________________
೪೧೬ | ಪಂಪಭಾರತಂ
ವll ಕಂಡು ತನಗೆ ಪೊಡವಟ್ಟರ್ವರುಮಂ ಪರಸಿ ನೀನಿರ್ವರುಂ ಬಂದಂದಮುಮಂ ಮನೆವಾಚಿಯಂ ಪೇಟೆಮಂದೂಡಮ್ಮಮ್ಮಂ ಕೆಯ್ಯೋಂಡು ಗೆಲಿಸಯ್ಯುಮೆಂದು ಬಂದವನೆಕಂll ಮನ್ನಣೆಗೆನಗಿರ್ವರು
ರನ್ನರೆ ವಿಜಯನನೆ ಮುನ್ನ ಕಂಡುದಂರಾ | ನೆನ್ನಂ ಕೊಟ್ಟಿಂ ನಿನಗಂ
ಪನ್ನಗಕೇತನ ಚತುರ್ವಲಂಗಳನಿತ್ತಂ || - ವ|| ಎಂದು ತನ್ನೊಳ್ ಸಮಾನಬಲನಪ್ಪ ತನ್ನ ತಮ್ಮ ಕೃತವರ್ಮನುಮಂ ತನ್ನೊಡನಾಡಿಗಳಪ್ಪ ತೊಂಬತ್ತಾಜು ಸಾಸಿರ ಗೋಪಕುಮಾರರೊಡನೆ ಕೂಡಿ ಕಳಿಪಿ ವಿಕ್ರಮಾರ್ಜುನನುಂ ತಾನುಂ ವಿರಾಟಪುರಕ್ಕೆ ವಂದು ಮಜ್ಜನ ಭೋಜನಾದಿಗಳೊಳ್ ವಿಗತ ಪರಿಶ್ರಮರಾಗಿ ಮುದವಸಮಯವರುಮಾಲುಂಗುಣಂಗಳ ಮೂರ್ತಿಮಂತಂಗಳಾದಂತ ಮಂತ್ರಶಾಲೆಯಂ ಪೊಕ್ಕಿರ್ದಾಗಳಕ೦ll ಪ್ರಿಯ ವಿಷಯಕಾಂಕ್ಷೆಯಿಂದಿಂ
ದ್ರಿಯಂಗಳೆಂತಯ್ಕೆ ಮನಮನಾಶ್ರಯಿಸುಗುಮಂ || ತಯ ನಯ ಪರರಯ್ಯರುಮಾ ಶ್ರಯಿಸಿರ್ದರ್ ವಿಷಯಕಾಂಕ್ಷೆಯಿಂ ಮುರರಿಪುವಂ || ಲೋಕಕ್ಕಿದರ್ಥಶಾಸ್ತ್ರದ ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ ದಳ 1 ತೋಕನದ ಜಠರನಂ ನಿ ರ್ವ್ಯಾಕುಳಮಿಂತಂದು ಧರ್ಮತನಯಂ ನುಡಿದಂ 1, ೧೪
ಜಯಶಾಲಿಯಾದ ಅರ್ಜುನನನ್ನೇ ಮೊದಲು ನೋಡಿ ಬಳಿಕ ದುರ್ಯೋಧನನನ್ನು ನೋಡಿದನು. ವll ನೋಡಿ ತನಗೆ ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿ ನೀವಿಬ್ಬರೂ ಬಂದ ಕಾರಣವನ್ನೂ ಗೃಹಕೃತ್ಯವನ್ನೂ ಹೇಳಿ ಎಂದನು. 'ನಮ್ಮ ನಮ್ಮನ್ನು ಅಂಗೀಕಾರ ಮಾಡಿ ಗೆಲ್ಲಿಸಬೇಕೆಂದು ಕೇಳಿಕೊಳ್ಳಲು ಬಂದೆವು ಎಂದರು. ೧೨. ನನ್ನ ಮನ್ನಣೆಗೆ ನೀವಿಬ್ಬರೂ ಸಮಾನರಾದರೂ ಅರ್ಜುನನನ್ನು ಮೊದಲು ಕಂಡದ್ದರಿಂದ ನಾನು ನನ್ನನ್ನು ಅವನಿಗೆ ಕೊಟ್ಟಿದ್ದೇನೆ. ದುರ್ಯೊಧನ ! ನಿನಗೆ ನನ್ನ ಚತುರ್ಬಲಗಳನ್ನೂ ಕೊಟ್ಟಿದ್ದೇನೆ. ವll ಎಂದು ಹೇಳಿ ತನಗೆ ಸಮಾನವಾದ ಶಕ್ತಿಯುಳ್ಳ ತನ್ನ ತಮ್ಮನಾದ ಕೃತವರ್ಮನನ್ನು ತನ್ನ ಜೊತೆಗಾರರಾದ ತೊಂಬತ್ತಾರುಸಾವಿರ ಗೋಪಕುಮಾರರೊಡನೆ ಸೇರಿಸಿ ಕಳುಹಿಸಿದನು. ವಿಕ್ರಮಾರ್ಜುನನೂ ತಾನೂ ವಿರಾಟನಗರಕ್ಕೆ ಬಂದು ಸ್ನಾನಭೋಜನಾದಿಗಳಿಂದ ಶ್ರಮ ಪರಿಹಾರ ಮಾಡಿಕೊಂಡರು. ಮಾರನೆಯ ದಿನ ಆರುಮಂದಿಯೂ ರಾಜ್ಯಶಾಸ್ತ್ರದ ಆರುಗುಣಗಳೇ ಪ್ರತ್ಯಕ್ಷವಾಗಿ ಮೂರ್ತಿತಾಳಿದ ಹಾಗೆ ಆಲೋಚನಾಮಂದಿರವನ್ನು ಪ್ರವೇಶಮಾಡಿದರು. ೧೩. ಕಿವಿ, ಕಣ್ಣು ಮೊದಲಾದ ಪಂಚೇಂದ್ರಿಯಗಳು ತಮ್ಮ ಪ್ರಿಯಳಾದ ವಸ್ತುಗಳ ಅಪೇಕ್ಷೆಯಿಂದ ಮನಸ್ಸನ್ನು ಹೇಗೆ ಆಶ್ರಯಿಸುತ್ತವೆಯೋ ಹಾಗೆ ವಿಧಿನಿಯಮಗಳಲ್ಲಿ ಆಸಕ್ತರಾದ ಅಯ್ದುಜನ ಪಾಂಡವರೂ ತಮ್ಮ ಇಷ್ಟಾರ್ಥಸಿದ್ದಿಗಾಗಿ ಶ್ರೀಕೃಷ್ಣನನ್ನು ಆಶ್ರಯಿಸಿದ್ದರು. ೧೪. ಧರ್ಮರಾಜನು ರಾಜನೀತಿಶಾಸ್ತ್ರದ ವ್ಯಾಖ್ಯಾನದಂತಿದ್ದ ತನ್ನ ಮಾತು