನೆಗ ರಾಧಗಿತ್ತು ಮ ? ನಂಗೊಳೆ ರಾಧೇಯನೆನಿಸಿ ಸೂತಜನಾದ್ಯ ಗೆ ನಿನ್ನುತ್ಪತ್ತಿಯನಿಂತಂ ದನ್ನರುಮಣಮಣಿಯರಳವೆನಾಂ ಸಹದೇವಂ | ಪನ್ನಗಕೇತು ದಿನೇಶಂ ನಿನ್ನಂಬಿಕೆ ಕುಂತಿಯಿಂತಿವರ್ ನ ಬಲ್ಲರ್ ||
ರೀತಿ ನೋಡುವವರಿಗೆ ವೀರರಸಕ್ಕೆ ಆಗರವಾಗಿತ್ತು. ವ|| ಹಾಗೆ ಅವನಿಗೆ ಸಹಜವಾಗಿ ಹುಟ್ಟಿದ ಕವಚ ಮತ್ತು ರತ್ನಕುಂಡಲಗಳನ್ನು ರಕ್ತವು ಪನಪನ ಎಂದು ತೊಟ್ಟುತ್ತಿರಲು ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ ದೇವೇಂದ್ರನಾತನಿಗೆ ಬೆಲೆಯಿಲ್ಲದ ಶಕ್ಕಾಯುಧವನ್ನು ವರವಾಗಿ ಕೊಟ್ಟಿದ್ದಾನೆ. ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಛಿದ್ರಿಸುತ್ತೇನೆ. ನೀವೂ ನಿಮ್ಮ ಚೊಚ್ಚಲಮಗನಾದ ಸೂರ್ಯಪುತ್ರನಾದ ಕರ್ಣನನ್ನು ಭಾನುವಾರದ ದಿನ ನೋಡಿ ಕಾರ್ಯಸಿದ್ದಿಯನ್ನು ಮಾಡಿಕೊಂಡು ಬನ್ನಿ ಎಂದು ಕುಂತಿಯನ್ನು ಕಳುಹಿಸಿಕೊಟ್ಟನು. ಅವಳ ಆಶೀರ್ವಾದವನ್ನು ಪಡೆದು ಕೃಷ್ಣನು ತೇರನ್ನು ಹತ್ತಿ ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು “ಕರ್ಣ ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ' ಎಂದು ತನ್ನೊಡನೆ ರಥದಲ್ಲಿ ಹತ್ತಿಸಿಕೊಂಡು ಹೋಗಿ ಮುಂದೆ ಬಂದು ಒಂದು ಕಡೆಯಲ್ಲಿ ನಿಂತು ಹೇಳಿದನು. ೬೪. ಕರ್ಣ ಕೇಳು, ನಿನ್ನನ್ನು ಭೇದಿಸಲು ಹೀಗೆ ಹೇಳಿದೆನೆಂದು ನುಡಿಯದಿರು. ಆದಿಯಲ್ಲಿ ಕುಂತಿಯು ನಿನ್ನ ತಾಯಿ, ಸೂರ್ಯನು ನಿನ್ನ ತಂದೆ, ಪಾಂಡವರು ನಿನ್ನ ಸಹೋದರರು, ನಾನು ನಿನಗೆ ಮೈದುನ, ಹೆಚ್ಚು ಹೇಳುವುದೇನು ? ಈ ಭೂಮಿಯೆಲ್ಲವೂ ನಿನ್ನದೇ. ಪಟ್ಟವೂ ನಿನ್ನದೇ, ನೀನಿರುವಲ್ಲಿ ಇತರರು ರಾಜರಾಗಬಲ್ಲರೇ ? ೬೫. ನಿನ್ನನ್ನು ಯುವತಿಯಾದ ನಿನ್ನ ತಾಯಿಯಾದ ಕುಂತಿಯು ಗಂಗೆಗೆ ನ್ಯಾಸವೆಂದು (ರಕ್ಷಿಸುವ ಪದಾರ್ಥ) ಕೊಟ್ಟು ಹೋಗಲು ಅದನ್ನು ನೋಡಿದ ಸೂತನು ತನ್ನ ಹೆಂಡತಿಯಾದ ರಾಧೆಗೆ ಕೊಟ್ಟುದರಿಂದ ನೀನು ರಾಧೇಯನೆನಿಸಿಕೊಂಡು ಸೂತಪುತ್ರನಾಗಿದ್ದೀಯ. ೬೬. ನೀನು ಹುಟ್ಟಿದ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು. ನಾನು, ಸಹದೇವ, ದುರ್ಯೊಧನ, ಸೂರ್ಯ, ನಿನ್ನ ತಾಯಿಯಾದ ಕುಂತಿ ಇವರು