________________
೩೮೪ | ಪಂಪಭಾರತಂ ಕಂll ಆ ಕಮಳಾಕರಮಂ ಪೊ
ಕ್ಯಾಕಾಶಧ್ವನಿಯನುಜದ ಕುಡಿದರಿಭೂಪಾ | ನೀಕಭಯಂಕರನುಂ ಗಡ
ಮೇಕೆಂದಳೆಯಂ ಬಬಿಲ್ಲು ಜೋಲ್ಲಂ ಧರೆಯೊಳ್ || ೪೧ ವಗ ಅನ್ನೆಗಮ ಯಮನಂದನಂ ಮೂವರ್ ತಮ್ಮಂದಿರ ಬರವಂ ಕಾಣದೆ ಭಗ್ನಮನನಾಗಿ ಭೀಮಸೇನನಂ ನೀಂ ಪೋಗಿ ಮೂವರುಮನೊಡಂಗೊಂಡು ನೀರಂ ಕೊಂಡು ಬಾಯೆಂದೊಡಂತೆಗಯ್ಯನೆಂದು ವಾಯುವೇಗದಿಂ ಬಂದು ಪುಂಡರೀಕಷಂಡೂಪಾಂತದೋಲ್ ವಿಗತಜೀವಿತರಾಗಿರ್ದ ಮೂವರನುಜರುಮಂ ಕಂಡಿದು ಮನುಜರಿಂದಾದುಪದ್ರವಮಲ್ಲ ಮೇನಾನುಮೊಂದು ದೇವತೋಪದ್ರವಮಾಗಿವೇಚ್ಚುಮೆಂದು
ಬಿಡದೆ ಕಡುಕೆಯ ದಿವ್ಯದ ನುಡಿಗೆ ಕಿವುಳ್ಳು ಕುಡಿದು ನೀರಂ ಭೀಮಃ | ಪಿಡಿದ ಗದವೆರಸು ಭೋಂಕನೆ
ಕೆಡದಂ ಗಿರಿಶಿಖರದೊಡನೆ ಕೆಡವಂತಾಗಳ್ || ವ|| ಅಂತು ನಾಲ್ವರುಂ ವಿಳಯಕಾಲವಾತಾಹತಿಯಿಂ ಕೆಡದ ಕುಲಗಿರಿಗಳಂತೆ ಕಡೆದು ಎಗತಜೀವಿತರಾಗಿರ್ದ ಪದದೊಳಕ್ಕೆ ದುರ್ಯೋಧನನ ಬೆಸದೊಳಾತನ ಪುರೋಹಿತಂ ಕನಕಸ್ವಾಮಿಯೆಂಬಂ ಪಾಂಡವರ್ಗಾಭಿಚಾರಮಾಗೆ ಬೇಟ್ಟ ಬೇಳ್ವೆಯ ಕೊಂಡದೊಳಗಣಿಂದಮಂಜನ ಪುಂಜದಂತಪ್ಪ ಮೆಯ್ಯುಂ ಸಿಡಿಲನಡಸಿದಂತಪ್ಪ ದಾಡೆಯುಮುರಿಯುರುಳಿಯಂತಪ್ಪ ಕಣ್ಣು ನೋಡಿ ಆಶ್ಚರ್ಯಪಟ್ಟನು. ೪೧. ಶತ್ರುರಾಜರ ಸಮೂಹಕ್ಕೆ ಭಯವನ್ನುಂಟುಮಾಡುವ ಅರ್ಜುನನೂ ಆ ಸರೋವರವನ್ನು ಪ್ರವೇಶಿಸಿ ಏನೆಂದು ತಿಳಿಯದೆ ಶಕ್ತಿಗುಂದಿ ಭೂಮಿಯಲ್ಲಿ ಜೋತುಬಿದ್ದನು. ವll ಅಷ್ಟರಲ್ಲಿ ಆ ಕಡೆ ಧರ್ಮರಾಯನು ಮೂವರು ತಮ್ಮಂದಿರ ಬರವನ್ನೂ ಕಾಣದೆ ಉತ್ಸಾಹಶೂನ್ಯನಾಗಿ (ಒಡೆದ ಮನಸ್ಸುಳ್ಳವನಾಗಿ) ಭೀಮಸೇನನನ್ನು 'ನೀನು ಹೋಗಿ ಮೂವರನ್ನೂ ಕೂಡಿಕೊಂಡು ನೀರನ್ನೂ ತೆಗೆದುಕೊಂಡು ಬಾ' ಎಂದನು, 'ಹಾಗೆಯೇ ಮಾಡುತ್ತೇನೆ' ಎಂದು ವಾಯು ವೇಗದಿಂದ ಬಂದು ಸರೋವರದ ಸಮೀಪದಲ್ಲಿ ಸತ್ತು ಹೋಗಿದ್ದ ಮೂವರು ತಮ್ಮಂದಿರನ್ನೂ ನೋಡಿ ಇದು ಮನುಷ್ಯರಿಂದಾದ ಕೇಡಲ್ಲ: ಯಾವುದಾದರೂ ದೇವತೆಯ ಹಿಂಸೆಯಾಗಿರಬೇಕೆಂದು ಊಹಿಸಿ ೪೨. ತನಗೂ ಅವಕಾಶಕೊಡದೆ ತಡೆದ ದೇವತೆಯ ಮಾತನ್ನು ಉದಾಸೀನಮಾಡಿ ನೀರನ್ನು ಕುಡಿದು ಹಿಡಿದ ಗದೆಯೊಡನೆಯೇ ಶಿಖರಸಹಿತವಾಗಿ ಪರ್ವತವು ಉರುಳುವಂತೆ (ಭೀಮ) ತಟಕ್ಕನೆ ಬಿದ್ದನು. ವ|| ಹಾಗೆ ನಾಲ್ಕು ಮಂದಿಯೂ ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಬಿದ್ದ ಕುಲಪರ್ವತಗಳಂತೆ ಕೆಡೆದು ಗತಪ್ರಾಣರಾಗಿದ್ದ ಸ್ಥಿತಿಯಲ್ಲಿ ಆ ಕಡೆ ದುರ್ಯೊಧನನ ಆಜ್ಞೆಯಿಂದ ಆತನ ಪುರೋಹಿತನಾದ ಕನಕಸ್ವಾಮಿಯೆಂಬುವನು ಪಾಂಡವರಿಗೆ ಮಾಟಮಾಡಲು ಒಂದು ಹೋಮಮಾಡುತ್ತಿದ್ದನು. ಆ ಯಜ್ಞಕುಂಡದಿಂದ ಕತ್ತಲೆಯ ಸಮೂಹದಂತಿರುವ ಶರೀರವೂ ಸಿಡಿಲನ್ನು ತುಂಬಿಕೊಂಡ ಹಾಗಿದ್ದ ಕೋರೆಹಲ್ಲುಗಳೂ ಬೆಂಕಿಯ ಉಂಡೆಯ ಹಾಗಿದ್ದ ಕಣ್ಣೂ