________________
ಚಂ।।
ನವಮಾಶ್ವಾಸಂ | ೪೩೩ ಗುರು ಕೃಪ ಶಲ್ಯ ಸಿಂಧುಸುತರಪೊಡೆ ನಮ್ಮಯ ಪಕ್ಷವೊಂದಿದಂ ಗುರುಸುತನೀಗಳೆದೊಳಖಿಳಾಸ್ತ್ರ ವಿಶಾರದನಪ್ಪನುಂ ಗೆಲ | ರಿಯನುಮೊಂದಿ ಬಾರದನುಮಂಕದ ಕರ್ಣನೆ ಬೀರಮಾತನಿಂ ದುರಿವರಿದತ್ತು ಚಾಗಮವನಿಂದೆಸೆದತ್ತು ಸಮಸ್ತ ಧಾತ್ರಿಯೊಳ್ ||
೬೧
ಈ ಎಂತನೆ ವಜ್ರ ವಜ್ರಕವಚಕ್ಕೆ ನಿಜೋಳಕುಂಡಳಕ್ಕೆ ಕೆ
ಯಾಂತೊಡ ಪಾಂಡುಪುತ್ರರನೆ ಕಾದರೆವಂದುಗಿಂ ದಲೆಂದಿನಂ || ಮಂತಣದಿಂದ ಬಾರಿಸೆಯುಮಂದುದನೆನ್ನದೆ ಮೀಲೆ ಕೊಟ್ಟನೋ ರಂತು ಜಸಕ್ಕೆ ನೋಂತು ಬಿಡ ನೇರ್ದೊಡಲೊಳ್ ತೊಡರ್ದಾ ತನುತಮಂ ||೬೨
ಮ|| ಬರವಂ ಬೇಡಿದರ್ಗಿವ ದೇವನೆ ವಲಂ ನಾಣೆಟ್ಟು ಬಂದೆನ್ನನಿಂ ತರೆದಂ ಬರ್ದರೊಳಾನೆ ಬರ್ದನೆನುತುಂ ನೇರ್ವಲ್ಲಿ ಕೆನ್ನೆತ್ತರುಂ | ಬಿರಿ ಕಂಡಂಗಳ ಬೀದಿಲು ಮನದೊಂದಣಿಟ್ಟಳಂ ಪೊಕ್ಷ್ಮ ವೀ ರರಸಕ್ಕಾಗರಮಾಯ್ತು ನೋಡ ಕವಚಂಗೊಂಡಂದಮಾ ಕರ್ಣನಾ || ೬೩
ವ| ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ವನಪನ ಪನಿಯ ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ ದೇವೇಂದ್ರನಾತಂಗಮೋಘಶಕ್ತಿಯನಿತ್ತನಾತನಂ ನಾನುಮೆನ್ನ ಬಲ್ಲ ಮಾಯಂ ಭೇದಿಸಿದಲ್ಲಿಂ ನೀಮುಂ ನಿಮ್ಮ ಚೊಚ್ಚಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀಳ್ಕೊಂಡು ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇಹಿ ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿಮ್ಮಂ ಕಿಟದಂತರಂ ಕಳಿಸಿ ಮಗು ಬಾ ಪೋಪಮೆಂದು ತನ್ನೊಡನೆ ರಥಮನೇಟಿಸಿಕೊಂಡುಪೋಗಿ ಮುಂದೊಂದೆಡೆಯೊಳ್ ನಿಂದು
ಹೇಳಿದನು-೬೧. ಗುರು, ಕೃಪ, ಶಲ್ಯ, ಭೀಷ್ಮರಾದರೆ ನಮ್ಮ ಪಕ್ಷದವರೇ. ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು. ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ. ಸಮಸ್ತ ಪ್ರಪಂಚದಲ್ಲಿ ಅವನ ಶೌರ್ಯ ಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ. ತ್ಯಾಗವೂ ಅವನಿಂದಲೇ ಪ್ರಕಾಶಮಾನವಾಗಿದೆ. ೬೨. ಹೇಗೆಂದರೆ ಇಂದ್ರನು ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ “ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಛಿದ್ರಿಸುತ್ತಿದ್ದಾನೆ, ಕೊಡಬೇಡ ಎಂದು ಸೂರ್ಯನು ಬಂದು ಉಪದೇಶಮಾಡಿ ತಡೆದರೂ ಅವನು ಹೇಳಿದುದನ್ನು ಕೇಳದೆ ಯಶಸ್ಸಿಗಾಗಿ ಆಶೆಪಟ್ಟು ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಕೊಟ್ಟನು. ೬೩. ಬೇಡಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈರೀತಿ ಬೇಡಿದನು. ಬಾಳಿದವರಲೆಲ್ಲ ನಾನೆ ಬಾಳಿದವನು ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಒಂದೇ ಸಮನಾಗಿ ಸುರಿಯುತ್ತಿರಲು ಮನೋದಾರ್ಡ್ಯವೂ ಅತಿಶಯವಾಗಿ ಅಭಿವೃದ್ಧಿಯಾಗುತ್ತಿರಲು ಕರ್ಣನು ಕವಚವನ್ನು ಶರೀರದಿಂದ ಕಿತ್ತ