________________
೪೦೪ | ಪಂಪಭಾರತಂ
ವ|| ಎಂದು ತಮ್ಮಯ್ಯರುಮಾಲೋಚಿಸಿ ವಿಕ್ರಮಾರ್ಜುನನಂ ಪಳಗಣ ಕಾಪಿಂಗಿರತ್ತು ನಾಲ್ವರು ನಾಲ್ಕು ಸಮುದ್ರಗಳೆ ಮೇರೆದಪ್ಪಿದಂತೆ ವಿರಾಟನೊಳ್ ಕೂಡಿ ಪೋಗಿ ತಾಗಿದಾಗಚಂll ಕಡಲ ಪೊದಳ ಪರ್ದೆರಗಳೆಯ ಕುಲಾದ್ರಿಗಳೊಳ್ ಪಳಂಚಿ ತೂ
ಳೊಡನೆ ಮರಲ್ಲವೂಲ್ ಕಡೆಯೆ ಪಾಯಿಸಿದುಗ್ರರಥಂಗಳಚಿತ || ಇಡಿಗಿಡೆ ಪಾಯರಾತಿನೃಪರಂ ತದಾಂತಿರದಾ ಸುಶರ್ಮನಂ
ಪಿಡಿದು ನೆಗಲ್ಯಂ ಪಡೆದು ಸಾಹಸದಿಂ ತುಲುವಂ ಮಗುಟ್ಟಿದರ್ ೧೯೧ ವ| ಅನ್ನೆಗಮತ್ತ ಸುಯೋಧನಂ ಸಮಸ್ತ ಸಾಧನಂಬೆರಸುಉ) ಉತ್ತರಂ ಗೋಗ್ರಹಂ ಪಿರಿದುಮಾಗ್ರಹಮಂ ಮನದೊಳ್ ತಗುಳ್ಳೆ ದಿ
ಗಿ ವಿಭೇದಿ ಪೆರ್ಚ ಕದನಾನಕರಾವಮಗುರ್ವಿನುರ್ವು ಪ || ರ್ವುರೆ ಚಾರು ವೀರ ಭಟ ಕೋಟಿಗೆ ರಾಗರಸಂ ಪೊದಳು ತು
ಳ್ಳುತ್ತಿರ ಬಂದು ಮುತ್ತಿ ಮೊಗೆದಂ ವಿಭು ಗೋಕುಲಮಂ ವಿರಾಟನಾ || ೯೨ ಚಂ ಪಸರಿಸಿ ಪೊಕ್ಕು ಕೂಕಿಲೆದು ಕಾದುವ ಬಲ್ಲಣಿಗಳ ಪಳಂಚೆ ಪಾ
ಯಿಸುವ ದಲಕ್ಕಗುರ್ವಸೆಯ ನೂಂಕಿದ ಬಲ್ಬಣಿಗೆತ್ತಮೆಯ ಚೋ | ದಿಸುವ ರಥಕ್ಕೆ ಪೆಟ್ಟಳಿಸದೊರ್ವರಿನೊರ್ವರೆ ಮಿಕ್ಕು ಪಾರ್ದು ಸಾ ರ್ದಿಸ ತುಲುಗಾಜರಂದಿನಿಸು ಬಲ್ವಲನಾದುದದೊಂದು ಕಾಳಗಂ || ೯೩
ಭೂಮಂಡಲವೇ ಚಲಿಸುವ ಹಾಗೆ ಯುದ್ಧಕ್ಕೆ ನಡೆದನು. ಪಾಂಡವರೈವರೂ ನಮ್ಮನ್ನು ಕಂಡು ಹಿಡಿಯಲು ಶತ್ರುವಾದ ದುರ್ಯೋಧನನು ಹೂಡಿದ ಚೇಷ್ಟೆಯಿದು. ಇಲ್ಲಿ ತಡೆದಿರಲಾಗದು. ಪ್ರತಿಜ್ಞೆಮಾಡಿದ ಗಡುವೂ ಪೂರ್ಣವಾಗಿದೆ. ಉತ್ಸಾಹದಿಂದ ಯುದ್ದಮಾಡೋಣ' ವll