________________
ನವಮಾಶ್ವಾಸಂ / ೪೧೫ ಮll, ಮಲೆಪರ್ ಮಂಡಳಿಕರ್ ಕರುಂಬರದಟರ್ ವೀರರ್ಕಳುಂ ತಮ್ಮ ಬಾ
ಆಲಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು ಮೂವಿಟ್ಟಿಯೊ | ಕಲವೋಲಿಂ ಬೆಸಕೆಯ್ಯ ಸಂತವಿರುತುಂ ಕುಂತೀಸುತರ್ ತಮ್ಮ ತೋ ಧ್ವಲಮಂ ನಚ್ಚರೆ ದಾಯಿಗ ಧರೆಯನಾಳಂದದ್ದರೆಂಬೇವದಿಂ || ೧೦
ವ|| ಅಂತು ತಮ್ಮ ಪೂಣ್ಣ ವರ್ಷಾವಧಿ ನೆದೊಡಮರಾತಿಗಳಂತ್ಯಕಾಲಂ ನೆಯದುದರ್ಕುಮ್ಮಳಿಸಿ ನಮಗೆ ಕಮ್ಮಗಿರಲಾಗದು ದುರ್ಯೊಧನನಪೊಡೆ ಶ್ವೇತ ಕೃಷ್ಣಕಾರಕಂ ಕೃಷ್ಣನಂ ತನಗೆ ಮಾಡದನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದುತ್ತಮಪಕ್ಷವೆಂಬೀ ಪ್ರಧಾನ ಕಾರ್ಯಮಂ ತಮ್ಮೊಳಾಳೋಚಿಸಿ ವಿಕ್ರಮಾರ್ಜುನನಂ ನೀನೆ ಪೋಗಲ್ವೇಚ್ಚುಮಂಬುದು ಮಪ್ರತಿರಥಂ ರಥಮನೇ ಮನಃಪವನವೇಗದಿಂ ದ್ವಾರಾವತಿಯನೆ ರಾಜಮಂದಿರಮಂ ಪೊಕ್ಕು ದುಗ್ದಾಬಿಧವಳ ಶಯ್ಯಾತಳದೊಳ್ ಮಜದೂಅಗಿದ ಮಧುಮಥನನನೆತ್ತಲಣದೆ ಕಾಲ ದೆಸೆಯೊಳುಸಿರದೆ ಕುಳ್ಳಿರೆ ದುರ್ಯೋಧನನುಮಾಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ ಕಿಂದಾನುಂ ಬೇಗದಿಂಕಂil ಪವಡಿಸಿದನಂತನೊಸೆದು
ಪವಡಿಸಿ ತನ್ನೆರಡುಮಡಿಯನೊತ್ತುತಿರ್ದಾ | ಹವ ವಿಜಯಿಯಪ್ಪ ವಿಜಯನ |
ನೆ ವಲಂ ಮುಂ ಕಂಡು ಬಟಿಕೆ ನೃಪನಂ ಕಂಡಂ | ೧೧ ಕೂಡಿಸಿ ಶ್ರೀಕೃಷ್ಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿದನು. ೧೦. ಉದ್ಧತರಾದ ಸಾಮಂತರೂ ಸಣ್ಣಪುಟ್ಟ ರಾಜರೂ ಪರಾಕ್ರಮಶಾಲಿಗಳೂ ವೀರರೂ ತಮ್ಮ ಪ್ರಾಣವನ್ನೂ ಕೇಳಿದ ಎಲ್ಲ ವಸ್ತು ಸಮೂಹಗಳನ್ನೂ ಪಾಂಡವರ ಮುಂದಿಟ್ಟು ಮೂರು ಬಗೆಯಾದ ಬಿಟ್ಟಿಸೇವೆಯನ್ನು ಮಾಡುವ ಜನರಂತೆ ಆಜ್ಞಾಧಾರಿಗಳಾಗಿರಲು ಪಾಂಡವರು ದಾಯಿಗರಾದ ಕೌರವರು ತಮ್ಮ ರಾಜ್ಯವನ್ನು ಅಪಹರಿಸಿ ಆಳುತ್ತಿರುವ ಕೇಶವು ತಮ್ಮನ್ನು ಬಾಧಿಸುತ್ತಿದ್ದರೂ ತಮ್ಮ ಬಾಹುಬಲವನ್ನೇ ನೆಚ್ಚಿರುತ್ತಿದ್ದರು. ವ|| ಹಾಗೆ ತಾವು ಪ್ರತಿಜ್ಞೆ ಮಾಡಿದ್ದ ಗಡುವು ತೀರಿದರೂ ಶತ್ರುಗಳಿಗೆ ಅಂತ್ಯಕಾಲವು ತುಂಬದೇ ಇದ್ದುದಕ್ಕಾಗಿ ದುಃಖಪಟ್ಟು 'ನಾವು ಸುಮ್ಮನಿರಲಾಗದು, ದುರ್ಯೋಧನ ನಾದರೆ ಬಿಳಿಯದನ್ನು ಕಪ್ಪನ್ನಾಗಿ ಮಾಡುವ ಮೋಸಗಾರ. (ಶ್ವೇತಕೃಷ್ಣಕಾರಕ) ಅವನು ಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದಕ್ಕೆ ಮೊದಲೇ ಶ್ರೀಕೃಷ್ಣನನ್ನು ನಮಗೆ ಸಹಾಯಕನನ್ನಾಗಿ ಮಾಡಿಕೊಳ್ಳುವುದು ಉತ್ತಮಪಕ್ಷ ಎಂಬ ಈ ಪ್ರಧಾನ ಕಾರ್ಯವನ್ನು ತಮ್ಮಲ್ಲಿ ಆಲೋಚಿಸಿದರು. ಆ ಕಾರ್ಯಕ್ಕೆ ವಿಕ್ರಮಾರ್ಜುನನನ್ನು 'ನೀನೇ ಹೋಗಬೇಕು' ಎಂದರು. ಅಪ್ರತಿರಥನಾದ ಅವನು ರಥವನ್ನು ಹತ್ತಿ ಮನಃಪವನವೇಗ (ಮನಸ್ಸಷ್ಟೂ ಗಾಳಿಯಷ್ಟೂ ವೇಗ)ದಿಂದ ದ್ವಾರಾ ವತೀಪಟ್ಟಣವನ್ನು ಸೇರಿ ಅರಮನೆಯನ್ನು ಪ್ರವೇಶಿಸಿದನು. ಕ್ಷೀರಸಮುದ್ರದಷ್ಟು ಬೆಳ್ಳಗಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ಕೃಷ್ಣನನ್ನು ನೋಡಿದನು. ಅವನನ್ನು ಎಬ್ಬಿಸಲು ಇಷ್ಟಪಡದೆ ಕಾಲ ದೆಸೆಯಲ್ಲಿ ಮಾತನಾಡದೆ ಕುಳಿತನು. ದುರ್ಯೋಧನನೂ ಆಗಲೇ ಬಂದು ಶ್ರೀಕೃಷ್ಣನ ತಲೆದೆಸೆಯಲ್ಲಿ ಕುಳಿತನು. ಸ್ವಲ್ಪಕಾಲದ ಮೇಲೆ ೧೧. ಮಲಗಿದ್ದ ಶ್ರೀಕೃಷ್ಣನು ಸಂತೋಷದಿಂದ ಎದ್ದು ತನ್ನ ಎರಡು ಪಾದಗಳನ್ನು ಒತ್ತುತ್ತಿದ್ದ ಯುದ್ಧದಲ್ಲಿ