________________
೩೯೪ | ಪಂಪಭಾರತಂ ತನ್ನ ಘಟ್ಟಿವಳ್ಳಿಯ ಕೆಳಪೂರ್ವ ವಿಲೇಪನಂಗಳನಟ್ಟುವುದೆಂದಟ್ಟುವುದುಂ ತಮ್ಮನುಪರೋಧಕ್ಕಾದೆ ಸೈರಂದ್ರಿಯಂ ಪೋಗಲ್ವೇಲ್ವುದುಮಾಕೆಯವನ ಮನದ ಪಲುವಗೆಯನಳೆಯದಂತೆ - ಚಂl ಸ್ಮರನರಲಂಬು ಕೈಬರ್ದುಕಿ ಬರ್ಪವೊಲೊಯ್ಯನೆ ಬಂದು ನಿಂದ ಸುಂ
ದರಿಯನೊಲ್ಲು ಸಿಂಹಬಲನಂತಿರು ಮಾಸಿದೆಯಾದ ಮೇಣುಡಲ್ | ತರಿಪನೆ ತಂಬುಲಂಬಿಡಿ ಮನೋಜಶಿಖಾಳಿಗಳು ಮುನ್ನವೆ
ನುರಿವರ್ದೆ ಕಂಡು ನಿನ್ನನಿನಿಸಾದುದಂಬುಜಲೋಲಲೋಚನೇ || ೬೪ ಕಂ , ಪರದ ಕುರುಳಲುಗೆ ಘಟ್ಟಿಯ
ನರೆಯುತ್ತುಂ ನಾಣ್ಯ ತೆಗೆದು ನೋಟ್ಟುದುಮನ್ನಂ | ಸರ ಕುಳಿಕಾಗ್ನಿಯ ಕೊಂಡಂ
ತಿರೆ ಕೊಂಡುದು ನೋಡ ನಿನ್ನ ನೋಡಿದ ನೋಟಂ || ೬೫ ಮll ಮದನಾಸ್ತಂ ಕರ ಸಾಣೆಗಾಣಿಸಿದುದೆಂಬಂತಾಗ ನಿನ್ನೊಂದು ಕಂ
ದಿದ ಮೆಯ್ಕೆನ್ನಯ ತೋಳೊಳೊಂದ ಸಿರಿಯಂ ನೀನುಯ್ದು ತೊಟ್ಟಾಳು ರಾ | ಗದಿನೆನ್ನೊಳ್ ಸುಕಮಿರ್ಪುದೆನ್ನ ನುಡಿಯಂ ನೀಂ ಕೇಳುವೊಂದಂಚೆಯಂ ಪೊದೆಯೊಂದಂಚೆಯನುಟ್ಟ ನಿನ್ನಿರವಿದೇನಂಭೋಜಪತೇಕ್ಷಣೇ | ೬೬
ತನ್ನ ಗಂಧ ಅರೆಯುವವಳ ಕಯ್ಯಲ್ಲಿ ಅಪೂರ್ವವಾದ ಸುಗಂಧದ್ರವ್ಯವನ್ನು ಕಳುಹಿಸಿಕೊಡುವುದು ಎಂದು ಹೇಳಿ ಕಳುಹಿಸಿದನು. ತಮನ ಒತ್ತಾಯಕ್ಕೆ ತಡೆಯ ಲಾರದೆ ಸೈರಂದ್ರಿಯನ್ನು ಕಳುಹಿಸಲು ಅವಳು ಅವನ ಮನಸ್ಸಿನ ನೀಚಬುದ್ದಿಯನ್ನು ತಿಳಿಯದೆ ಹಾಗೆಯೇ ಆಗಲೆಂದು ಅವನ ಅರಮನೆಗೆ ಹೋದಳು. ೬೪. ಮನ್ಮಥನ ಪುಷ್ಪಬಾಣವು ಕೈಯಿಂದ ತಪ್ಪಿಸಿಕೊಂಡು ಬರುವ ಹಾಗೆ ನಿಧಾನವಾಗಿ ಬಂದು ನಿಂತ ಆ ಸುಂದರಿಯನ್ನು ಸಿಂಹಬಲನು ಪ್ರೀತಿಯಿಂದ ನೋಡಿ ಹೇ ಕಮಲಾಕ್ಷಿ ಹಾಗೆಯೇ ಇರು, ಮಲಿನವಾಗಿ ಬಿಟ್ಟಿದ್ದೀಯೆ, ಉಡುವುದಕ್ಕೆ ವಸ್ತ್ರವನ್ನು ತರಿಸಲೇ? ತಾಂಬೂಲವನ್ನು ಹಿಡಿ, ಮನ್ಮಥನ ಬಾಣಗಳ ಸಮೂಹವು ಈಗಾಗಲೇ ಸುಡುತ್ತಿರುವ ನನ್ನ ಎದೆಯು ನಿನ್ನನ್ನು ನೋಡಿ ಸ್ವಲ್ಪ ಉಪಶಮನವಾಯಿತು. ೬೪. ಚದುರಿದ ನಿನ್ನ ಮುಂಗುರುಳು ಚಲಿಸುತ್ತಿರುವ ಗಂಧವನ್ನು ಅರೆಯುತ್ತ ಲಜ್ಜೆಯಿಂದ ನನ್ನನ್ನು ಮೋಹಿಸಿ ನೋಡಲು ನಿನ್ನ ಆ ನೋಡಿದ ನೋಟ ನನ್ನನ್ನು ಮನ್ಮಥನೆಂಬ ಸರ್ಪದ ವಿಷಾಗಿಯೇ ಸುಟ್ಟ ಹಾಗೆ ಸುಟ್ಟಿತು ನೋಡು. ೬೬. ನಿನ್ನ ಕಂದಿಹೋಗಿರುವ ಶರೀರವನ್ನು ನನ್ನ ತೋಳಿನಲ್ಲಿ ಕೂಡಿಸಿ ಕಾಮಬಾಣವೇ ವಿಶೇಷವಾಗಿ ಸಾಣೆಯನ್ನು ಹೊಂದಿತು ಎನ್ನುವ ಹಾಗೆ ಸುಖಿಸು ನೀನು. ನನ್ನ ಈ ಐಶ್ವರ್ಯಲಕ್ಷ್ಮಿಯನ್ನು ಬರಸೆಳೆದು ನಿನ್ನ ಸೇವಕಿಯನ್ನಾಗಿ ಮಾಡಿಕೊ, ಪ್ರೀತಿಯಿಂದ ನನ್ನಲ್ಲಿ ಸುಖವಾಗಿರು. ನನ್ನ ಮಾತನ್ನು ಕೇಳಿ ಒಂದು ವಸ್ತವನ್ನು ಹೊದೆದುಕೊ ಎಲ್ ಕಮಲದಳದಂತೆ ಕಣ್ಣುಳ್ಳವಳೇ ಏಕವಸ್ತವನ್ನುಟ್ಟಿರುವೆ