ಎಂದು ತಾವಯುಜನವೂ ತಮ್ಮಲ್ಲಿ ಆಲೋಚಿಸಿ ವಿಕ್ರಮಾರ್ಜುನನನ್ನು ನಗರದ ಹಿಂಗಾವಲಿಗೆ ಇರಹೇಳಿ ನಾಲ್ಕು ಜನರೂ ನಾಲ್ಕು ಸಮುದ್ರಗಳೇ ಮೇರೆದಪ್ಪಿದಂತೆ ವಿರಾಟನೊಡನೆ ಕೂಡಿ ಹೋಗಿ ಪ್ರತಿಭಟಿಸಿದರು. ೯೧. ಸಮುದ್ರದಲ್ಲಿ ವ್ಯಾಪ್ತವಾದ ದೊಡ್ಡ ಅಲೆಗಳು ಕುಲಪರ್ವತಗಳನ್ನು ತಗುಲಿ ಹಿಂದಕ್ಕೆ ಮರಳಿದಂತೆ ಮುಂದಕ್ಕೆ ನುಗ್ಗಿಸಿದ ಭಯಂಕರವಾದ ರಥಗಳನ್ನು ಹಿಂದಕ್ಕೆ ತಳ್ಳಿ ಬೀಳಿಸಿ ತಳಭಾಗವು ನಾಶವಾಗಿ ಅಡಿಮೇಲಾಗಲು ನುಗ್ಗಿದ ಶತ್ರುರಾಜರನ್ನೂ ಸುಶರ್ಮನನ್ನೂ ಬಿಡದೆ ಎದುರಿಸಿ ಹಿಡಿದು ಪ್ರಸಿದ್ದಿಯನ್ನು ಪಡೆದು ಸಾಹಸದಿಂದ ಪಾಂಡವರು ವಿರಾಟನ ಗೋವುಗಳನ್ನು ಹಿಂದಕ್ಕೆ ತಿರುಗಿಸಿದರು. ವ|| ಅಷ್ಟರಲ್ಲಿ ಆ ಕಡೆ ದುರ್ಯೋಧನನು ಸಮಸ್ತ ಸೈನ್ಯದೊಡಗೂಡಿ - ೯೨. ಉತ್ತರದಿಕ್ಕಿನ ಗೋವು ಗಳನ್ನು ಹಿಡಿಯಲು ಯೋಚಿಸಿ ದಿಗಂತವನ್ನು ಒಡೆಯುತ್ತಿರುವ ಯುದ್ದಭೇರಿಯ ಭಯಂಕರವಾದ ಶಬ್ದವು ಹೆಚ್ಚುತ್ತಿರಲು ಪ್ರಸಿದ್ಧರಾದ ಶೂರರನೇಕರಿಗೆ ಸಂತೋಷರಸವು ಹೆಚ್ಚಿ ಹೊರ ಹೊಮ್ಮುತ್ತಿರಲು ಪ್ರಭುವಾದ ದುರ್ಯೋಧನನು ಬಂದು ವಿರಾಟನ ಗೋಸಮೂಹವನ್ನು ಆಕ್ರಮಿಸಿ ಸೆರೆಹಿಡಿದನು. ೯೩. ಪ್ರಸರಿಸಿ ಹೊಕ್ಕು ಮೇಲಕ್ಕೆ ನೆಗೆದು ಹೋರಾಡುವ ಬಲಿಷ್ಠರಾದ ಕಾಲಾಳುಗಳು ತಾಗಲು, ಮುನ್ನುಗ್ಗಿಸುವ ಸೈನ್ಯಕ್ಕೆ ಭಯವುಂಟಾಗುವಂತೆ ಮುಂದೆ ನುಗ್ಗಿದ ಬಲವಾದ ಕಾಲಾಳುಗಳಿಗೂ ವೇಗವಾಗಿ ನಡೆಸುತ್ತಿರುವ ತೇರುಗಳಿಗೂ ಹೆದರದೆ ಒಬ್ಬರನ್ನೊಬ್ಬರು ಮೀರಿ ಗುರಿಯಿಟ್ಟು ನೋಡಿ