________________
ಅಷ್ಟಮಾಶ್ವಾಸಂ | ೩೯೫ ಕಂti ಬಿಗಿದೂಗದ ನಿನ್ನ ಮೊಲೆಗಳ
ಮೃಗಮದದ ಪುಳಿಂಚುಗಳ್ ಪಗಿರಲೆಡೆಯಾ | ದಗಲುರಮನನಗೆ ಪಡೆದಜ
ನೊಗಸುಗಮಲ್ಲೆಲಗೆ ನಿನ್ನನೆನಗೆಯ ಪಡೆದಂ | ಕoll. ಎನಗರಸಿಯಾಣೆ ನಿನ್ನೊಡ
ನನಗೇಗಟ್ಟಪುದಿದೆಂದು ಅಡಾಡಲ್ ಕೆ ! ಮನೆ ನುಡಿದೂಡನ್ನ ಕಣ್ಣಂ ಮನಕ್ಕೆ ತಂದಿರ್ದ ನಿನ್ನೊಳೆನಗೆರಡುಂಟೇ || ಬಾಯಟಿದೆನಿತರೆದೊಡಮಾ ಹಾಯೆನ್ನಯ ಕರಮೆ ಮಲುಗಿ ಮಲ್ಕಡಿದುರಿವೆ || ನೀ ಯರ್ದಯನಾಳಸಲ್ ನೀಂ ಬಾಯೊಳಂಬುಲಮನನ್ನೊಡಂ ದಯೆಗೆಯ್ಯೋ ||
೬೯ ವt' ಎಂದು ಮತ್ತಮೆನಿತಾನುಂ ತೆಜದ ಲಲ್ಲೆಯಿನಳಿಪಂ ತೋಟ ಬಾಯಟಿದು ತನ್ನ ನುಡಿಗಳಳಿಪಿಳಿಪೋಗೆ ಸೈರಿಸಲಾಗಿದೆ ಪಿಡಿವುದುಂ ಪಾಂಚಾಲರಾಜತನೂಜೆಯಿಂತೆಂದಳಮ|| ಸ || ನುಡಿಯಲ್ಲೇಡನ್ನೊಳಿಂತಪ್ಪಳಿಪಿನ ನುಡಿಯಂ ನಿನ್ನ ಮಾತಿಂಗೆ ಚಿಃ ಮ
ಆಡುವಂತದ್ದಾಕೆಯಲ್ಲಿ ಬಿಡು ಗಡ ಬಿಡದಂದನ್ನ ಗಂಧರ್ವರಿಂದಂ | ಮಡಿವ ನೀನೆಂದೂಡಂತಪೊಡ ಬಿಡನೆನಗು ಮಗುವೇಷ್ಟೆಯಿಲ್ಲಾ ರ್ಪೊಡ ನಿನ್ನಂ ಕಾವ ಗಂಧರ್ವರ ಬಿಡಿಸುಗೆ ಪೋಗೆಂದು ಪೊಯ್ದಂ
ದುರಾತ್ಮಂ || ೭೦ ನಿನ್ನ ಈ ದುರವಸ್ಥೆಯಿದೇನು ? ೬೭. ಬಿಗಿದುಕೊಂಡು ಗಟ್ಟಿಯಾಗಿ ಹೊರ ಚಿಮ್ಮುತ್ತಿರುವ ನಿನ್ನ ಮೊಲೆಗಳ ಕಸ್ತೂರಿಯ ಗುಳ್ಳೆಗಳು ಅಂಟಿಕೊಳ್ಳಲು ಯೋಗ್ಯ ವಾಗಿರುವ ಹಾಗೆ ಬ್ರಹ್ಮನು ನನ್ನ ಎದೆಯನ್ನು ವಿಶಾಲವಾಗಿ ಸೃಷ್ಟಿಸಿದ್ದಾನೆ. ಇದು ಅತಿಶಯವಲ್ಲ ನಿನ್ನನ್ನು ಬ್ರಹ್ಮನು ನನಗಾಗಿಯೇ ನಿರ್ಮಿಸಿದ್ದಾನೆ - ೬೮. ರಾಣಿಯಾದ ಸುದೇಷ್ಣಯಾಣೆ. ಇಂದು ನಾನು ಪರಿಹಾಸ್ಯಕ್ಕಾಗಿ ನಿನ್ನೊಡನೆ ಮಾತನಾಡಿದರೆ ದೋಷವೇನು ? ನನ್ನ ದೃಷ್ಟಿಗೂ ಮನಸ್ಸಿಗೂ ಒಪ್ಪಿಗೆಯಾಗಿರುವ ನಿನ್ನಲ್ಲಿ ನನಗೆ ಮೋಸವುಂಟೇ ? ೬೯. ಬಾಯಿಸೋಲುವಷ್ಟು ಬೇಡಿದರೂ ಅಯ್ಯೋ ಎಂದು ಹೇಳಲಾರೆಯಲ್ಲ. ವಿಶೇಷವಾಗಿ ಸಶರೀರವಾಗಿ ಉರಿಯುತ್ತಿರುರ ನನ್ನ ಎದೆಯನ್ನು ಸಮಾಧಾನಮಾಡಲು ನೀನು ಬಾಯಲ್ಲಿ ತಂಬುಲವನ್ನಾದರೂ ಕೊಡಲೊಲ್ಲೆಯಾ? ವ|| ಎಂದು ಇನ್ನೂ ಎಷ್ಟೋ ರೀತಿಯ ಮುದ್ದುಮಾತುಗಳಿಂದ ಆಸೆಯನ್ನು ತೋರಿಸಿ ಗೋಗರೆದು ತನ್ನ ಮಾತುಗಳೂ ಆಸೆಯೂ ತಿರಸ್ಕೃತವಾಗಲು ಸಹಿಸಲಾರದೆ ಕೀಚಕನು ಅವಳನ್ನು ಹಿಡಿದುಕೊಳ್ಳಲು ಹೋದನು. ಬ್ರೌಪದಿಯು ಹೀಗೆಂದಳು- ೭೦. ನನ್ನಲ್ಲಿ ಇಂತಹ ದುರಾಸೆಯ ಮಾತುಗಳನ್ನಾಡಬೇಡ, ಚಿಃ ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ, ಬಿಟ್ಟುಬಿಡು, ಬಿಡದಿದ್ದರೆ ನೀನು ನನ್ನ ಗಂಧರ್ವರಿಂದ ಸಾಯುತ್ತೀಯ ಎಂದಳು. ಹಾಗಾದರೆ ಬಿಡುವುದಿಲ್ಲ. ನನಗೂ ವಂಚನೆಯ ಮಾತುಗಳನ್ನಾಡುತ್ತಿರವೆಯಲ್ಲ; ಸಮರ್ಥರಾಗಿದ್ದರೆ ನಿನ್ನನ್ನು ರಕ್ಷಿಸುವ