________________
ಅಷಮಾಶ್ವಾಸಂ | ೩೮೩ ಕಂ|| ತೋಯಜಷಂಡಮನಿದನಾ
ನಾಯತಿಯಿಂ ಕಾವೆನೆನ್ನ ಮಾತಿಂಗೆಲೆ ಕೌಂ | ತೇಯ ಮಜುಮಾತನಿತ್ತು ಮ
ದೀಯ ಸರೋವರದ ತೋಯಮಂ ಕುಡಿ ಕೊಂಡುಯ್ || ೩೯ ವಗ ಎಂಬುದುಮಾ ದಿವ್ಯವಚನಮನುಲ್ಲಂಘಿಸಿ ನೀರು ಪೋಪಿನಂ ನೀರು ಕುಡಿದು ಪದವಿಘಂಗಳಿಂ ತಮ್ಮಣ್ಣಂಗೆ ನೀರು ತೀವಿಕೊಂಡು ಸರೋವರದಿಂ ಪೂಣಮಟ್ಕಂದೆರಡಡಿಯ ನಿಡುತ ಗತಪ್ರಾಣನಾಗಿ ಬಿಟ್ಟಿರ್ದನಿತ್ತ ಧರ್ಮಪುತ್ರಂ ಸಹದೇವಂ ತಡದುದರ್ಕುಮ್ಮಳಿಸಿ ನಕುಲನ ಮೊಗಮಂ ನೋಡಿ ಸಹದೇವನೊಡಂಗೊಂಡು ನೀರಂ ಕೊಂಡು ಬೇಗಂ ಬಾಯೆಂದು ಪೇಟಿಡಂತಗೆಯ್ಯನೆಂದು ಸಹದೇವನ ಪೋದ ಪಜ್ಜೆಯನೆ ಪೋಗಿ ಕೊಳದ ತಡಿಯೊಳ್ ಬಿಟ್ಟಿರ್ದ ತಮ್ಮನಂ ಕಂಡು ಚೋದ್ಯಂಬಟ್ಟುಕ೦ll ತಾನುಂ ಸರೋಜಷಂಡಮ
ನಾನತರಿಪು ಪೊಕ್ಕು ದಿವ್ಯವಚನಮನದನಂ | ತೇನುಂ ಬಗೆಯದೆ ಕುಡಿದ ಜ್ಞಾನತೆಯಿಂ ನಂಜುಗುಡಿದರಂತಿರೆ ಕಡೆದಂ |
೪೦ ವಗೆ ಅನ್ನೆಗಂ ಯಮನಂದನನಿರ್ವರ ಬರವುಮಂ ಕಾಣದ ಶಂಕಾಕುಳಿತಚಿತ್ತನಾಗಿ ಕಿರೀಟಿಯಂ ಬೇಗಂ ಪೋಗಿ ನೀನಾ ಕೂಸುಗಳನೊಡಂಗೊಂಡು ನೀರಂ ಕೊಂಡು ತಡೆಯದೆ ಬಾಯೆಂಬುದುಮಂತಗೆಯೇನೆಂದು ಬಂದು ಕೊಳನ ತಡಿಯೋಳಚೇತನರಾಗಿ ಬಿಟ್ಟಿರ್ದ ತಮ್ಮಂದಿರಿರ್ವರುಮಂ ಕಂಡು ವಿಸ್ಮಯಂಬಟ್ಟು
೩೯. 'ಈ ಕೊಳವನ್ನು ನಾನು ಎಚ್ಚರದಿಂದ ಕಾಯುತ್ತಿದ್ದೇನೆ. ಎಲೈ ಕೌಂತೇಯನೆ ನನ್ನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟು ನನ್ನ ಸರೋವರದ ನೀರನ್ನು ಕುಡಿದುಕೊಂಡು ಹೋಗು' ವ|| ಎನ್ನಲು ಆ ದಿವ್ಯವಚನವನ್ನುಲ್ಲಂಘನೆ ಮಾಡಿ ಬಾಯಾರಿಕೆ ಹೋಗುವವರೆಗೂ ನೀರು ಕುಡಿದು ಕಮಲಪತ್ರಗಳ ಸಮೂಹದಲ್ಲಿ ತಮ್ಮಣ್ಣನಿಗೆ ನೀರನ್ನು ತುಂಬಿಕೊಂಡು ಸರೋವರದಿಂದ ಹೊರಟನು. ಒಂದೆರಡು ಹೆಜ್ಜೆಯಿಡುವಷ್ಟರಲ್ಲಿಯೇ ಕೆಳಗೆ ಬಿದ್ದು ಗತಪ್ರಾಣನಾದನು. ಎಷ್ಟು ಹೊತ್ತಾದರೂ ಸಹದೇವನು ಹಿಂತಿರುಗಿ ಬರದಿದ್ದುದರಿಂದ ಕಳವಳಪಟ್ಟು ಯುಧಿಷ್ಠಿರನು ನಕುಲನನ್ನು ನೋಡಿ ಸಹದೇವನನ್ನು ಕರೆದುಕೊಂಡು ನೀರನ್ನೂ ತೆಗೆದುಕೊಂಡು ಬಾ ಎಂದು ಹೇಳಿದನು. ೪೦. ಅವನೂ ಸರೋವರವನ್ನು ಪ್ರವೇಶಿಸಿ ಶತ್ರುಗಳನ್ನು ಅಧೀನಮಾಡಿ ಕೊಂಡಿದ್ದ ಆ ನಕುಲನು ಆ ದೇವತೆಯ ಮಾತನ್ನು ಹೇಗೂ ಲಕ್ಷ್ಯಮಾಡದೆ ಅವಿವೇಕದಿಂದ ಕುಡಿದು ವಿಷಪಾನಮಾಡಿದವರ ಹಾಗೆ ಬಿದ್ದನು. ವ|| ಆಗ ಧರ್ಮರಾಯನು ಇಬ್ಬರ ಬರುವಿಕೆಯನ್ನೂ ಕಾಣದೆ ಸಂದೇಹದಿಂದ ಕಲಕಿದ ಮನಸ್ಸುಳ್ಳವನಾಗಿ ಅರ್ಜುನನನ್ನು ನೀನು ಬೇಗಹೋಗಿ ಆ ಮಕ್ಕಳುಗಳನ್ನೊಡಗೊಂಡು ನೀರನ್ನೂ ತೆಗೆದುಕೊಂಡು ಸಾವಕಾಶಮಾಡದೆ ಬಾ ಎಂದನು. ಹಾಗೆಯೇ ಮಾಡುತ್ತೇನೆ ಎಂದು ಅರ್ಜುನನು ಬಂದು ಕೊಳದ ದಡದಲ್ಲಿ ಸತ್ತು ಬಿದ್ದಿದ್ದ ಇಬ್ಬರು ತಮ್ಮಂದಿರನ್ನು